ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಚಳಿಗಾಲದಲ್ಲಿ ಕಾಯಿಪಲ್ಯೆ ಬೆಲೆ ಇಳಿಕೆ

ಟೊಮೆಟೊ, ದೊಣ್ಣೆಮೆಣಸಿನಕಾಯಿ, ತೊಂಡೆಕಾಯಿ ಕೆಜಿಗೆ ₹5ದರ ಇಳಿಕೆ
Last Updated 10 ಡಿಸೆಂಬರ್ 2022, 19:31 IST
ಅಕ್ಷರ ಗಾತ್ರ

ಯಾದಗಿರಿ: ಟೊಮೆಟೊ, ದೊಣ್ಣೆಮೆಣಸಿನಕಾಯಿ, ತೊಂಡೆಕಾಯಿ ಕೆಜಿಗೆ ₹5ರಿಂದ ₹10 ದರ ಇಳಿಕೆಯಾಗಿದೆ.

ನಗರದ ವಿವಿಧ ಮಾರುಕಟ್ಟೆಗಳಲ್ಲಿ ಕಳೆದ ವಾರದಂತೆ ಈ ವಾರವೂ ತರಕಾರಿ, ಸೊಪ್ಪುಗಳ ಬೆಲೆ ಸ್ಥಿರವಾಗಿದೆ.

ಚವಳೆಕಾಯಿ, ಹಾಗಲಕಾಯಿ ಬೆಲೆ ಮಾತ್ರ ₹5ರಿಂದ ₹10 ಬೆಲೆ ಹೆಚ್ಚಳವಾಗಿದೆ.

ಕಳೆದ ಒಂದು ತಿಂಗಳಿಂದ ಟೊಮೆಟೊ ಇಳಿಕೆಯತ್ತ ಸಾಗಿದೆ. ಈಗ ಟೊಮೆಟೊ ಒಂದು ಕೆಜಿಗೆ ₹20ರಿಂದ 25 ದರವಿದೆ.

ಚಳಿ ತೀವ್ರವಾಗಿರುವುದರಿಂದ ತರಕಾರಿ ಬೆಲೆಗಳ ಇಳಿಕೆ ಕಡಿಮೆಯಾಗಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.

ಸೊಪ್ಪುಗಳ ದರ ಸ್ಥಿರ
ಮೆಂತ್ಯೆ ದೊಡ್ಡ ಕಟ್ಟು ₹15, ಸಣ್ಣ ಕಟ್ಟು ₹10 ದರವಿದೆ. ಉಳಿದಂತೆ

ಸಬ್ಬಸಗಿ, ಪಾಲಕ್‌, ಪುಂಡಿ ಪಲ್ಯೆ, ರಾಜಗಿರಿ, ₹5ಗೆ ಒಂದು ಕಟ್ಟು ಸೊಪ್ಪು ಮಾರಾಟ ಮಾಡಲಾಗುತ್ತಿದೆ. ಕೊತಂಬರಿ ₹15–20 ಒಂದು ಕಟ್ಟು, ಪುದೀನಾ ₹15–20 ಒಂದು ಕಟ್ಟು ಮಾರಾಟ ಮಾಡಲಾಗುತ್ತಿದೆ. ಕಳೆದ ವಾರಕ್ಕಿಂತ ಈ ವಾರ ₹5 ಇಳಿಕೆಯಾಗಿದೆ.

ಕರಿಬೇವು ₹80–90 ಕೆಜಿ, ಉತ್ತಮ ಗುಣಮಟ್ಟದ ಬೆಳ್ಳುಳ್ಳಿ ₹100–120, ಶುಂಠಿ ₹80–90 ದರ ಸ್ಥಿರವಾಗಿದೆ. ನಿಂಬೆಹಣ್ಣು ಸಣ್ಣ ಗಾತ್ರದು ₹10ಗೆ ನಾಲ್ಕು, ದೊಡ್ಡದು ಮೂರು ಮಾರಾಟ ಮಾಡಲಾಗುತ್ತಿದೆ.

ತರಕಾರಿ; ದರ (ಪ್ರತಿ ಕೆ.ಜಿಗೆ ₹ಗಳಲ್ಲಿ)
ಟೊಮೆಟೊ; 20–25
ಆಲೂಗಡ್ಡೆ; 30–35
ಈರುಳ್ಳಿ; 35–40
ಬದನೆಕಾಯಿ; 50–60
ಬೆಂಡೆಕಾಯಿ; 40–50
ದೊಣ್ಣೆಮೆಣಸಿನಕಾಯಿ; 50–60
ಎಲೆಕೋಸು; 40–50
ಹೂಕೋಸು; 40–50
ಚವಳೆಕಾಯಿ; 60–70
ಬೀನ್ಸ್; 70–80
ಗಜ್ಜರಿ; 70-80
ಸೌತೆಕಾಯಿ; 50–60
ಮೂಲಂಗಿ; 40-50
ಮೆಣಸಿನಕಾಯಿ; 50-60
ಸೋರೆಕಾಯಿ; 40–50
ಬಿಟ್‌ರೂಟ್; 60-70
ಹೀರೆಕಾಯಿ; 50-60
ಹಾಗಲಕಾಯಿ; 50-60
ತೊಂಡೆಕಾಯಿ; 40-50
ಅವರೆಕಾಯಿ; 50–60

***

ವಿವಿಧ ಮಾರುಕಟ್ಟೆಗಳಿಗೆ ತರಕಾರಿ ಆವಕ ಚೆನ್ನಾಗಿದೆ. ಇದರಿಂದ ಬೆಲೆಯೂ ಇಳಿಕೆಯಾಗಿದೆ. ಇದಕ್ಕೆ ಚಳಿಗಾಲವೂ ಕಾರಣವಾಗಿದೆ.
–ರಫೀಕ್, ತರಕಾರಿ ವ್ಯಾಪಾರಿ

***

ತರಕಾರಿ, ಸೊಪ್ಪುಗಳ ಬೆಲೆ ಇಳಿಕೆಯಾಗಿದ್ದರಿಂದ ಗ್ರಾಹಕರು ಹೆಚ್ಚು ತರಕಾರಿ ಖರೀದಿಸುತ್ತಿದ್ದಾರೆ. ವ್ಯಾಪಾರಿಗಳು ಬೆಲೆ ಇಳಿಕೆ ಮಾಡಿದ್ದಾರೆ.
ಕಿಶನ್, ಗ್ರಾಹಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT