ಭಾನುವಾರ, ಆಗಸ್ಟ್ 1, 2021
27 °C

ಯಾದಗಿರಿ: ಮಳೆಗೆ ಮನೆ ಗೋಡೆ ಕುಸಿತ, ಸಂಚಾರಕ್ಕೆ ತೊಂದರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯರಗೋಳ (ಯಾದಗಿರಿ ಜಿಲ್ಲೆ): ಸುತ್ತಲಿನ ಗ್ರಾಮಗಳಲ್ಲಿ ಶನಿವಾರ ರಾತ್ರಿ ಜೋರು ಮಳೆಯಾಗಿದ್ದು, ಅಲ್ಲಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೆಂಕಟೇಶ್ ನಗರ (ದೊಡ್ಡ ತಾಂಡಾ) ನಿವಾಸಿ ತಾರಿಬಾಯಿ ಎನ್ನುವವರಿಗೆ ಸೇರಿದ ಮನೆಯ ಗೋಡೆ ಕುಸಿದಿದೆ. ಮನೆಯಲ್ಲಿದ್ದ ಧಾನ್ಯಗಳು ಮಣ್ಣು ಪಾಲಾಗಿವೆ.

'ಹೊನಗೇರಾ ಗ್ರಾಮದ ವಾರ್ಡ್‌ ಸಂಖ್ಯೆ 1ರಲ್ಲಿ ಹಳ್ಳದ ನೀರು ಹರಿದು ಬರುತ್ತಿದ್ದು ಗ್ರಾಮಸ್ಥರಿಗೆ, ವಾಹನಗಳಿಗೆ, ಜಾನುವಾರುಗಳ ತಿರುಗಾಟಕ್ಕೆ ತೊಂದರೆಯಾಗಿದೆ' ಎಂದು ಗ್ರಾಮ ಪಂಚಾಯಿತಿ ಸದಸ್ಯ ಶರಣು ಎಮ್ಮೆನೂರು 'ಪ್ರಜಾವಾಣಿ' ಗೆ ತಿಳಿಸಿದರು.

ಮುದ್ನಾಳ, ಠಾಣಗುಂದಿ, ಬೊಮ್ಮಚಟ್ನಳ್ಳಿ,  ಮಲಕಪ್ಪನಳ್ಳಿ, ವಡ್ನಳ್ಳಿ, ಎಸ್. ಹೊಸಳ್ಳಿ, ಮೋಟ್ನಳ್ಳಿ, ಕೋಟಗೇರಾ, ಚಿಂತಕುಂಟ, ಹೆಡಗಿಮದ್ರ, ಹೊನಗೇರಾ, ಹತ್ತಿ ಕುಣಿ, ಸಮಣಪುರ, ಬಂದಳ್ಳಿ, ಯಡ್ಡಳ್ಳಿ, ಚಾಮನಳ್ಳಿ, ಬೆಳಗೇರಾ, ಖಾನಳ್ಳಿ, ಅರಿಕೇರಾ .ಬಿ, ಬಸವಂತಪುರ, ಕ್ಯಾಸಪನಳ್ಳಿ, ಹೋರುಂಚಾ, ಅಚ್ಚೋಲ, ಗುಲಗುಂದಿ, ಕಂಚಗಾರ ಹಳ್ಳಿ, ಅಬ್ಬೆತುಮಕೂರು, ಬಾಚವಾರ, ಕಟ್ಟಿಗೆ ಶಾಹಾಪುರ ಗ್ರಾಮಗಳಲ್ಲಿ ಭಾನುವಾರ ಬೆಳಿಗ್ಗೆ ಜಿನಿ ಜಿನಿ ಮಳೆ ಸುರಿದಿದೆ.

ಹಳ್ಳಗಳಲ್ಲಿ ನೀರು ಹರಿಯತ್ತಿದೆ. ಹೊಲ, ಗದ್ದೆಗಳಲ್ಲಿ ನೀರು ನಿಂತಿದ್ದು, ಹತ್ತಿ, ಭತ್ತ, ಹೆಸರು ಬೆಳೆಗಳಿಗೆ ಮಳೆಯಿಂದಾಗಿ ಆಸರೆಯಾಗಿದೆ. ರೈತರ ಮೊಗದಲ್ಲಿ ಸಂತಸ ಮೂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು