ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರ ಪಟ್ಟಿ: 28,593 ಅರ್ಜಿ ಸ್ವೀಕಾರ

Last Updated 8 ಜನವರಿ 2021, 16:32 IST
ಅಕ್ಷರ ಗಾತ್ರ

ಯಾದಗಿರಿ: ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ, ತಿದ್ದುಪಡಿ ಸೇರಿದಂತೆ ವಿವಿಧ ನಮೂನೆಗಳಲ್ಲಿ 28,593 ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ಜಿಲ್ಲಾ ಮತದಾರರ ಪಟ್ಟಿಯ ವೀಕ್ಷಕ ಪಿ.ರಾಜೇಂದ್ರ ಚೋಳನ್‌ ಹೇಳಿದರು.

ಭಾವಚಿತ್ರ ಇರುವ ಮತದಾರರ ಪಟ್ಟಿ ಪರಿಶೀಲನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯ 4 ವಿಧಾನಸಭಾ ಮತಕ್ಷೇತ್ರಗಳಲ್ಲಿ ಫೆ.7, 2020ರಿಂದ ಡಿ.31, 2020 ರವರೆಗೆ 6, 6ಎ, 7, 8 ಹಾಗೂ 8 ಎ ನಮೂನೆಗಳಲ್ಲಿ ಒಟ್ಟಾರೆ 45,247 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಅರ್ಜಿಗಳನ್ನು ಪರಿಷ್ಕರಣೆಗೆ ಸ್ವೀಕರಿಸಿ ಅವುಗಳ ಪೈಕಿ 35,733 ಅರ್ಜಿಗಳನ್ನು ಅಪ್ಡೇಟ್ ಮಾಡಲಾಗಿದೆ ಎಂದರು.

ಜಿಲ್ಲೆಯಲ್ಲಿರುವ 9,652 ಸಾವಿರ ವಿಕಲಚೇತನ ಮತದಾರರನ್ನು ಮತದಾರರ ಪಟ್ಟಿಯಲ್ಲಿ ಗುರುತಿಸಲಾಗಿದೆ. ಮತದಾರರ ಪಟ್ಟಿಯಿಂದ ಹೆಸರು ಕಡಿಮೆ ಮಾಡುವುದು, ತಿದ್ದುಪಡಿ, ಸ್ಥಳಾಂತರ, ಬದಲಾವಣೆಗೆ ಸಂಬಂಧಿಸಿದ ಅರ್ಜಿಗಳನ್ನು ಇತ್ಯರ್ಥ ಪಡಿಸುವಾಗ ಜಾಗರೂಕತೆ ವಹಿಸುವಂತೆ ಹೇಳಿದರು.

ಯುವ ಮತದಾರರು ಸೇರಿದಂತೆ ಇತರ ಮತದಾರರ ನೋಂದಣಿ ಪ್ರಮಾಣ ಹೆಚ್ಚಿಸಲು ಆದ್ಯತೆ ನೀಡಬೇಕು. ಸಾರ್ವಜನಿಕ ದೂರುಗಳ ನಿವಾರಣೆಗೆ ಚುನಾವಣಾ ಆಯೋಗದ ಮಾರ್ಗಸೂಚಿ ಅನ್ವಯ ವ್ಯವಸ್ಥೆ ಕಲ್ಪಿಸುವಂತೆ ತಿಳಿಸಿದರು.

ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಬಹುತೇಕ ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದೆ. ಅರ್ಜಿಗಳ ಇತ್ಯರ್ಥಕ್ಕೆ ನಿಯಮಾವಳಿ ಪ್ರಕಾರ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ತಿಳಿಸಿದರು.

ಐಎಎಸ್ ಪ್ರೊಬೇಷನರಿ ಅಶ್ವಿಜಾ, ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ, ಉಪವಿಭಾಗಾಧಿಕಾರಿ ಶಂಕರಗೌಡ ಸೋಮನಾಳ, ಜಿಲ್ಲೆಯ ತಹಶೀಲ್ದಾರ್‌ಗಳಾದ ಚನ್ನಮಲ್ಲಪ್ಪ ಘಂಟಿ, ಸುಬ್ಬಣ್ಣ ಜಮಖಂಡಿ, ಸುರೇಶ ಅಂಕಲಗಿ, ಸಂಗಮೇಶ ಜಿಡಗಿ, ಮಹಿಬೂಬಿ, ವಿನಾಯಕ, ಎಸ್‌ಟಿಟಿ ಸಹಾಯಕ ನಿರ್ದೇಶಕ ಸತೀಶ್, ಜಿ.ಪಂ. ಎನ್‌ಆರ್‌ಡಿಎಂಎಸ್‌ ಸಿದ್ದಾರೆಡ್ಡಿ, ಪರಶುರಾಮ, ಖಲೀಲ ಸಾಹೇಬ, ಭೀಮೇಶಿ, ಶಿಲ್ಪಾ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT