ಶುಕ್ರವಾರ, 9 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಜಿಲ್ಲಾಡಳಿತದ ವೆಬ್‌ಸೈಟ್‌ನಲ್ಲಿ ಎಸ್‌ಪಿ ಹೆಸರು ಬದಲಾವಣೆ

‘ಪ್ರಜಾವಾಣಿ’ ವರದಿ ಫಲಶೃತಿ, ಸಾರ್ವಜನಿಕರ ಮೆಚ್ಚುಗೆ
Last Updated 5 ಸೆಪ್ಟೆಂಬರ್ 2021, 7:13 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲಾಡಳಿತದ ವೆಬ್‌ಸೈಟ್‌ನಲ್ಲಿ ಮೂರು ತಿಂಗಳಾದರೂ ಬದಲಾಗದ ‘ಎಸ್‌ಪಿ’ ಹೆಸರು ಎನ್ನುವ ಶೀರ್ಷಿಕೆಯಡಿ ಶನಿವಾರ ಪ್ರಕಟವಾಗಿದ್ದ ವಿಶೇಷ ವರದಿಗೆ ಜಿಲ್ಲಾಡಳಿತ ಸ್ಪಂದಿಸಿದೆ.

ಋಷಿಕೇಶ ಭಗವಾನ್‌ ಹೆಸರನ್ನು ಬದಲಾಯಿಸಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಅವರ ಹೆಸರನ್ನು ಜಾಲತಾಣದಲ್ಲಿ ಅಪ್ಡೇಟ್‌ ಮಾಡಲಾಗಿದೆ. ಇದರಿಂದ ಸಾರ್ವಜನಿಕರ ಗೊಂದಲ ನಿವಾರಣೆಯಾದಂತೆ ಆಗಿದೆ. ಅಧಿಕಾರಿಗಳ ಕೋಶದಲ್ಲಿಯೂ ಅಧಿಕಾರಿಗಳ ಹೆಸರನ್ನು ಸರಿಪಡಿಸಲಾಗಿದೆ. ಇದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

‘ಪ್ರಜಾವಾಣಿ’ ವರದಿ ನೋಡಿದ ಅನೇಕರು ಇಂಥ ಸಣ್ಣ ತಪ್ಪುಗಳೇ ಜನರನ್ನು ದಾರಿ ತಪ್ಪಿಸುತ್ತವೆ. ಮೂರು ತಿಂಗಳಾದರೂ ಜಿಲ್ಲೆಯ ಪ್ರಮುಖ ಹುದ್ದೆಯ ಅಧಿಕಾರಿಯ ಹೆಸರನ್ನು ಬದಲಾಯಿಸದೇ ಇರುವುದು ಸರಿಯಲ್ಲ. ಇನ್ನು ಮುಂದೆಯಾದರೂ ಕಾಲಕಾಲಕ್ಕೆ ಅಧಿಕಾರಿಗಳು ಬದಲಾವಣೆ ಆದಾಗ ತಕ್ಷಣವೇ ಸರಿಪಡಿಸುವ ಕೆಲಸ ಆಗಬೇಕು. ವರದಿಗೆ ಧನ್ಯವಾದ ಎಂದು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT