ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಗ ನಿಯಂತ್ರಣಕ್ಕೆ ಲಸಿಕೆ ಹಾಕಿಸಿ

ಕಾಲುಬಾಯಿ ರೋಗ ಲಸಿಕೆಗೆ ಜಿಲ್ಲಾಧಿಕಾರಿ ಚಾಲನೆ
Last Updated 6 ಜನವರಿ 2023, 8:19 IST
ಅಕ್ಷರ ಗಾತ್ರ

ಯಾದಗಿರಿ: ಜಾನುವಾರುಗಳಿಗೆ ಕಾಲು- ಬಾಯಿ ರೋಗ ಬಂದಾಗ ಚಿಕಿತ್ಸೆಗೆ ಬದಲಾಗಿ ಲಸಿಕೆಯೇ ಮುಖ್ಯವಾಗಿದೆ ಎಂಬುದನ್ನು ರೈತರು ಅರಿಯಬೇಕು. ಪಶು ವೈದ್ಯರು ಮನೆಮನೆಗೆ ಲಸಿಕಾಕರಣಕ್ಕೆ ಬಂದಾಗ ರೈತರು ತಮ್ಮ ಜಾನುವಾರುಗಳಿಗೆ ಮರೆಯದೇ ಲಸಿಕೆ ಹಾಕಿಸಬೇಕು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅಭಿಪ್ರಾಯಪಟ್ಟರು.

ನಗರದ ಜಿಲ್ಲಾ ಪಾಲಿಕ್ಲಿನಿಕ್‌ ಆಸ್ಪತ್ರೆಯಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ 3ನೇ ಸುತ್ತಿನ ಕಾಲು-ಬಾಯಿ ರೋಗ ನಿಯಂತ್ರಣ ಲಸಿಕಾ ಅಭಿಯಾನಕ್ಕೆ ಗುರುವಾರ ಗೋಪೂಜೆ ನೆರವೇರಿಸಿ, ಹಸಿರು ನಿಶಾನೆ ತೋರಿ ಮಾತನಾಡಿದರು.

ರೈತರು ಕಾಲುಬಾಯಿ ರೋಗ ಲಸಿಕೆ ಹಾಕಿಸಿ ರೋಗ ಬಾರದಂತೆ ಜಾನುವಾರು ಗಳನ್ನು ರಕ್ಷಿಸಬೇಕು. ಜಿಲ್ಲೆಯನ್ನು ಕಾಲು ಬಾಯಿ ರೋಗ ಮುಕ್ತ ಮಾಡಲು ಸಹಕರಿಸಬೇಕು ಎಂದರು.

ಜಿಲ್ಲೆಯಾದ್ಯಂತ ಜನವರಿ 5ರಿಂದ ಜನವರಿ 31ರ ವರೆಗೆ ಎಲ್ಲಾ ಹಸು, ಎಮ್ಮೆ, ಎತ್ತು, ಕರುಗಳಿಗೆ ಲಸಿಕೆ ನೀಡ ಲಾಗುತ್ತದೆ. ಈ ಲಸಿಕಾಕರಣ ಶೇಕಡಾ ನೂರರಷ್ಟು ಗುರಿ ಸಾಧಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಸಂಬಂಧಿಸಿದ ಅಧಿ ಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಈ ಸಂದರ್ಭದಲ್ಲಿ ಯಾದಗಿರಿ ತಾಲ್ಲೂಕಿನ ಮುಖ್ಯ ಪಶುವೈದ್ಯಾಧಿಕಾರಿ ಡಾ.ಶರಣಭೂಪಾಲರೆಡ್ಡಿ, ತಾಲ್ಲೂಕಿನ ಪಶುವೈದ್ಯಾಧಿಕಾರಿಗಳು, ಇಲಾಖೆಯ ತಂಡಗಳ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT