ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಟೊಮೆಟೊ ಕೆಜಿಗೆ ₹20 ಇಳಿಕೆ

ಸೊಪ್ಪುಗಳು ಅಗ್ಗ, ಕೆಲ ತರಕಾರಿಗಳ ದರ ಯಥಾಸ್ಥಿತಿ
Published 23 ಜುಲೈ 2023, 6:56 IST
Last Updated 23 ಜುಲೈ 2023, 6:56 IST
ಅಕ್ಷರ ಗಾತ್ರ

ಯಾದಗಿರಿ: ಕಳೆದ ವಾರಕ್ಕಿಂತ ಈ ವಾರದಲ್ಲಿ ಒಂದು ಕೆಜಿ ಟೊಮೆಟೊಗೆ ₹ 20 ಇಳಿಕೆಯಾಗಿದ್ದು, ಹಸಿ ಶುಂಠಿ ಬೆಲೆ ಮತ್ತೆ ಏರಿಕೆಯಾಗಿದೆ.

ಹಸಿ ಶುಂಠಿ ಕಳೆದ ವಾರದ ₹ 220ರಿಂದ ₹ 240ಗೆ ಒಂದು ಕೆಜಿ ಮಾರಾಟವಾದರೆ, ಈ ವಾರ ₹ 240ರಿಂದ ₹260 ಕೆಜಿ ದರವಿದೆ. ಎಲೆಕೋಸು ಕಳೆದ ವಾರಕ್ಕಿಂತ ₹10 ಜಾಸ್ತಿಯಾಗಿ ₹50ರಿಂದ ₹60ಗೆ ಒಂದು ಕೆಜಿ ಬೆಲೆ ಇದೆ.

ಗುಣಮಟ್ಟದ ಬೆಳ್ಳುಳ್ಳಿ ಕಳೆದ ವಾರಕ್ಕಿಂತ ₹20 ದರ ಇಳಿಕೆಯಾಗಿದ್ದು, ಈ ವಾರ ₹100ರಿಂದ ₹120 ಕೆಜಿ ಇದೆ. ಅಲ್ಲದೇ ಕಳೆದ ವಾರವೂ ₹80ರಿಂದ ₹100ಗೆ ಮಾರಾಟ ಮಾಡುತ್ತಿದ್ದ ನುಗ್ಗೆಕಾಯಿ ₹70–₹80 ದರವಿದೆ. ಬದನೆಕಾಯಿ, ಸೌತೆಕಾಯಿ ಕೆಜಿಗೆ ತಲಾ ₹10 ದರ ಇಳಿಕೆಯಾಗಿದೆ.

ಆಲೂಗಡ್ಡೆ, ಈರುಳ್ಳಿ, ಬೆಂಡೆಕಾಯಿ, ದೊಣ್ಣೆಮೆಣಸಿನಕಾಯಿ, ಹೂಕೋಸು, ಚವಳೆಕಾಯಿ, ಗಜ್ಜರಿ, ಮೂಲಂಗಿ, ಸೋರೆಕಾಯಿ, ಬಿಟ್‌ರೂಟ್, ಹೀರೆಕಾಯಿ, ಹಾಗಲಕಾಯಿ, ಅವರೆಕಾಯಿ, ತೊಂಡೆಕಾಯಿ ಕಳೆದ ವಾರದಂತೆ ದರವಿದೆ. ಕರಿಬೇವು ಒಂದು ಕೆಜಿ ₹50, ಈರುಳ್ಳಿ ಸೊಪ್ಪು ₹70–₹80 ಬೆಲೆ ಇದೆ.

ಸೊಪ್ಪುಗಳ ದರ: ಕಳೆದ ವಾರದಂತೆ ಬೇರೆ ಕಡೆಯಿಂದ ತರಿಸಿಕೊಳ್ಳುವ ಸೊಪ್ಪುಗಳು ಮಾತ್ರ ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿದೆ. ಮೆಂತೆ, ಕೋತಂಬರಿ, ಸಬ್ಬಸಗಿ, ಪುದಿನಾ ದೊಡ್ಡ ಕಟ್ಟು ₹25ರಿಂದ ₹30ಕ್ಕೆ ಒಂದು ಮಾರಾಟ ಮಾಡಲಾಗುತ್ತಿದೆ. ಇನ್ನೂ ಸ್ಥಳೀಯವಾಗಿ ಸಿಗುವ ಪಾಲಕ್‌, ಪುಂಡಿ ಪಲ್ಯೆ, ರಾಜಗಿರಿ ಸೊಪ್ಪು ಸಣ್ಣ ಗಾತ್ರದ ಒಂದು ಕಟ್ಟು ಸೊಪ್ಪು ₹5ಕ್ಕೆ ಮಾಡಲಾಗುತ್ತಿದೆ.

ವಿಕಾಸ ಪವಾರ್‌ ತರಕಾರಿ ವ್ಯಾಪಾರಿ
ವಿಕಾಸ ಪವಾರ್‌ ತರಕಾರಿ ವ್ಯಾಪಾರಿ
ಸುರೇಶ ಚವಾಣ್‌ ಚಾಮನಳ್ಳಿ ತಾಂಡಾ ಗ್ರಾಹಕ
ಸುರೇಶ ಚವಾಣ್‌ ಚಾಮನಳ್ಳಿ ತಾಂಡಾ ಗ್ರಾಹಕ
ಕೆಲ ತರಕಾರಿ ಸೊಪ್ಪಗಳ ದರ ಇಳಿಕೆಯಾಗಿದ್ದು ಮಾರುಕಟ್ಟೆಗೆ ಆವಕ ಆಗಿದ್ದರಿಂದ ಬೆಲೆ ಇಳಿಕೆಯಾಗಿದೆ. ಸಗಟು ಬೆಲೆಯಲ್ಲೂ ತರಕಾರಿ ಬೆಲೆ ಇಳಿಕೆ ಕಂಡಿದೆ.
ವಿಕಾಸ ಪವಾರ್‌ ತರಕಾರಿ ವ್ಯಾಪಾರಿ
ಕಳೆದ ವಾರದಂತೆ ಈ ವಾರವೂ ಕೆಲ ತರಕಾರಿಗಳ ದರ ಯಥಾಸ್ಥಿತಿಯಲ್ಲಿದೆ. ಟೊಮೆಟೊ ದರ ಇಳಿಕೆಯಾಗಿದ್ದು ಸ್ವಲ್ಪ ಪಟ್ಟಿಗೆ ಗ್ರಾಹಕರಿಗೆ ಸಂತಸ ತಂದಿದೆ.
ಸುರೇಶ ಚವಾಣ್‌ ಚಾಮನಳ್ಳಿ ತಾಂಡಾ ಗ್ರಾಹಕ

ತರಕಾರಿ;ದರ (ಪ್ರತಿ ಕೆ.ಜಿಗೆ ₹ಗಳಲ್ಲಿ) ಟೊಮೆಟೊ;100–120 ಬೀನ್ಸ್;200–210 ಮೆಣಸಿನಕಾಯಿ;100-120 ಹಸಿ ಶುಂಠಿ;240;260 ಬೆಳ್ಳುಳ್ಳಿ;100;120 ನುಗ್ಗೆಕಾಯಿ;70–80 ಆಲೂಗಡ್ಡೆ;25–30 ಈರುಳ್ಳಿ;30–35 ಬದನೆಕಾಯಿ;50–60 ಬೆಂಡೆಕಾಯಿ;50–60 ದೊಣ್ಣೆಮೆಣಸಿನಕಾಯಿ;70–80 ಎಲೆಕೋಸು;50–60 ಹೂಕೋಸು;70–80 ಚವಳಿಕಾಯಿ;50–60 ಗಜ್ಜರಿ;70-80 ಸೌತೆಕಾಯಿ;50–60 ಮೂಲಂಗಿ;50-60 ಸೋರೆಕಾಯಿ;50–60 ಬಿಟ್‌ರೂಟ್;50-60 ಹೀರೇಕಾಯಿ;70-80 ಹಾಗಲಕಾಯಿ;70-80 ಅವರೆಕಾಯಿ;70–80 ತೊಂಡೆಕಾಯಿ;50–60

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT