ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಸರು ಬೆಳೆ ಬಾಧಿಸುತ್ತಿದೆ ಕೀಟ

Last Updated 4 ಜುಲೈ 2020, 16:32 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ ಮುಂಗಾರು ಹಂಗಾಮಿನ ಬೆಳೆಗಳಾದ ಹೆಸರು, ಹತ್ತಿ, ತೊಗರಿ ಬಿತ್ತನೆ ಮಾಡಿದ್ದು, ಹೆಸರು ಬೆಳೆ ಮೊಳಕೆಯೊಡೆಯುತ್ತಿದೆ. ಆದರೆ, ಜಿಲ್ಲೆಯ ಕೆಲವೆಡೆ ಬೂದಿ ಜೀರುಂಡೆ (ASH WEEVIL) ರೋಗ ಬಾಧೆ ಕಾಣಿಸಿಕೊಂಡಿದ್ದು, ರೈತರಿಗೆ ಚಿಂತೆಯಾಗಿದೆ.

ಮಳೆ ಹೆಚ್ಚಾದ ಕಾರಣ ಹೆಸರು ಬೆಳೆಗೆ ಶಹಾಪುರ, ಯಾದಗಿರಿ ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ಹುಳು ಬಾಧೆ ಪತ್ತೆಯಾಗಿದೆ.

ಬೂದಿ ಜೀರುಂಡೆ ಕೀಟಾಣು ಸಸಿಯ ಕಾಂಡ, ಎಲೆ ಎಲ್ಲವನ್ನೂ ತಿಂದು ಮುಗಿಸುವುದರಿಂದಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತರಿಗೆಆಘಾತವಾಗಿದೆ.

ಹೆಸರು ಎರಡೇ ತಿಂಗಳಲ್ಲಿ ಫಸಲನ್ನು ಕೊಡುವ ಬೆಳೆಯಾಗಿದೆ. ಇದಾದ ನಂತರ ಜೋಳ ಬೆಳೆಯಲು ರೈತರು ಆಣಿಯಾಗುತ್ತಾರೆ. ಜಿಲ್ಲೆಯಲ್ಲಿ ಮುಂಗಾರು ಮಳೆ ಆಶಾದಾಯಕವಾಗಿ ಸುರಿದಿದ್ದರಿಂದ ಹೆಸರು ಬಿತ್ತನೆ ಮಾಡಿದ್ದರು.

‘ಸೈಪರ ಮೆತ್ರಿನ್ ಅಥವಾ ಫೆನವೆಲವರೆಟ್ ಪುಡಿಯನ್ನು ಸಸಿಯ ಕಾಂಡದ ಕೆಳಗೆ ಧುಳೀಕರಿಸಬೇಕು. ಕ್ಲೋರೊಫಿರಿಫೋಸ್5ಎಂಎಲ್‌ಪ್ರತಿ ಲೀಟರ್ ನೀರಿಗೆ ಬೆರೆಸಿ ಗಿಡದ ಸುತ್ತ ಅಲ್ಪ ಪ್ರಮಾಣದಲ್ಲಿ ಸುರಿಯಬೇಕು’ ಎಂದು ಕೃಷಿವಿಜ್ಞಾನಿಗಳು ಸಲಹೆ ನೀಡಿದ್ದಾರೆ.

‘ಹೆಸರು ಬೆಳೆಗೆ ಮಳೆ ಹೆಚ್ಚಾದರೂ, ಕಡಿಮೆಯಾದರೂ ಸಮಸ್ಯೆ. ಈಗ ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾಗಿದೆ. ಮೋಡ ಕವಿದ ವಾತಾವರಣ ಇದೆ. ಆದರಿಂದ ಜಮೀನಿನ ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಎಲೆ ಕೆಂಪಾಗಿವೆ. ಅಲ್ಲಲ್ಲಿ ಕೀಟ ಬಾಧೆ ಕಾಣಿಸಿಕೊಂಡಿರುವುದು ತೊಂದರೆಗೆ ಸಿಲುಕುವಂತಾಗಿದೆ’ ಎನ್ನುತ್ತಾರೆ ರೈತ ಮುಖಂಡದೊಡ್ಡಪ್ಪ ನಾಗರಡ್ಡಿ ಮಾಲಿಪಾಟೀಲ.

ಜಿಲ್ಲೆಯಲ್ಲಿ ಸರ್ಕಾರದಿಂದ ಹೆಸರು ಬೀಜ ಸಿಗದಿದ್ದರಿಂದ ಕೆಲ ರೈತ ಬಿತ್ತನೆ ಮಾಡಿಲ್ಲ. ಬಿತ್ತಿದ ಕಡೆ ಕೀಟ ಬಾಧೆ ಇದ್ದು, ಕೃಷಿ ಅಧಿಕಾರಿಗಳು ಜಮೀನುಗಳಿಗೆ ತೆರಳಿ ರೈತರಿಗೆ ಸಲಹೆ ನೀಡಬೇಕು

ದೊಡ್ಡಪ್ಪ ನಾಗರಡ್ಡಿ ಮಾಲಿಪಾಟೀಲ, ರೈತ ಮುಖಂಡ

ಹೆಸರು ಬೆಳೆಗೆ ಕೀಟದ ಬಾಧೆ ಇರುವುದು ಗಮನಕ್ಕೆ ಬಂದಿದೆ. ಹೊಲಗಳಿಗೆ ತೆರಳಿ ಪರಿಶೀಲಿಸಲಾಗುವುದು. ರೈತರಿಗೆ ಅಗತ್ಯ ಸಲಹೆ–ಸೂಚನೆ ನೀಡಲಾಗುವುದು

ಆರ್.ದೇವಿಕಾ, ಜಂಟಿ ಕೃಷಿ ನಿರ್ದೇಶಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT