ಯಾದಗಿರಿ ಜಿಲ್ಲೆ ಗುರುಮಠಕಲ್ ತಾಲ್ಲೂಕಿನ ಗಾಜರಕೋಟ ಗ್ರಾಮದ ವಾಂತಿ ಭೇದಿಯಿಂದ 27 ಜನ ಅಸ್ವಸ್ಥಗೊಂಡಿದ್ದು, ಸದ್ಯ 23 ಜನ ಗುಣಮುಖರಾಗಿದ್ದಾರೆ ಇನ್ನುಳಿದಂತೆ, ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ಸಮುದಾಯ ಆರೋಗ್ಯದ ಕೇಂದ್ರದಲ್ಲಿ ತಲಾ 1, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಬ್ಬರು ಸೇರಿ ಒಟ್ಟು ನಾಲ್ವರು ಚಿಕಿತ್ಸೆ ಪಡೆಯುತ್ತಿದ್ದಾರೆ.ಸದ್ಯ ಪರಿಸ್ಥಿತಿ ಹತೋಟಿಗೆ ಬಂದಿದ್ದು, ಸಮಸ್ಯೆ ಉಲ್ಬಣಗೊಳ್ಳದಂತೆ ಸೂಕ್ತ ಕ್ರಮಗಳು ಕೈಗೊಂಡಿದ್ದು ಮತ್ತು ಸಕಾಲದಲ್ಲಿ ಮುಂಜಾಗ್ರತೆ ಕ್ರಮ, ವೈದ್ಯಕೀಯ ಆರೈಕೆ ಲಭ್ಯವಾದ ಕಾರಣ ಪರಿಸ್ಥಿತಿ ಹತೋಟಿಯಲ್ಲಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು.