ಶುಕ್ರವಾರ, ಮಾರ್ಚ್ 31, 2023
29 °C

ಯಾದಗಿರಿ: ನಾಯ್ಕಲ್‍ನಲ್ಲಿ ಸಿಡಿಲು ಬಡಿದು ರೈತ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಇಲ್ಲಿಗೆ ಸಮೀಪದ ನಾಯ್ಕಲ್ ಗ್ರಾಮದಲ್ಲಿ ಮಂಗಳವಾರ ಸಂಜೆ ಸಿಡಿಲು ಬಡಿದು ರೈತ ಜುಮೇಲಸಾ ಸಲಾಂಸಾಬ್ ಬೆಂಡೆಬೆಂಬಳಿ (52) ಮೃತಪಟ್ಟಿದ್ದಾರೆ.

ರೈತ ಜುಮೇಲಸಾ ಹಾಗೂ ಪತ್ನಿ ಸಮೇತ ಬೆಳಿಗ್ಗೆ ಜಮೀನಿಗೆ ಹೋಗಿದ್ದರು. ಸಂಜೆ ಮನೆಗೆ ವಾಪಾಸ್ಸಾಗುವ ವೇಳೆ ದಾರಿ ಮಧ್ಯೆ ಜುಮೇಲಸಾ ಅವರಿಗೆ ಸಿಡಿಲು ಬಡಿದಿದೆ. ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಪತ್ನಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸ್ಥಳಕ್ಕೆ ಗ್ರಾಮದ ಮುಸ್ಲಿಂ ಮುಖಂಡರಾದ ಗ್ರಾ.ಪಂ ಮಾಜಿ ಅಧ್ಯಕ್ಷ ಖಾಜಾ ಮೈನೋದ್ದೀನ್ ಜೇಮಶೇರಿ, ಇಸ್ಮಾಯಿಲ್‍ಸಾಬ್ ಕುರುಕುಂದಿ, ಜಾವೀದ್ ಕುರುಕುಂದಿ, ಇಸ್ಮಾಯಿಲ್ ಸೌದಗಾರ, ಶಬ್ಬೀರ್ ಗಡ್ಡೆನೋರ್ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ವಡಗೇರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು