ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ದ್ವಿಶತಕ ಬಾರಿಸಿದ ಶುಂಠಿ, ಬೀನ್ಸ್‌

ನಿಂಬೆ ಹಣ್ಣು ಅಗ್ಗ; ಏರಿಕೆಯಾದ ಸೊಪ್ಪುಗಳ ದರ
Published 4 ಜೂನ್ 2023, 0:01 IST
Last Updated 4 ಜೂನ್ 2023, 0:01 IST
ಅಕ್ಷರ ಗಾತ್ರ

ಬಿ.ಜಿ.ಪ್ರವೀಣಕುಮಾರ

ಯಾದಗಿರಿ: ಮಾರುಕಟ್ಟೆಯಲ್ಲಿ ಹಸಿ ಶುಂಠಿ, ಬೀನ್ಸ್‌ ದ್ವಿಶತಕ ಬಾರಿಸಿದ್ದು, ನುಗ್ಗೆಕಾಯಿ ಶತಕದ ಗಡಿ ಮುಟ್ಟಿದೆ. ಬೇಸಿಗೆ ಆರಂಭದಿಂದಲೂ ಶುಂಠಿ ದರ ಹೆಚ್ಚಳವಾಗುತ್ತಿದ್ದು,  ಚಿಲ್ಲರೆ ತರಕಾರಿ ಅಂಗಡಿಗಳಲ್ಲಿ ಶುಂಠಿ ಮಾರಾಟ ಮಾಡುವುದನ್ನು ವ್ಯಾಪಾರಿಗಳು ಈಗ ಕೈಬಿಟ್ಟಿದ್ದಾರೆ.

ಸಗಟು ದರದಲ್ಲಿ ₹200ಕ್ಕೆ ಒಂದು ಕೆಜಿ ಶುಂಠಿ ಮಾರಾಟವಾದರೆ, ಚಿಲ್ಲರೆ ದರದಲ್ಲಿ ₹250 ಕೆಜಿ ಮಾರಾಟ ಮಾಡಲಾಗುತ್ತಿದೆ. ಇದರ ಜೊತೆಗೆ ಬೀನ್ಸ್‌ ದರ ಕೂಡ ಹೆಚ್ಚಳವಾಗಿದ್ದು, ಮದುವೆ ಋತು ಮುಗಿದರೂ ದರ ಇಳಿಕೆಯಾಗಿಲ್ಲ.

‘ಕಳೆದ ಒಂದು ತಿಂಗಳಿಂದ ಹಸಿ ಶುಂಠಿ ದರ ಹೆಚ್ಚಳವಾಗಿದ್ದು, ಚಿಲ್ಲರೆ ಅಂಗಡಿಗಳಲ್ಲಿ ಮಾರಾಟ ಮಾಡಲು ಸಾಧ್ಯವಿಲ್ಲದಂತ ಪರಿಸ್ಥಿತಿ ಇದೆ. ₹5, 10ಕ್ಕೆ ಕೇಳಿದರೆ ಮಾರಾಟ ಮಾಡಲು ಸಾಧ್ಯವಿಲ್ಲದ ಕಾರಣ ಇದನ್ನು ತರುವುದನ್ನು ಕೆಲವರು ಕೈಬಿಟ್ಟಿದ್ದಾರೆ‘ ಎಂದು ತರಕಾರಿ ವ್ಯಾಪಾರಿ ಬಸು ಚಿಂತನಹಳ್ಳಿ ಹೇಳುತ್ತಾರೆ.

ಇನ್ನೂ ಗುಣಮಟ್ಟದ ಬೆಳ್ಳುಳ್ಳಿ ಕೆಜಿಗೆ ₹100–120ಗೆ  ದರವಿದೆ. ಮದುವೆ ಋತುವಿನಲ್ಲಿ ಹೆಚ್ಚಳ ಕಂಡಿದ್ದ ನುಗ್ಗೆಕಾಯಿ ದರ ತುಸು ಇಳಿಯಾಗಿದ್ದು, ಈಗ ಕೆಜಿಗೆ ₹100–120 ಇದೆ. ಈ ವರ್ಷದ ಆರಂಭದಲ್ಲಿ ₹60ರಿಂದ 80 ಇತ್ತು.

ಈರುಳ್ಳಿ ಸೊಪ್ಪು ₹60–70, ಕರಿಬೇವು ಕೆಜಿಗೆ 50–60 ದರವಿದೆ. ಬೇಸಿಗೆಯಲ್ಲಿ ಈರುಳ್ಳಿ ದರ ಇಳಿಕೆಯಾಗಿದ್ದು, ಈ ಬಾರಿ ₹15ರಿಂದ 20 ಬೆಲೆ ಇದೆ. ಬೇಸಿಗೆಯಲ್ಲಿ ಒಂದಕ್ಕೆ ₹5 ಮಾರಾಟವಾಗಿದ್ದ ನಿಂಬೆ ಹಣ್ಣು ಈಗ ಅಗ್ಗವಾಗಿದ್ದು, ₹10ಗೆ 5 ನಿಂಬೆಹಣ್ಣು ಸಿಗುತ್ತಿವೆ.

ಒಂದು ತಿಂಗಳ ಹಿಂದೆ ₹20 ರಿಂದ 25 ದರವಿದ್ದ ಟೊಮೆಟೊ ಈಗ ಕೆಜಿಗೆ ₹25 ರಿಂದ ₹ 30 ದರದಲ್ಲಿ ಮಾಡಲಾಗುತ್ತಿದೆ. ಎಲೆಕೋಸು, ಮೂಲಂಗಿ ಕಳೆದ ತಿಂಗಳಿಗಿಂತ ಈಗ ₹5ರಿಂದ ₹10  ಹೆಚ್ಚಳವಾಗಿದೆ.

ಕಳೆದ 15 ದಿನಗಳಿಂದ ಮಾರುಕಟ್ಟೆಯಲ್ಲಿ ಅವರೆಕಾಯಿ ಸಿಗುತ್ತಿಲ್ಲ. ಆದರೂ ದರ ಮಾತ್ರ ₹70–80 ಇದೆ.

ಸೊಪ್ಪುಗಳ ದರ: ಸೊಪ್ಪುಗಳ ದರ ಕಟ್ಟಿಗೆ ₹5ರಿಂದ 10 ಹೆಚ್ಚಳವಾಗಿದೆ. ಸ್ಥಳೀಯವಾಗಿ ಸೊಪ್ಪು ಸಿಗುತ್ತಿಲ್ಲ. ಇದರಿಂದ ದರ ಹೆಚ್ಚಳವಾಗಿದೆ ಎನ್ನುವುದು ವ್ಯಾಪಾರಿಗಳ ಮಾತು. ಮೆಂತ್ಯೆ, ಸಬ್ಬಸಗಿ ಬೇರೆಡೆಯಿಂದ ಆಮದು ಮಾಡಿಕೊಳ್ಳುತ್ತಿದ್ದು, ಸ್ಥಳೀಯವಾಗಿ ಸಿಗುವ ದರಕ್ಕಿಂತ ಹೆಚ್ಚಿದೆ.

ಸ್ಥಳೀಯವಾಗಿ ಸಿಗುವ ಪಾಲಕ್‌, ಪುಂಡಿ ಪಲ್ಯೆ, ರಾಜಗಿರಿ ಸೊಪ್ಪು ಸಣ್ಣ ಗಾತ್ರದ ಒಂದು ಕಟ್ಟು ಸೊಪ್ಪು ₹10ಕ್ಕೆ ಒಂದು,₹ 20ಕ್ಕೆ ಮೂರು ಮಾರಾಟ ಮಾಡಲಾಗುತ್ತಿದೆ. ಮೆಂತ್ಯೆ, ಸಬ್ಬಸಗಿ, ಕೋತಂಬರಿ, ಪುದೀನಾ ದೊಡ್ಡ ಕಟ್ಟು ₹20ರಿಂದ ₹25ಕ್ಕೆ ಒಂದು ಮಾರಾಟ ಮಾಡಲಾಗುತ್ತಿದೆ.

ತರಕಾರಿ; ದರ (ಪ್ರತಿ ಕೆ.ಜಿಗೆ ₹ಗಳಲ್ಲಿ)
ಟೊಮೆಟೊ;25–30

ಆಲೂಗಡ್ಡೆ;25–30

ಈರುಳ್ಳಿ;15–20
ಬದನೆಕಾಯಿ;50–60
ಬೆಂಡೆಕಾಯಿ;50–60
ದೊಣ್ಣೆಮೆಣಸಿನಕಾಯಿ;70–80
ಎಲೆಕೋಸು;40–50 ಹೆಚ್ಚು
ಹೂಕೋಸು;60–70
ಚವಳೆಕಾಯಿ;70–80
ಬೀನ್ಸ್; 200–210
ಗಜ್ಜರಿ;70-80
ಸೌತೆಕಾಯಿ;60–70
ಮೂಲಂಗಿ;40-50
ಮೆಣಸಿನಕಾಯಿ;70-80
ಸೋರೆಕಾಯಿ;50–60
ಬಿಟ್‌ರೂಟ್;60-70
ಹೀರೆಕಾಯಿ;70-80
ಹಾಗಲಕಾಯಿ;70-80
ಅವರೆಕಾಯಿ;70–80 15

ನುಗ್ಗೆಕಾಯಿ;100–120

ತೊಂಡೆಕಾಯಿ;60;70

ಬಸು ಚಿಂತನಹಳ್ಳಿ  ತರಕಾರಿ ವ್ಯಾಪಾರಿ
ಬಸು ಚಿಂತನಹಳ್ಳಿ ತರಕಾರಿ ವ್ಯಾಪಾರಿ
ನಾಗರಾಜಗ್ರಾಹಕ
ನಾಗರಾಜಗ್ರಾಹಕ

ಕಳೆದ ಒಂದು ತಿಂಗಳಿಂದ ಹಸಿ ಶುಂಠಿ ಬೀನ್ಸ್‌ ದರ ಹೆಚ್ಚಳವಾಗಿದೆ. ಹೆಚ್ಚಿನ ದರವಾದರೂ ಗ್ರಾಹಕರು ಕೈತಪ್ಪಬಾರದು ಎಂಬ ಕಾರಣಕ್ಕೆ ಮಾರಾಟ ಮಾಡುತ್ತಿದ್ದೇವೆ

-ಬಸು ಚಿಂತನಹಳ್ಳಿ ತರಕಾರಿ ವ್ಯಾಪಾರಿ

ಬೇಸಿಗೆಯಲ್ಲಿ ಬಿಸಿಲಿನ ಜೊತೆಗೆ ತರಕಾರಿ ಸೊಪ್ಪುಗಳ ದರವೂ ಸುಡುತ್ತಿದೆ. ‍ಎಲ್ಲ ತರಕಾರಿಗಳ ಬೆಲೆಯೂ ಹೆಚ್ಚಳವಾಗಿದೆ. ಇದರಿಂದ ಗ್ರಾಹಕರಿಗೆ ಹೊರೆಯಾಗಿದೆ

-ನಾಗರಾಜ ಗ್ರಾಹಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT