ಶುಕ್ರವಾರ, ಆಗಸ್ಟ್ 6, 2021
21 °C
94 ಪ್ರಕರಣಗಳು ಸಕ್ರಿಯ, 1,458 ಜನ ಗುಣಮುಖ

ಯಾದಗಿರಿ: 10 ಜನರಿಗೆ ಕೋವಿಡ್ ದೃಢ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಜಿಲ್ಲೆಯ 10 ಜನರಿಗೆ ಭಾನುವಾರ ಕೋವಿಡ್‌ ದೃಢವಾಗಿದೆ. ಇದರಿಂದ ಸೋಂಕಿತರ ಸಂಖ್ಯೆ 1,553ಕ್ಕೆ ಏರಿಕೆಯಾಗಿದೆ. ಭಾನುವಾರದ 550 ನೆಗೆಟಿವ್ ವರದಿ ಸೇರಿ 29,764 ಮಾದರಿಗಳ ವರದಿ ನೆಗೆಟಿವ್ ಬಂದಿವೆ. 425 ಮಾದರಿಗಳ ವರದಿ ಬರಬೇಕಿದೆ.

ಯಾದಗಿರಿ ನಗರದ ಬಡಿಗೇರ ಓಣಿಯ 40 ವರ್ಷದ ಪುರುಷ, ಎಸ್‍ಬಿಐ ಮೇನ್ ಬ್ರ್ಯಾಂಚ್ ಹತ್ತಿರದ 48 ವರ್ಷದ ಪುರುಷ, 28 ವರ್ಷದ ಪುರುಷ, ಲಾಡಿಸ್‍ಗಲ್ಲಿಯ 43 ವರ್ಷದ ಪುರುಷ, ಸುರಪುರ ನಗರದ 30 ವರ್ಷದ ಪುರುಷ, 47 ವರ್ಷದ ಮಹಿಳೆ, ತಾಲ್ಲೂಕಿನ ಹೆಮನೂರ ಗ್ರಾಮದ 63 ವರ್ಷದ ಪುರುಷ, ರಂಗಂಪೇಠದ 58 ವರ್ಷದ ಪುರುಷ, ತಿಮ್ಮಾಪುರದ 58 ವರ್ಷದ ಪುರುಷ, ಶಹಾಪುರ ತಾಲ್ಲೂಕಿನ ಖಾನಾಪುರ ಗ್ರಾಮದ 65 ವರ್ಷದ ಪುರುಷ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.

ಪಿ-63510ರ ವ್ಯಕ್ತಿಯ ಸಂಪರ್ಕದ ಹಿನ್ನೆಲೆ ಪತ್ತೆ ಹಚ್ಚಲಾಗುತ್ತಿದ್ದು, ಉಳಿದ 9 ಜನ ಇನ್‍ಫ್ಲುಯಂಝಾ ಲೈಕ್ ಇಲ್‍ನೆಸ್ (ಐಎಲ್‍ಐ) ಪ್ರಕರಣಗಳಾಗಿವೆ.

73 ಜನ ಬಿಡುಗಡೆ, 94 ಸಕ್ರಿಯ:

ಜಿಲ್ಲೆಯಲ್ಲಿ ಕೋವಿಡ್-19 ಖಚಿತಪಟ್ಟ 1,553 ವ್ಯಕ್ತಿಗಳ ಪೈಕಿ ಭಾನುವಾರ ಮತ್ತೆ 73 ಜನ ಗುಣಮುಖರಾಗಿದ್ದು, ಜುಲೈ 19ರವರೆಗೆ 1,458 ಜನ ಗುಣಮುಖರಾಗಿದ್ದಾರೆ. ಒಬ್ಬರು ಮೃತಪಟ್ಟಿದ್ದಾರೆ. ಉಳಿದ 94 ಪ್ರಕರಣಗಳು ಸಕ್ರಿಯವಾಗಿವೆ. ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 3,483 ಜನ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ 5,211 ಜನರನ್ನು ಪ್ರತ್ಯೇಕವಾಗಿರಿಸಲಾಗಿದೆ. ಹೊಸ ಜಿಲ್ಲಾಸ್ಪತ್ರೆಯಲ್ಲಿ 79 ಜನರನ್ನು ಪತ್ಯೇಕವಾಗಿರಿಸಲಾಗಿದೆ. ಸುರಪುರ 7, ಬಂದಳ್ಳಿ ಏಕಲವ್ಯ ಕೊರೊನಾ ಕೇರ್ ಸೆಂಟರ್‌ನಲ್ಲಿ 10 ಜನರನ್ನು ಅವಲೋಕನೆಗಾಗಿ ಇರಿಸಲಾಗಿದೆ.

***

‘ಲಾಕ್‌ಡೌನ್‌ ವಿಸ್ತರಣೆಗೆ ಚರ್ಚಿಸಿ ನಿರ್ಧಾರ‘

ಯಾದಗಿರಿ: ಕೋವಿಡ್-19 ಸಂಬಂಧ ಜಿಲ್ಲೆಯಲ್ಲಿ ಜುಲೈ 15ರಿಂದ 22 ರವರೆಗೆ ಲಾಕ್‍ಡೌನ್ ಜಾರಿಗೊಳಿಸಿದ್ದು, ಎರಡು ದಿನಗಳಲ್ಲಿ ಪರಿಸ್ಥಿತಿ ನೋಡಿಕೊಂಡು ಲಾಕ್‌ಡೌನ್ ವಿಸ್ತರಣೆ ಮಾಡಬೇಕೊ ಬೇಡವೋ ಎನ್ನುವ ಕುರಿತು ಚರ್ಚಿಸಿ ನಿರ್ಧಾರ ಪ್ರಕಟಿಸುತ್ತೇವೆ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಅವರು ತಿಳಿಸಿದರು.

‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಜುಲೈ 22 ರ ವರೆಗೆ ಲಾಕ್‌ಡೌನ್‌ ಜಾರಿಯಲ್ಲಿರುತ್ತದೆ. ಎರಡು ದಿನಗಳಲ್ಲಿ ಜನಪ್ರತಿನಿಧಿ, ಸಂಬಂಧಿಸಿದವರ ಜೊತೆ ಚರ್ಚಿಸಿ ಆನಂತರ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು