ವಡಗೇರಾ (ಯಾದಗಿರಿ): ಹೊಲದಲ್ಲಿ ವಿದ್ಯುತ್ ಸ್ಪರ್ಶಿಸಿ ಇಬ್ಬರು ರೈತರು ಹಾಗೂ ಒಂದು ಎತ್ತು ಮೃತಪಟ್ಟ ಘಟನೆ ತಾಲ್ಲೂಕಿನ ಬೆಂಡೆಬೆಂಬಳಿ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ.

ಬಸವರಾಜ ಕಿಲ್ಲನಕೇರಾ (35) ಎಂಬುವವರು ಎತ್ತು ಮೇಯಿಸಿಕೊಂಡು ಮರಳಿ ಮನೆಗೆ ಬರುವಾಗ ಮಾರ್ಗ ಮಧ್ಯದಲ್ಲಿ ಇರುವ ಹೊಲವೊಂದಕ್ಕೆ ಅಳವಡಿಸಿದ ಬೇಲಿಗೆ ಬೊರ್‌ವೆಲ್‌ಗೆ ವಿದ್ಯುತ್ ಪೂರೈಸುವ ವೈಯರ್‌ನಿಂದ ಬೆಲಿಗೆ ವಿದ್ಯುತ್ ಸ್ಪರ್ಶವಾಗಿದೆ ಎತ್ತು ಬೇಲಿಗೆ ಸಿಕ್ಕಾಕಿಕೊಂಡಿದೆ ಅದನ್ನು ಬಿಡಿಸಲು ಬಸವರಾಜ ಹೋದಾಗ ಅವರು ಸಾವನ್ನಪ್ಪಿದ್ದಾರೆ.

ಮತ್ತೊಬ್ಬ ರೈತ ಮೌಲಾನ ಮೊಮಿನ್ (28) ಎನ್ನುವರು ಹೊಲಕ್ಕೆ ಕ್ರಿಮಿನಾಶಕ ಸಿಂಪಡಿಸಿ ಮನೆಗೆ ಮರಳುವಾಗ ಎತ್ತು ಮತ್ತು ಬಸವರಾಜ ಒದ್ದಾಡುತ್ತಿರುವುದನ್ನು ಕಂಡು ಅವರನ್ನು ಬಿಡಿಸಲು ಹೋಗಿ ಅವರು ಸಹ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದಾರೆ.
ಪಂಪ್‌ಸೆಟ್‌ಗೆ ವಿದ್ಯುತ್ ಪೂರೈಕೆ ಮಾಡಲು ಕಂಬಗಳನ್ನು ಅಳವಡಿಸಿಕೊಂಡು ಪೂರೈಕೆ ಮಾಡಿಕೊಳ್ಳಬೇಕು ಆದರೆ ಇಲ್ಲಿ ಹೊಲದ ಮಾಲಿಕರು ವಿದ್ಯುತ್ ತಂತಿಯನ್ನು ಬೆಲಿಯ ಕಂಬಕ್ಕೆ ಜೋಡಿಸಿಕೊಂಡು ಹೊಗಿರುವುದರಿಂದ ವಿದ್ಯುತ್ ವೈಯರ್ ಹರಿದು ಬೇಲಿ ತಂತಿಗೆ ವಿದ್ಯುತ್ ಸ್ಪರ್ಶವಾಗಿದೆ.

ವಡಗೇರಾ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.