ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹುಣಸಗಿ‌ | ವಿಶಿಷ್ಟ ಸಂಪ್ರದಾಯದ ತೀಜ್ ಹಬ್ಬ

ಎಲ್ಲರಿಗೂ ಒಳಿತು ಬಯಸುವ ಬಂಜಾರಾ ಯುವತಿಯರು
Published : 1 ಅಕ್ಟೋಬರ್ 2023, 6:41 IST
Last Updated : 1 ಅಕ್ಟೋಬರ್ 2023, 6:41 IST
ಫಾಲೋ ಮಾಡಿ
Comments

ಭೀಮಶೇನರಾವ್ ಕುಲಕರ್ಣಿ

ಹುಣಸಗಿ: ಗೋಕುಲಾಷ್ಟಮಿಯ ಬಳಿಕ ತಾಂಡಾಗಳಲ್ಲಿ ಆಚರಿಸಲ್ಪಡುವ ತೀಜ್ (ಸಸಿ) ಹಬ್ಬ ಅತ್ಯಂತ ವಿಶಿಷ್ಟ ಹಾಗೂ ವಿಶೇಷವಾಗಿ ಆಚರಿಸಿಕೊಂಡು ಬರುವ ಹಬ್ಬವಾಗಿದೆ.

ತಾಲ್ಲೂಕಿನ ಬೈಲಾಪುರ ತಾಂಡಾದಲ್ಲಿ ಬಂಜಾರಾ ಸಮುದಾಯದ ವಿಶಿಷ್ಟ ಹಬ್ಬವಾಗಿರುವ ತೀಜ್ (ಸಸಿ) ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಮದುವೆಯಾಗದ ಯುವತಿಯರು ತೀಜ್ ಹಬ್ಬ ಆಚರಿಸಿತ್ತಾರೆ. ತಾಂಡಾದ ನಾಯಕ ಹಾಗೂ ಕಾರಭಾರಿ ಅವರ ಮನೆಗೆ ತೆರಳಿ ಹಬ್ಬ ಆಚರಿಸುವ ಕುರಿತು ಅನುಮತಿ ಪಡೆದು ಬಳಿಕ ಅವರ ಮನೆಯ ಬಳಿಯೇ ಬುಟ್ಟಿಗಳಲ್ಲಿ ಸಸಿಯನ್ನು ಹಾಕಿ ಆಚರಿಸುವ ಹಬ್ಬ ಇದಾಗಿದೆ.

ತೀಜ್ ಹಬ್ಬದ ಆಚರಣೆ: ತಾಂಡಾದಲ್ಲಿನ ಯುವತಿಯರು ಸುತ್ತಮುತ್ತಲಿನ ಕಾಡಿನ ಮಣ್ಣನ್ನು ತಂದು ನಾಯಕ ಅವರ ಮನೆಯ ಬಳಿ ಬಂದು ಸಾಂಪ್ರದಾಯಿಕ ಹಾಡುಗಳನ್ನು ಹಾಡುತ್ತಾ, ಸಸಿ ಹಾಕಲಾಯಿತು. ಈ ಸಂದರ್ಭದಲ್ಲಿ ರಾಠೋಡ ಹಾಗೂ ಚವ್ಹಾಣ ಪರಿವಾರದವ ಇಬ್ಬರಿಗೆ ಗುಬ್ಬಿ ಪುಟ್ಟಿ (ಸಣ್ಣ ಸಸಿ) ಜವಾಬ್ದಾರಿ ವಹಿಸಿ ಕೊಡಲಾಯಿತು. ಬಳಿಕ ಎಲ್ಲ ಮಹಿಳೆಯರು ಪ್ರತಿದಿನ ಸಸಿಗೆ ಬೆಳಿಗ್ಗೆ ಹಾಗೂ ಸಾಯಂಕಾಲ ಪೂಜೆ ಸಲ್ಲಿಸುವ ಸಂಪ್ರದಾಯ ಪಾಲಿಸಿಕೊಂಡು ಬರಲಾಯಿತು. ಪ್ರತಿ ದಿನ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು.

ಸಸಿ ಹಾಕಿದ 9ನೇ ದಿನ ಬೆಳಗಿನ ಜಾವ ಎಲ್ಲರ ಮನೆಯಲ್ಲಿ ಸಿಹಿ ಮಾಲದಿ ಮಾಡಿ ಸಸಿ ಪುಟ್ಟಿಯನ್ನು ನಾಯಕ ಅವರ ಮನೆಯ ಬಳಿ ತಂದು ಕೆಸರಿನ ಗೊಂಬೆ ಮಾಡಿ ಅದಕ್ಕೆ ಪೂಜೆ ಸಲ್ಲಿಸಿ ಬಳಿಕ ಆ ಗೊಂಬೆಗಳನ್ನು ಸಂಹಾರ ಮಾಡಲಾಯಿತು. ಅಸುರರ ಸಂಹಾರದ ಬಳಿಕ ಸಂಭ್ರಮಿಸಲಾಗುತ್ತದೆ ಎಂದು ಉಪನ್ಯಾಸಕ ತಾರಾನಾಥ ಚವ್ಹಾಣ ಹಬ್ಬದ ವಿಶೇಷತೆ ಕುರಿತು ವಿವರಿಸಿದರು.

’ತಾಂಡಾದ ಎಲ್ಲ ಹಿರಿಯರಿಗೆ ಹಸಿರು ಸಸಿಗಳನ್ನು ಕೊಟ್ಟು ಜಗತ್ತೆಲ್ಲ ಹಚ್ಚಹಸಿರಾಗಿರಲಿ, (ಕೋರ್ ಗೋರ್) ಎಲ್ಲರಿಗೂ ಒಳಿತಾಗಲಿ ಮಳೆ ಬೆಳೆ ಚನ್ನಾಗಿರಲಿ ಎಂದು ಯುವತಿಯರು  ಹಿರಿಯರಿಂದ ಆಶಿರ್ವಾದ ಪಡೆದುಕೊಳ್ಳುವದು‘ ಈ ಹಬ್ಬದ ವಿಶೇಷ ಎಂದು ಆನಂದ ರಾಠೋಡ ಹೇಳಿದರು.

ಬಳಿಕ ವಾದ್ಯ ಮೇಳಗಳ ಮೆರವಣಿಗೆಯೊಂದಿಗೆ ಸಸಿಗಳನ್ನು ಗಂಗಾ ಸ್ಥಳಕ್ಕೆ ತೆಗೆದುಕೊಂಡು ಹೋಗಿ ಅಲ್ಲಿ ವಿಸರ್ಜಿಸಲಾಯಿತು. ಈ ಬಾರಿಯ ತೀಜ್ ಹಬ್ಬದಲ್ಲಿ ಪ್ರಿಯಂಕಾ ಸಾವಿತ್ರಿ, ಸರಿತಾ, ಶಿವಾನಿ ಶ್ರಮಿಸಿದರು. ಪೋಮಾನಾಯಕ, ಅನಿತಾ, ಪೇಮಿಬಾಯಿ, ಶೋಭಾ, ಶಂಕರನಾಯಕ, ಶಾರದಾಬಾಯಿ, ಸೋಪಾಬಾಯಿ ಬಾಲಚಂದ್ರ, ರಮೇಶ ರಾಠೋಡ, ಗೋವಿಂದ ಚವ್ವಾಣ, ಭೀಮುನಾಯಕ ಪುಜಾರಿ, ಪೋಮಾನಾಯಕ ಗುತ್ತೇದಾರ, ಕೃಷ್ಣಾ ನಾಯಕ, ಹಿರಾನಾಯಕ, ಪರುಶುರಾಮ ರಾಠೋಡ, ಅನೀಲ ಕುಮಾರ ಸೇರಿದಂತೆ ಇತರರು ಇದ್ದರು. 

ಹುಣಸಗಿ ತಾಲ್ಲೂಕಿನ ಬೈಲಾಪುರ ತಾಂಡಾದಲ್ಲಿ ತೀಜ್ ಹಬ್ಬದಲ್ಲಿ ಪಾಲ್ಗೊಂಡಿದ್ದ ಮಹಿಳೆಯರು
ಹುಣಸಗಿ ತಾಲ್ಲೂಕಿನ ಬೈಲಾಪುರ ತಾಂಡಾದಲ್ಲಿ ತೀಜ್ ಹಬ್ಬದಲ್ಲಿ ಪಾಲ್ಗೊಂಡಿದ್ದ ಮಹಿಳೆಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT