ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ನಕಲಿ ವೈದ್ಯರ ಮಳಿಗೆ ಮೇಲೆ ದಾಳಿ, ಪ್ರಕರಣ ದಾಖಲು

Last Updated 20 ಮೇ 2021, 6:32 IST
ಅಕ್ಷರ ಗಾತ್ರ

ಯರಗೋಳ (ಯಾದಗಿರಿ ಜಿಲ್ಲೆ): ಗ್ರಾಮದ ನಕಲಿ ವೈದ್ಯರ ಮಳಿಗೆ ಮೇಲೆ ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ ನೇತೃತ್ವದಲ್ಲಿ ಬುಧವಾರ ರಾತ್ರಿ 9 ಗಂಟೆಗೆ ದಾಳಿ ಮಾಡಿ ಮಳಿಗೆ ಜಪ್ತಿ ಮಾಡಲಾಯಿತು.

ಆರೋಗ್ಯ ಇಲಾಖೆಯಿಂದ ಖಚಿತ ಮಾಹಿತಿ ಸಂಗ್ರಹಿಸಿಕೊಂಡ ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ ಅವರ ನೇತೃತ್ವದ ತಂಡ, ಗ್ರಾಮಕ್ಕೆ ರಾತ್ರಿ ವೇಳೆ ಆಗಮಿಸಿ ನಕಲಿ ವೈದ್ಯರ ಮಳಿಗೆ (ಆಸ್ಪತ್ರೆ) ಮೇಲೆ ದಾಳಿ ಮಾಡಿದಾಗ ವೈದ್ಯ ನಾಪತ್ತೆಯಾಗಿದ್ದ. ನಂತರ ಮಳಿಗೆಗೆ ಬೀಗ ಹಾಕಲಾಯಿತು.

ನಕಲಿ ವೈದ್ಯನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ 'ಪ್ರಜಾವಾಣಿ'ಗೆ ತಿಳಿಸಿದರು.

ಗ್ರಾಮದಲ್ಲಿ ಖಾಸಗಿ ನಕಲಿ ವೈದ್ಯರ ಕುರಿತು 'ಪ್ರಜಾವಾಣಿ' ಮೇ 14 ರಂದು 'ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚಿದ ರೋಗಿಗಳು' ಶೀರ್ಷಿಕೆಯಲ್ಲಿ ವಿಸ್ತೃತ ವರದಿ ಪ್ರಕಟಿಸಿತ್ತು.

ಈ ವೇಳೆ ಯಾದಗಿರಿ ಗ್ರಾಮೀಣ ಪಿಎಸ್ ಐ ಸುರೇಶ ಚವಾಣ್, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಹಣಮಂತರೆಡ್ಡಿ, ಗ್ರಾಮ ಸಹಾಯಕ ಜಮಾಲ್ ಸಾಬ್ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT