ಯಾದಗಿರಿ: ಜಿಲ್ಲೆಯ ಬೇರೆ ಬೇರೆ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಮನೆ, ಬೈಕ್, ದೇವಸ್ಥಾನ ಹಾಗೂ ಕುರಿ ಕಳ್ಳತನದ 13 ಪ್ರತ್ಯೇಕ ಪ್ರಕರಣಗಳಲ್ಲಿ 10 ಮಂದಿ ಆರೋಪಿಗಳನ್ನು ಬಂಧಿಸಿದ ಪೊಲೀಸರು, ₹14.27 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ನಗರ ಠಾಣೆಯ ಪೊಲೀಸರು ಆಂಧ್ರಪ್ರದೇಶ ಮೂಲದ ಮಹೇಶ ಮೋಗ (ನಗದು ಕಳವು), ಪ್ರಶಾಂತ ಮತ್ತು ಶಿವಕುಮಾರ (ಮನೆಗಳ್ಳತನ), ಹತ್ತಿಗೂಡುರಿನ ಹಳ್ಳೆಪ್ಪ ನರಸಪ್ಪ (ಕಳ್ಳತನ), ಕಲಬುರಗಿಯ ಅಲ್ಲೂರ (ಬಿ) ಗ್ರಾಮದ ಮಹಾದೇವ ಹಣಮಂತ (ಬೈಕ್ ಕಳವು), ಮುಸ್ಟೂರಿನ ಅಶೋಕ ಕಾಶಪ್ಪ (ದೇವಸ್ಥಾನದಲ್ಲಿ ಕಳವು), ರಾಯಚೂರಿನ ಆಂಜನೇಯ ನರಸಪ್ಪ (ಮನೆಗಳ್ಳತನ), ವಡಗೇರಾ ಠಾಣೆ ಪೊಲೀಸರು ಬೇವಿನಹಳ್ಳಿಯ ಶಿವಪ್ಪ ಸಂಗಪ್ಪ (ದೇವಸ್ಥಾನ ಕಳವು) ಹಾಗೂ ಯಾದಗಿರಿ ಗ್ರಾಮೀಣ ಪೊಲೀಸರು ದಶರಥ ಚಿನ್ಯಾ (ಕುರಿಗಳ ಕಳವು) ಅವರನ್ನು ಬಂಧಿಸಿದ್ದಾರೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ‘ಜಿಲ್ಲೆಯಲ್ಲಿನ ಕಳ್ಳತನ ಪ್ರಕರಣಗಳನ್ನು ಗಂಭೀರವಾಗಿ ತೆಗೆದುಕೊಂಡು ಅನುಮಾನಾಸ್ಪದವಾಗಿ ಓಡುತ್ತಿದ್ದವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನ ಮಾಡಿದ್ದನ್ನು ಬಾಯಿ ಬಿಟ್ಟಿದ್ದಾರೆ. ಆರೋಪಿಗಳಿಂದ ನಗದು, ಚಿನ್ನಾಭರಣಗಳು, ಬೈಕ್ಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ’ ಎಂದರು.

‘ಅಲ್ಲೂರಿನ ಮಹಾದೇವ ಅವರು ಬೈಕ್ಗಳನ್ನು ಕದ್ದು ಶೋಕಿಯ ಜೀವನ ನಡೆಸುತ್ತಿದ್ದರು. ನಗರದ ಸಾರ್ವಜನಿಕ ಸ್ಥಳಗಳಲ್ಲಿ ನಿಂತಿದ್ದ ಬೈಕ್ಗಳನ್ನು ಕಳವು ಮಾಡಿದ್ದರು. ಅಷ್ಟೆ ಅಲ್ಲದೆ, ಬೆಂಗಳೂರಿಗೆ ಹೋಗಿದ್ದಾಗ ಕೋಣನಕುಂಟೆ ಠಾಣೆಯ ವ್ಯಾಪ್ತಿಯ ಜೆ.ಪಿ. ನಗರದ ಮನೆಯ ಮುಂದೆ ನಿಲ್ಲಿಸಿದ್ದ ಉಪನ್ಯಾಸಕರ ಬೈಕ್ ಕದ್ದುಕೊಂಡು ಬಂದಿದ್ದ. ಆತನಿಂದ ಐದು ಬೈಕ್ಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಹೇಳಿದರು.

‘13 ಪ್ರಕರಣಗಳನ್ನು ಭೇದಿಸಿ, 10 ಜನ ಆರೋಪಿಗಳನ್ನು ಬಂಧಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆದ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಪ್ರಶಂಸೆ ಪತ್ರ ಹಾಗೂ ನಗದು ಬಹುಮಾನ ನೀಡಲಾಗುವುದು’ ಎಂದು ಸಿಬ್ಬಂದಿ ಕಾರ್ಯವನ್ನು ಶ್ಲಾಘಿಸಿದರು.

ಈ ವೇಳೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಧರಣೇಶ, ಡಿವೈಎಸ್ಪಿಗಳಾದ ಸುರೇಶ್ ನಾಯಕ್, ಜಾವೀದ್ ಇನಾಮದಾರ, ಸಿಪಿಐ ಸುನಿಲ್ ವಿ.ಮೂಲಿಮನಿ, ಪಿಎಸ್ಐಗಳಾದ ಮೆಹಬೂಬ್, ಮಂಜನಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇದೇ ವೇಳೆ ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮದಡಿ ಕ್ರೆಡಿಟ್ ಆಕ್ಸೆಸ್ ಗ್ರಾಮೀಣ ಲಿಮಿಟೆಡ್ ನೌಕರರು ಪೊಲೀಸ್ ಇಲಾಖೆಗೆ 25 ಬ್ಯಾರಿಕೇಡ್ಗಳನ್ನು ಹಸ್ತಾಂತರಿಸಿದರು.

ಹೆಚ್ಚಿದ ಅಪಘಾತ ಸಾವು– ನೋವು’ ‘

ಹೆಲ್ಮೆಟ್ ಧರಿಸದೆ ಬೈಕ್ ಚಾಲನೆ ಓವರ್ ಸ್ಪೀಡ್ ಸಂಚಾರ ನಿಯಮಗಳ ಉಲ್ಲಂಘನೆ ಒಂದೇ ರಸ್ತೆ ಮೇಲೆ ಹೆಚ್ಚಿದ ವಾಹನ ದಟ್ಟಣೆಯಂತಹ ಇತರೆ ಕಾರಣಗಳಿಂದಾಗ ವಾಹನ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ. ಜೊತೆಗೆ ಸಾವು– ನೋವಿನಲ್ಲಿಯೂ ಏರಿಕೆಯಾಗಿದೆ’ ಎಂದು ಎಸ್ಪಿ ಪೃಥ್ವಿಕ್ ಶಂಕರ್ ಬೇಸರ ವ್ಯಕ್ತಪಡಿಸಿದರು. ‘2024ರಲ್ಲಿ 157 ಅಪಘಾತಗಳು ಸಂಭವಿಸಿದ್ದರೆ 2026ರಲ್ಲಿ ಅವು 166ಕ್ಕೆ ಏರಿಕೆಯಾಗಿವೆ. ಬೈಕ್ ಅಪಘಾತಗಳ ಪೈಕಿ ಹೆಲ್ಮೆಟ್ ಧರಿಸದೆ 87 ಮಂದಿ ಸಾವನ್ನಪ್ಪಿದ್ದಾರೆ. ಹೀಗಾಗಿ ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ ಸಂಚಾರ ನಿಯಮಗಳನ್ನು ಪಾಲನೆ ಮಾಡಬೇಕು’ ಎಂದರು.

ದೇವರ ಮೂರ್ತಿಗಳಲ್ಲಿನ ತಾಳಿಗಳೂ ಕಳವು

ಮುಸ್ಟೂರಿನ ಅಶೋಕ ಅವರು ಕನಕ ನಗರದಲ್ಲಿನ ಭಾಗ್ಯವಂತಿ ದೇವಸ್ಥಾನ ಬಾಗಿಲಿನಿ ಕೀಲಿ ಮುರಿದಿದ್ದರು. ಭಾಗ್ಯವಂತಿ ದೇವಿಯ ಚಿನ್ನದ ತಾಳಿಗಳು ಬೆಳ್ಳಿಯ ಲಿಂಗದಕಾಯಿ ಸೇರಿ ₹ 1.49 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕದ್ದೊಯ್ದಿದ್ದರು. ಶಿವಪ್ಪ ಅವರು ವಡಗೇರಾ ತಾಲ್ಲೂಕಿನ ತಡಿಬಿಡಿ ಗ್ರಾಮದ ದ್ಯಾವಮ್ಮ ಗುಡಿಯಲ್ಲಿ ಕಳ್ಳತನ ಮಾಡಿದ್ದರು. ದೇವಿಯ ಮೂರ್ತಿಗೆ ಹಾಕಿದ್ದ ಚಿನ್ನದ ತಾಳಿ ಮೂಗುತಿ ಸೇರಿ ₹ 95 ಸಾವಿರ ಚಿನ್ನಾಭರಣಗಳನ್ನು ಕಳವು ಮಾಡಿದ್ದು ಈಗ ಇಬ್ಬರೂ ಆರೋಪಿಗಳು ಬಂಧಿತರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.