ಕಲಬುರಗಿ: ಬಹುದೊಡ್ಡ ವೈಚಾರಿಕ ಕ್ರಾಂತಿ ಶರಣ ಚಳವಳಿಗೆ ಸಾಕ್ಷಿಯಾಗಿದ್ದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪರಿಶಿಷ್ಟರ ಮೇಲಿನ ದೌರ್ಜನ್ಯ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿವೆ.

2023ರಲ್ಲಿ 294 ಪ್ರಕರಣಗಳು ದಾಖಲಾಗಿದ್ದವು. 2024ರ ಜನವರಿಯಿಂದ 2025ರ ಜನವರಿವರೆಗೂ 13 ತಿಂಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳ ವಿವಿಧ ಪೊಲೀಸ್ ಠಾಣೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ (ದೌರ್ಜನ್ಯ ತಡೆ) ಕಾಯ್ದೆ ಅಡಿ 373 ಪ್ರಕರಣಗಳು ದಾಖಲಾಗಿವೆ.

2011ರ ಜನಗಣತಿಯಂತೆ ಒಟ್ಟು ಜನಸಂಖ್ಯೆಯಲ್ಲಿ ಶೇ 20.79 ಪರಿಶಿಷ್ಟ ಜಾತಿ ಮತ್ತು ಶೇ 19.03ರಷ್ಟು ಪರಿಶಿಷ್ಟ ಪಂಗಡದವರನ್ನು ಹೊಂದಿರುವ ರಾಯಚೂರು ಜಿಲ್ಲೆಯಲ್ಲಿ ಹೆಚ್ಚು, ಅಂದರೆ 95 ಪ್ರಕರಣಗಳು ದಾಖಲಾಗಿವೆ. ರೈಲ್ವೆ ಪೊಲೀಸ್ ಠಾಣೆಯಲ್ಲೂ ಒಂದು ಪ್ರಕರಣ ದಾಖಲಾಗಿದೆ.

2024ರ ಆಗಸ್ಟ್ನಿಂದ 2025ರ ಜನವರಿ ಅಂತ್ಯದವರೆಗೂ 6 ತಿಂಗಳಲ್ಲಿ 166 ಪ್ರಕರಣಗಳು ದಾಖಲಾಗಿವೆ. ಈ ಅವಧಿಯಲ್ಲಿ 2025ರ ಜನವರಿಯಲ್ಲಿ ಹೆಚ್ಚು ಅಂದರೆ 36 ಪ್ರಕರಣಗಳು ದಾಖಲಾಗಿವೆ.

2024ರ ಆಗಸ್ಟ್ನಲ್ಲಿ 27, ಸೆಪ್ಟೆಂಬರ್ನಲ್ಲಿ 27, ಅಕ್ಟೋಬರ್ನಲ್ಲಿ 31, ನವೆಂಬರ್ನಲ್ಲಿ 11 ಹಾಗೂ ಡಿಸೆಂಬರ್ನಲ್ಲಿ 34 ಪ್ರಕರಣಗಳು ದಾಖಲಾಗಿವೆ.

ಜಾತಿನಿಂದನೆ, ಅಸ್ಪೃಶ್ಯತೆ ಆಚರಣೆ, ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ ಹಾಗೂ ಗಲಾಟೆ ಸೇರಿ ವಿವಿಧ ಕಾರಣಗಳಿಗಾಗಿ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.

ಪ್ರಕರಣಗಳ ಸಂಖ್ಯೆ ಹೆಚ್ಚಳ: 2023ಕ್ಕೆ ಹೋಲಿಸಿದರೆ 2024ರಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. 43 ಪ್ರಕರಣಗಳು ಹೆಚ್ಚಾಗಿ ವರದಿಯಾಗಿವೆ. 2023ರಲ್ಲಿ ಏಳು ಜಿಲ್ಲೆಗಳಲ್ಲಿ 294 ಪ್ರಕರಣಗಳು ದಾಖಲಾಗಿದ್ದವು. 81 ಪ್ರಕರಣಗಳು ದಾಖಲಾಗುವ ಮೂಲಕ ರಾಯಚೂರು ಮೊದಲ ಸ್ಥಾನದಲ್ಲಿತ್ತು.

‘ಪ್ರಭಾವಕ್ಕೆ ಒಳಗಾಗದೆ ಬಂಧಿಸಿ’: ‘ಇಂದಿಗೂ ಪರಿಶಿಷ್ಟರನ್ನು ಸಮಾಜ ಹೇಗೆ ನಡೆಸಿಕೊಳ್ಳುತ್ತದೆ ಎನ್ನುವುದನ್ನು ಪ್ರಕರಣಗಳು ಪ್ರತಿಫಲಿಸುತ್ತದೆ. ದೌರ್ಜನ್ಯ ನಡೆಸಿದವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವುದಷ್ಟೇ ಅಲ್ಲ. ಅವರ ವಿರುದ್ಧ ಸರ್ಕಾರ ಕಠಿಣ ಕಾನೂನು ಕ್ರಮ ಆಗುವಂತೆ ನೋಡಿಕೊಳ್ಳಬೇಕು’ ಎಂದು ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ರಾಜ್ಯ ಸಂಚಾಲಕ ಅರ್ಜುನ ಭದ್ರೆ ಒತ್ತಾಯಿಸುತ್ತಾರೆ.

‘ಎಷ್ಟೋ ಪ್ರಕರಣಗಳಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿಲ್ಲ. ಪೊಲೀಸರು ಸಹ ಪ್ರಭಾವಕ್ಕೆ ಒಳಗಾಗದೆ ದೌರ್ಜನ್ಯಕ್ಕೆ ಕಾರಣರಾದವರನ್ನು ಬಂಧಿಸಬೇಕು. ಸಮಾಜ ಕಲ್ಯಾಣ ಇಲಾಖೆ ಅರಿವು ಮೂಡಿಸುವ ಕೆಲಸ ಚುರುಕುಗೊಳಿಸಬೇಕು’ ಎಂದು ಅವರು ಆಗ್ರಹಿಸುತ್ತಾರೆ.

ಪರಿಶಿಷ್ಟರ ಮೇಲಿನ ದೌರ್ಜನ್ಯದ ವಿರುದ್ಧ ಹಾಗೂ ಕಾಯ್ದೆ ಕುರಿತು ಬೀದಿ ನಾಟಕಗಳಂಥ ಚಟುವಟಿಕೆಗಳ ಮೂಲಕ ಸಮಾಜ ಕಲ್ಯಾಣ ಇಲಾಖೆಯಿಂದ ನಿರಂತರವಾಗಿ ಅರಿವು ಮೂಡಿಸಲಾಗುತ್ತಿದೆ
ಅಲ್ಲಾಬಕಷ್ ಹೆಚ್ಚುವರಿ ನಿರ್ದೇಶಕ ಸಮಾಜ ಕಲ್ಯಾಣ ಇಲಾಖೆ ಕಲಬುರಗಿ

ನಿಯಮಿತವಾಗಿ ನಡೆಯದ ಸಮಿತಿ ಸಭೆ

ದೌರ್ಜನ್ಯ ತಡೆಗೆ ಉಪ ವಿಭಾಗ ಜಿಲ್ಲಾಮಟ್ಟದಲ್ಲಿ ಜಾಗೃತಿ ಮೇಲುಸ್ತುವಾರಿ ಸಮಿತಿ ರಚಿಸಲಾಗುತ್ತದೆ. ಈ ಸಮಿತಿಗಳು ದೌರ್ಜನ್ಯಕ್ಕೊಳಗಾದ ಸಂತ್ರಸ್ತರಿಗೆ ಧೈರ್ಯ ತುಂಬಿ ಪುನರ್ ವಸತಿ ಕಲ್ಪಿಸುವುದು ಹಾಗೂ ಕಾಯ್ದೆ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡುತ್ತವೆ. ಉಪ ವಿಭಾಗ ಮತ್ತು ಜಿಲ್ಲಾಮಟ್ಟದಲ್ಲಿಯ ಸಮಿತಿ ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸುವುದು ಕಡ್ಡಾಯ. ಆದರೆ ನಿಯಮಿತವಾಗಿ ಸಭೆ ನಡೆಸುವುದಿಲ್ಲ ಎಂದು ಪರಿಶಿಷ್ಟ ಸಮುದಾಯದ ಮುಖಂಡರು ದೂರುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.