ಯಾದಗಿರಿ: ಕಳೆದ ವಾರದಿಂದ ಈ ವಾರಕ್ಕೆ ತರಕಾರಿ ದರ ಹೋಲಿಕೆ ಮಾಡಿದರೆ ಕೆಲ ತರಕಾರಿಗಳ ಬೆಲೆ ₹20ರಿಂದ 40 ಏರಿಕೆಯಾಗಿದೆ.

ಬದನೆಕಾಯಿ, ಚವಳೆಕಾಯಿ, ಟೊಮೆಟೊ, ದೊಣ್ಣೆಮೆಣಸಿನಕಾಯಿ, ತೊಂಡೆಕಾಯಿ, ಬೆಂಡೆಕಾಯಿ, ಗೋಬಿ ದರ ಏರಿಕೆಯಾಗಿದೆ. ಕಳೆದ ವಾರದಂತೆ ಈ ವಾರವೂ ಆಲೂಗಡ್ಡೆ, ಬೀನ್ಸ್, ಈರುಳ್ಳಿ, ಕ್ಯಾಬೇಜ್, ಮೆಣಸಿನಕಾಯಿ, ಸೋರೆಕಾಯಿ, ಬೀಟ್ರೂಟ್, ಹೀರೆಕಾಯಿ, ಹಾಗಲಕಾಯಿ ದರ ಯಥಾಸ್ಥಿತಿ ಇದೆ.

ಗಜ್ಜರಿ ಕಳೆದ ವಾರ ₹100 ಕೇ.ಜಿ. ಇತ್ತು. ಈ ವಾರ ₹80 ಕೇ.ಜಿ. ಆಗಿದೆ. ಮೂಲಂಗಿ ಕಳೆದ ವಾರ ₹60 ಕೇ.ಜಿ. ಇತ್ತು. ಈ ವಾರ ₹20 ಕಡಿಮೆಯಾಗಿ ₹40 ಆಗಿದೆ.

ದರ ಇಳಿಕೆಯಾಗಬೇಕಿತ್ತು: ‘ಮುಂಗಾರು ಉತ್ತಮವಾಗಿ ಸುರಿದಿದ್ದು, ತೋಟಗಾರಿಕೆಗೆ ಬೆಳೆಗಳು ಚೆನ್ನಾಗಿ ಬಂದಿದ್ದವು. ಆದರೆ, ಭಾರಿ ಮಳೆಯಿಂದ ಎಲ್ಲ ಬೆಳೆಗಳು ನೆಲಕಚ್ಚಿದ್ದು, ದರ ಹೆಚ್ಚಳವಾಗಿದೆ. ಆದರೆ, ಈ ಸಮಯಕ್ಕೆ ಎಲ್ಲ ತರಕಾರಿಗಳ ದರ ಕಡಿಮೆಯಾಗಿ ₹10ಗೆ ಕೇ.ಜಿ. ಆಗಬೇಕಿತ್ತು. ಆದರೆ, ಈಗ ನೋಡಿದರೆ ತರಕಾರಿ ಅಭಾವವಾಗಿದೆ ಎನ್ನುತ್ತಾರೆ ತರಕಾರಿ ವ್ಯಾಪಾರಿ ಪ್ರಕಾಶ ಸುರಪುರ ಅವರು.

‘ಮುಳ್ಳು ಬದನೆಕಾಯಿ15 ಕೇ.ಜಿ.ಯ ಒಂದು ಪೆಟ್ಟಿಗೆಗೆ ₹500 ಇದೆ.ಹೈಬ್ರೀಡ್ 15 ಕೇ.ಜಿ.ಪೆಟ್ಟಿಗೆಗೆ ₹400 ಬೆಲೆ ಇದೆ.25 ಕೇ.ಜಿ.ಗೆ ₹400 ಟೊಮೆಟೊ ದರವಿದೆ.ಈರುಳ್ಳಿ ಹಳೆದು ₹3,600 ಕ್ವಿಂಟಲ್,ಹೊಸಈರುಳ್ಳಿ (ಹಸಿ)₹2,000 ಕ್ವಿಂಟಲ್ ಇದೆ.ಆಲೂಗಡ್ಡೆ₹3,300 ಕ್ವಿಂಟಲ್ ಇದೆ’ ಎಂದು ವ್ಯಾಪಾರಿ ಮಲ್ಲಯ್ಯ ದಾಸನ್ ಹೇಳುತ್ತಾರೆ.

ಸೊಪ್ಪುಗಳ ದರ: ಮಾರುಕಟ್ಟೆಯಲ್ಲಿ ಸೊಪ್ಪುಗಳ ದರ ಯಥಾಸ್ಥಿತಿ ಇದೆ.ಪಾಲಕ್ ₹20ಗೆ ಮೂರು ಕಟ್ಟು,ಸಬ್ಬಸಿಗೆ ₹10ಗೆ ಒಂದು ಕಟ್ಟು, ಮೆಂತೆ ₹25ಗೇ ಒಂದು ಕಟ್ಟು,ರಾಜಗಿರಿ ಸೊಪ್ಪು ₹20ಗೆ ಮೂರು ಕಟ್ಟು,ಪುಂಡಿ ಪಲ್ಯೆ ₹20ಗೆ4 ಕಟ್ಟು, ಕೊತ್ತಂಬರಿ,ಪುದೀನಾ ₹40ಗೆ 1 ಕಟ್ಟು ಇದೆ.

ಯಾದಗಿರಿಯ ಸ್ಟೇಷನ್ ರಸ್ತೆಯ ಮಾರುಕಟ್ಟೆಗೆ ತರಕಾರಿ ಬರುತ್ತಿಲ್ಲ. ಕಲಬುರ್ಗಿ, ಶಹಾಪುರದಿಂದ ತರಕಾರಿ ತರಿಸುತ್ತೇವೆ

ಪ್ರಕಾಶ ಸುರಪುರ, ತರಕಾರಿ ವ್ಯಾಪಾರಿ

ಯಾವ ತರಕಾರಿ ದರವೂ ಕಡಿಮೆ ಇಲ್ಲ. ಇದು ಗ್ರಾಹಕರಿಗೆ ಹೊರೆಯಾಗಿದೆ. ಮಳೆ ಹೆಚ್ಚಳವಾಗಿರುವುದು ತೊಂದರೆಯಾಗಿದೆ

ರಾಜು ಡವಳೆ, ಗ್ರಾಹಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.