ಮಂಗಳವಾರ, ಜನವರಿ 18, 2022
15 °C

ಯಾದಗಿರಿ | ಕಾಡು ಪ್ರಾಣಿ ಬೇಟೆ: ಇಬ್ಬರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೋಟ್ನಳಿ (ಯರಗೋಳ): ಗ್ರಾಮದ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಕಾಡು ಪ್ರಾಣಿಗಳ ಬೇಟೆಯಾಡುತ್ತಿದ್ದ ಒಬ್ಬ ಅಂತರರಾಜ್ಯ ಬೇಟೆಗಾರ ಮತ್ತು ಸ್ಥಳೀಯ ವಾಹನ ಚಾಲಕ ಸೇರಿ ಇಬ್ಬರನ್ನು ಬಂಧಿಸಲಾಗಿದೆ.

ಪ್ರಾದೇಶಿಕ ಅರಣ್ಯ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿಳ ತಂಡವು ದಾಳಿ ಮಾಡಿ, ಮೃತ 6 ಕಾಡು ಹಂದಿ ಹಾಗೂ ಒಂದು ಜಿಪ್ ವಶಪಡಿಸಿಕೊಂಡಿದೆ.

ಮಹಾರಾಷ್ಟ್ರ ಜಲಗಾಂವ್ ಮೂಲದ ಬಂಟಿ ಶಂಕರ್ ಬಾಬು ಹಾಗೂ ಮೋಟ್ನಳ್ಳಿ ತಾಂಡಾದ ವಾಹನ ಚಾಲಕ ಕುಮಾರ ಬಂಧಿತ ಆರೋಪಿಗಳು. ಜತೆಯಲ್ಲಿದ್ದ ಇಬ್ಬರು ಪರಾರಿ ಆಗಿದ್ದಾರೆ.

ಈ ತಂಡ ಕಚ್ಚಾ ಬಾಂಬ್ ತಯಾರಿಸಿ ಅರಣ್ಯ ಪ್ರದೇಶದಲ್ಲಿ ನೀರು ಇರುವ ಸ್ಥಳದಲ್ಲಿ ಇರಿಸುತ್ತಿದ್ದರು. ನೀರು ಕುಡಿಯಲು ಬರುವ ಪ್ರಾಣಿಗಳ ಸ್ಪರ್ಶದಿಂದ ಬಾಂಬ್‌ ಸ್ಫೋಟಗೊಳ್ಳುತ್ತಿತ್ತು. ಇದರಿಂದ ಪ್ರಾಣಿಗಳು ಸಾವನ್ನಪ್ಪುತ್ತಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿ ದ್ದಾರೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಸುನಿಲ್ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು