ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ನಾಯಕ

ಕಕ್ಕೇರಾದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಶಾಸಕ
Published 3 ಜೂನ್ 2023, 14:21 IST
Last Updated 3 ಜೂನ್ 2023, 14:21 IST
ಅಕ್ಷರ ಗಾತ್ರ

ಕಕ್ಕೇರಾ: ತಾಲ್ಲೂಕಿನ ಪ್ರತಿಯೊಂದು ವಾರ್ಡ, ಹಳ್ಳಿ, ನಗರಗಳಲ್ಲಿ ಕುಡಿಯುವ ನೀರು, ಸಾರಿಗೆ, ಶಿಕ್ಷಣ, ಸಿಸಿ ರಸ್ತೆ, ಆರೋಗ್ಯಕೇಂದ್ರ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ  ಶಾಸಕ ರಾಜಾ ವೆಂಕಟಪ್ಪನಾಯಕ ಹೇಳಿದರು.

ಪಟ್ಟಣದ ಕಾಂಗ್ರೆಸ್‌ ಕಚೇರಿಯಲ್ಲಿ ಶನಿವಾರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ  ಅವರು ಮಾತನಾಡಿದರು.   ಪುರಸಭೆ ವ್ಯಾಪಿಯ ಎಲ್ಲಾ ವಾರ್ಡಗಳಲ್ಲಿ ಮೂಲಭೂತ ಸಮಸ್ಯೆಗಳ ಕುರಿತು ಮುಖಂಡರೊಂದಿಗೆ ಇದೇ ವೇಳೆ ಚರ್ಚಿಸಿದರು.

ಮತದಾರರ ನಿರೀಕ್ಷೆಗೂ ಮೀರಿ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ನಮ್ಮ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದ್ದು, ಸರ್ವರೂ ಸದುಪಯೋಗ ಮಾಡಿಕೊಳ್ಳಬೇಕು ಎಂದರು. ಇದೇ ವೇಳೆ ಸೇರಿದ್ದ ಸಾವಿರಾರು ಮತದಾರರಿಗೆ ಶಾಸಕರು ಅಭಿನಂದನೆ ಸಲ್ಲಿಸಿದರು.

ಮುಖಂಡರಾದ ಹನುಮಂತರಾಯಗೌಡ ಜಹಾಗೀರದಾರ, ಶಾಂತಗೌಡ ಚನ್ನಪಟ್ಟಣ, ವೆಂಕೋಬ ಸಾಹುಕಾರ, ನಿಂಗರಾಜ ಬಾಚಿಮಟ್ಟಿ, ಗುಂಡಪ್ಪ ಸೊಲಾಪುರ, ನಿಂಗಯ್ಯ ಬೂದಗುಂಪಿ, ಪರಮಣ್ಣ ಕುಂಬಾರ, ಬಸಯ್ಯಸ್ವಾಮಿ, ಶರಣು ಸೊಲಾಪುರ, ಪರಮಣ್ಣ ಜಂಪಾ, ನಂದಣ್ಣ ವಾರಿ, ಮಲ್ಲು ಹುಲಿಕೇರಿ, ಹಣಮಂತ್ರಾಯಗೌಡ, ಮಹಿಬೂಬ್, ಬುಚ್ಚಪ್ಪ ಗುರಿಕಾರ, ಮುದ್ದಣ್ಣ, ಬಸವರಾಜ ಕಮತಗಿ, ಹಣಮಂತ್ರಾಯ ಬಳಿಚಕ್ರ, ಗುಡದಪ್ಪ ಬಿಳೇಭಾವಿ,ಅಮರಪ್ಪ ನಡುಗಡ್ಡಿ, ಲಕ್ಷ್ಮಣ ನಡಗಡ್ಡಿ, ಕಾಂಗ್ರೆಸ್ ಪುರಸಭೆ ಸದಸ್ಯರು, ಪಕ್ಷದ ಕಾರ್ಯಕರ್ತರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT