ಯಾದಗಿರಿ: ನಗರದ ಮಹಿಳಾ ಪೊಲೀಸ್ ಠಾಣೆ ‘ಪರಿಸರ ಸ್ನೇಹಿ’ಯಾಗಿದೆ ರೂಪುಗೊಂಡಿದೆ. ಇಲ್ಲಿ ವಿವಿಧ ಅಲಂಕಾರಿಕ ಗಿಡಗಳು, ಹಸಿರ ಎಲೆ ಬಳ್ಳಿಗಳು ಜಾಗ ಪಡೆದಿವೆ. ಜಿಲ್ಲೆಯ ಏಕೈಕ ಮಹಿಳಾ ಠಾಣೆ ಇದಾಗಿದ್ದು, ಸಿಬ್ಬಂದಿ ಪರಿಸರ ಪ್ರೇಮ ಮೆರೆದಿದ್ದಾರೆ.

ಗ್ರಾಮೀಣ ಪೊಲೀಸ್ ಠಾಣೆ ಕಟ್ಟಡದ ಮೊದಲ ಮಹಡಿಯಲ್ಲಿ ಮಹಿಳಾ ಪೊಲೀಸ್ ಠಾಣೆ ಇದೆ. ಅಲ್ಲಿ ಮಲೆನಾಡಿನ ವಿವಿಧ ಬಳ್ಳಿಗಳನ್ನು ನೇತು ಹಾಕಲಾಗಿದೆ. ಠಾಣೆಗೆ ತೆರಳಿದವರಿಗೆ ‘ಹಸಿರು ಬಳ್ಳಿ’ಗಳನ್ನು ನೋಡಿ ಕ್ಷಣಕಾಲ ಎಲ್ಲಿಗೆ ಬಂದಿದ್ದೇವೆ ಎನಿಸದೆ ಇರಲಾರದು.

ಹಸಿರು ಬಳ್ಳಿಗಳ ಕೃಷಿ ಜೂನ್ ತಿಂಗಳಿಂದ ಆರಂಭಗೊಂಡಿದೆ. ಸೆಪ್ಟೆಂಬರ್ ತನಕ ಬಳ್ಳಿಗಳನ್ನು ಬೆಳೆಸಿದ್ದಾರೆ. ನಂತರ ದಸರಾ ಹಬ್ಬದ ಮುನ್ನ ದಿನ ತೂಗು ಹಾಕಿದ್ದಾರೆ.

80 ಬಾಟಲಿಗಳ ಬಳಕೆ: ವಿವಿಧ ಹಸಿರು ಬಳ್ಳಿಗಳನ್ನು ತೂಗು ಹಾಕಲು 80 ಪ್ಲಾಸ್ಟಿಕ್ ಬಾಟಲಿಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ. ಇವುಗಳಲ್ಲಿ ಕೆಲವು ಮಾತ್ರ ಆಕಾರಕ್ಕೆ ಬಂದಿದ್ದಿಂದ ಅವುಗಳನ್ನು ಮಾತ್ರ ಉಪಯೋಗಿಸಲಾಗಿದೆ. ಮತ್ತಷ್ಟು ಬಳ್ಳಿಗಳನ್ನು ತೂಗು ಹಾಕಲು ಸಿಬ್ಬಂದಿ ಪ್ರಯತ್ನ ನಡೆಸಿದ್ದಾರೆ.

ಹಸಿರೆಲೆ ಮನಿಪ್ಲಾಂಟ್‌ನಲ್ಲಿ ಎರಡು ವಿಧಗಳಿದ್ದು, ಹಸಿರು, ಬಿಳಿ ಬಳ್ಳಿಗಳನ್ನು ಹೊಂದಿವೆ. ಇವುಗಳನ್ನು ಇಲ್ಲಿ ಪ್ರಯೋಗ ಮಾಡಲಾಗಿದೆ.

ಮಹಿಳಾ ಠಾಣೆಯಲ್ಲಿ ಏನೇನಿದೆ?: ಮೊದಲನೇ ಮಹಡಿಯಲ್ಲಿ ಮೊದಲಿಗೆ ಕಾಣಸಿಗುವುದುಬರಹಗಾರರ ಕೋಣೆ. ಅದರ ಪಕ್ಕದಲ್ಲಿ ಪಿಐ ಕೋಣೆ, ಕಾನೂನು ಸಲಹಾ ಕೇಂದ್ರ, ಮಕ್ಕಳ ಆಹಾರ ಕೋಣೆ ಇದೆ. ಇವುಗಳ ಮುಂದೆ ಬಾಟಲಿಗಳಲ್ಲಿ ತೂಗು ಹಾಕಲಾಗಿದೆ.

ಕೇರಳ ಮಹಿಳಾ ಠಾಣೆ ಪ್ರೇರಣೆ: ಕೇರಳದ ತ್ರಿಶೂರ್‌ನಲ್ಲಿ ನಡೆದ ತರಬೇತಿ ಕಾರ್ಯಾಗಾರಕ್ಕೆ ಪಿಐ ಹೊಸಕೇರಪ್ಪ ಅವರು ತೆರಳಿದಾಗ ಅಲ್ಲಿ ಮಹಿಳಾ ಠಾಣೆಗೂ ಭೇಟಿ ನೀಡಿದ್ದರು. ಆಗ ಅಲ್ಲಿ ಹಸಿರು ಬಳ್ಳಿಗಳಿಂದ ಠಾಣೆ ಶೃಂಗರಿಸಲಾಗಿತ್ತು. ಇದು ನಮ್ಮಲ್ಲೂ ಯಾಕೆ ಇರಬಾರದು ಪ್ರಶ್ನೆ ಬಂದಿದೆ. ಆಗಿನಿಂದ ಇಂಥ ಕೆಲಸಕ್ಕೆ ಕೈ ಹಾಕಿದೆ ಎನ್ನುತ್ತಾರೆ ಅವರು.

‘ಕಲ್ಯಾಣ ಕರ್ನಾಟಕದ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಲ್ಲಿಯೂ ಈ ರೀತಿ ಅಳವಡಿಸಿಲ್ಲ. ಬಹುಶಃ ನಾವೇ ಮೊದಲು ಇರಬೇಕು. ಹಸಿರು ಬಳ್ಳಿಗಳನ್ನು ನಾನು ಸೇರಿದಂತೆ ನಮ್ಮ ಸಿಬ್ಬಂದಿ ಜನತದಿಂದ ಕಾಪಾಡಿಕೊಂಡು ಬರುತ್ತಿದ್ದೇವೆ. ಇದಕ್ಕೆ ತೋಟಗಾರಿಕೆ ಇಲಾಖೆಯ ಸಿಬ್ಬಂದಿ ರವಿ ಸಹಕಾರ ನೀಡಿದ್ದಾರೆ. ಇದರಿಂದ ಇಷ್ಟೊಂದು ಚೆನ್ನಾಗಿ ಮೂಡಿ ಬರಲು ಸಾಧ್ಯವಾಗಿದೆ’ ಎನ್ನುತ್ತಾರೆ ಅವರು.

‘ನಮ್ಮ ಸುತ್ತಲಿನ ವಾತಾವರಣ ಹಸಿರು ಗಿಡ, ಮರಗಳಿಂದ ಕೂಡಿದ್ದರೆ ಮನಸ್ಸಿಗೆ ಆನಂದವಾಗುತ್ತದೆ. ಕೆಲಸ ಮುಗಿದ ಬಳಿಕ ಸಂಜೆ ಹೊತ್ತು ಬಳ್ಳಿಗಳನ್ನು ನೋಡುತ್ತಾ ಆವರಣದಲ್ಲಿ ನಡಿಗೆ ಕೂಡ ಮಾಡುತ್ತೇನೆ. ಸ್ವತಃ ಹಣದಿಂದ ಇದನ್ನು ಮಾಡಿದ್ದೇನೆ. ಇದು ಖುಷಿ ಕೊಡುವ ವಿಷಯವಾಗಿದೆ’ ಎನ್ನುತ್ತಾರೆ ಹೊಸಕೇರಪ್ಪ ಅವರು.

‘ಸಿಬ್ಬಂದಿ ಎಲ್ಲ ಸೇರಿಕೊಂಡು ಆಗಾಗ ನೀರು ಹಾಕುತ್ತೇವೆ. ನಮ್ಮ ಸಾಹೇಬರು ಉತ್ತಮ ಪರಿಸರ ಪ್ರೇಮಿಯಾಗಿದ್ದು, ಬಳ್ಳಿಗಳಲ್ಲಿ ತಂದು ಇಲ್ಲಿ ತೂಗು ಹಾಕಿಸಿದ್ದಾರೆ. ಇದರಿಂದ ನಮಗೂ ಖುಷಿಯಾಗಿದೆ’ ಎನ್ನುತ್ತಾರೆಎಎಸ್‌ಐ ದತ್ತಾತ್ರೇಯ ದೇಗಿನಾಳ.

ಮುನಿರಾಬಾದ್‌ನಿಂದ ತಂದ ಬಳ್ಳಿಗಳು

ಮಹಿಳಾ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಹೊಸಕೇರಪ್ಪ ಅವರು ಕಲಬುರ್ಗಿ, ರಾಜಮಂಡ್ರಿಯಲ್ಲಿ ತೂಗು ಹಾಕುವ ಬಳ್ಳಿಗಳಿಗಾಗಿ ಹುಡುಕಾಡಿದ್ದಾರೆ. ಆದರೆ, ಎರಡು ಕಡೆ ಸಿಗದಿದ್ದರಿಂದ ಕೊಪ್ಪಳದ ಮುನಿರಾಬಾದ್ ತೋಟಗಾರಿಕೆ ಕೇಂದ್ರದಿಂದ ತಂದ ಮನಿಪ್ಲಾಂಟ್, ಪೊಥೋಸ್ ಸಸ್ಯ, ಜಾಮಿಯಾ ಸಸ್ಯ, ಬಾಣದ ಬಳ್ಳಿ ಸೇರಿದಂತೆ ವಿವಿಧ ಅಲಂಕಾರಿಗಳು ಬಳ್ಳಿಗಳು ಇಲ್ಲಿವೆ. ಜೊತೆಗೆ ತುಳಸಿ ಗಿಡ, ಅಲಂಕಾರಿಕ ಹೂ ಕುಂಡಗಳು ಜಾಗ ಪಡೆದಿವೆ.

ಹಸಿರು ತುಂಬಿದ ಬಳ್ಳಿಗಳನ್ನು ನೋಡುತ್ತಿದ್ದರೆ ನೋಡುತ್ತಲೆ ಇರಬೇಕು ಎನ್ನಿಸುತ್ತದೆ. ಇದರ ನಿರ್ಮಾಣಕ್ಕಾಗಿ 6 ತಿಂಗಳು ಶ್ರಮ ಇದೆ

- ಹೊಸಕೇರಪ್ಪ ಕೆ, ಪೊಲೀಸ್ ಇನ್ಸ್‌ಪೆಕ್ಟರ್, ಮಹಿಳಾ ಠಾಣೆ

ಬಳ್ಳಿಗಳಿಗೆ ಎಲ್ಲ ಪೊಲೀಸ್ ಸಿಬ್ಬಂದಿ ನೀರು ಹಾಕುತ್ತೇವೆ. ಅವುಗಳನ್ನು ನೋಡುತ್ತಿದ್ದರೆ ಮನಸ್ಸಿಗೆ ಆನಂದವಾಗುತ್ತದೆ

-ದತ್ತಾತ್ರೇಯ ಬಿ. ದೇಗಿನಾಳ, ಎಎಸ್‌ಐ, ಮಹಿಳಾ ಠಾಣೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.