ಯಾದಗಿರಿ: ಮುಂದಿನ ಮೂವತ್ತು ವರ್ಷಗಳಲ್ಲಿನ ಜನಸಂಖ್ಯೆ, ನಗರದ ಬೆಳವಣಿಗೆ ಹಾಗೂ ಜಲಮೂಲಗಳಿಗೆ ಸೇರುವ ಕೊಳಚೆ ನೀರಿನ ನಿಯಂತ್ರಣಕ್ಕಾಗಿ ಯಾದಗಿರಿ ನಗರಸಭೆಯು ಸಮರ್ಪಕ ಒಳಚರಂಡಿ (ಯುಜಿಡಿ) ವ್ಯವಸ್ಥೆಗಾಗಿ ₹ 318 ಕೋಟಿ ಮೊತ್ತದ ವಿಸ್ತೃತ ಯೋಜನಾ ವರದಿಯನ್ನು (ಡಿಪಿಆರ್) ಸಿದ್ಧಪಡಿಸಿದೆ.

ನಗರದ ಸುತ್ತಲೂ ಕೈಗಾರಿಕಾ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಹೊಸ– ಹೊಸ ಲೇಔಟ್ಗಳು ಸಹ ನಿರ್ಮಾಣ ಆಗುತ್ತಿವೆ. ರಿಯಲ್ ಎಸ್ಟೇಟ್ ಉದ್ಯಮಿಗಳು ಲೇಔಟ್ಗಳಲ್ಲಿ ತಮ್ಮದೆಯಾದ ಒಳಚರಂಡಿ ಜಾಲಗಳನ್ನು ನಿರ್ಮಿಸಿಕೊಂಡಿದ್ದರೂ ಸಂಸ್ಕರಣೆಯಾಗದ ಕೊಳಚೆ ನೀರು ಜಲಮೂಲಗಳನ್ನು ಕಲುಷಿತಗೊಳಿಸುತ್ತಿದೆ. ಇದರ ಜತೆಗೆ ಈಗಿರುವ ಚರಂಡಿಗಳಿಂದಲೂ ಕೊಳಚೆ ನೀರು ಸಹ ನದಿಯನ್ನು ಸೇರ್ಪಡೆಯಾಗುತ್ತಿದೆ. ಇದೆಲ್ಲವನ್ನು ತಪ್ಪಿಸಲು ಸುಸಜ್ಜಿತವಾದ 272 ಕಿ.ಮೀ. ಉದ್ದದ ಒಳಚರಂಡಿ ಜಾಲ ನಿರ್ಮಾಣಕ್ಕೆ ಮುಂದಾಗಿದೆ ನಗರ ಸಭೆ.

ನಗರದಲ್ಲಿ ಪ್ರಸ್ತುತ ಸುಮಾರ 1 ಲಕ್ಷ ಜನಸಂಖ್ಯೆ ಇದೆ. 2025 ಮೂಲ ವರ್ಷವಾಗಿಟ್ಟುಕೊಂಡು 2040 ಅನ್ನು ನಿರೀಕ್ಷಿತ ವರ್ಷವಾಗಿ ಹಾಗೂ 2055 ಅನ್ನು ಅಂತಿಮ ವರ್ಷವಾಗಿ ಗುರಿ ಮಾಡಿಕೊಂಡು 23,800 ಮನೆಗಳಿಗೆ ಚರಂಡಿ ವ್ಯವಸ್ಥೆ ಕಲ್ಪಿಸುವ ಉದ್ದೇಶ ಹೊಂದಿದೆ. ಕೈಗಾರಿಕೆಗಳು, ವಾಣಿಜ್ಯ ಕಟ್ಟಡಗಳು ಸಹ ಇದರಲ್ಲಿ ಒಳಗೊಂಡಿದೆ. ಚರಂಡಿಯ ನೀರು ಒಂದೆಡೆ ಸೇರಿಸಿ ಅದನ್ನು ಸಂಸ್ಕರಣೆ ಮಾಡಲು ಹೊಸಳ್ಳಿ ರಸ್ತೆಯಲ್ಲಿ ಕೊಳಚೆ ನೀರಿನ ಶುದ್ಧೀಕರಣ ಘಟಕವನ್ನೂ ನಿರ್ಮಾಣ ಮಾಡುವ ಗುರಿಯೂ ಈ ಯೋಜನೆಯಲ್ಲಿದೆ.

ಬೃಹತ್ ಒಳಚರಂಡಿ ಜಾಲಕ್ಕೆ ₹ 318 ಕೋಟಿ ವೆಚ್ಚ ತಗುಲಲಿದೆ. ರಾಜ್ಯ ಸರ್ಕಾರದಿಂದ ₹ 222 ಕೋಟಿ (ಶೇ 70ರಷ್ಟು), ಹಣಕಾಸು ಸಂಸ್ಥೆಗಳಿಂದ ₹ 63.60 ಕೋಟಿ (ಶೇ 20) ಹಾಗೂ ಸ್ಥಳೀಯ ಸಂಸ್ಥೆಯು ₹ 31.80 ಕೋಟಿ (ಶೇ 10ರಷ್ಟು) ಅನುದಾನ ಪಡೆಯುವ ಲೆಕ್ಕಾಚಾರವನ್ನು ನಗರಸಭೆ ಹಾಕಿಕೊಂಡಿದೆ. ₹ 318 ಕೋಟಿ ಮೊತ್ತದ ಡಿಪಿಆರ್ ಅನ್ನು ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಸಿ ಅನುಮೋದನೆ ಪಡೆಯಲು ಎಲ್ಲಾ ರೀತಿಯ ಸನ್ನದ್ಧು ಮಾಡಿಕೊಂಡಿದೆ.

‘ನಗರಸಭೆಯ ವ್ಯಾಪ್ತಿಯನ್ನು ಒಳಗೊಂಡು ಅತ್ಯಾಧುನಿಕ ಒಳಚರಂಡಿ ಮತ್ತು ಒಳಚರಂಡಿ ನೀರು ಸಂಸ್ಕರಣಾ ಘಟಕದ ಡಿಪಿಆರ್ ಸಿದ್ಧವಾಗಿದೆ. ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮವು (ಕೆಯುಐಡಿಎಫ್ಸಿ) ಸಹ ₹ 55 ಕೋಟಿ ಮೊತ್ತದ ಯುಜಿಡಿಯ ಡಿಪಿಆರ್ ಸಿದ್ಧಪಡಿಸಿದೆ. ಕೆಯುಐಡಿಎಫ್ಸಿ ಡಿಪಿಆರ್ನಲ್ಲಿ ಪ್ರಸ್ತಾಪಿಸಿರುವ ಚರಂಡಿಯ ಜಾಲವನ್ನು ನಮ್ಮ ಡಿಪಿಆರ್ನಿಂದ ತೆಗೆದು, ವರದಿಯನ್ನು ಪರಿಷ್ಕರಣೆ ಮಾಡಿ ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಕೆ ಮಾಡಲಾಗುವುದು. ಎರಡು ವಾರಗಳಲ್ಲಿ ಡಿಪಿಆರ್ನ ಮಾಹಿತಿಯನ್ನು ಹಂಚಿಕೊಳ್ಳುವುದಾಗಿ ಕೆಯುಐಡಿಎಫ್ಸಿ ಅಧಿಕಾರಿಗಳು ತಿಳಿಸಿದ್ದಾರೆ’ ಎನ್ನುತ್ತಾರೆ ನಗರಸಭೆಯ ಸಹಾಯಕ ಎಂಜಿನಿಯರ್ ರಾಜಕುಮಾರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.