ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: 1ರಿಂದ 5ನೇ ತರಗತಿ ಆರಂಭ, ವಿದ್ಯಾರ್ಥಿಗಳಿಗೆ ಮಾಸ್ಕ್, ಚಾಕೊಲೆಟ್ ವಿತರಣೆ

Last Updated 25 ಅಕ್ಟೋಬರ್ 2021, 5:09 IST
ಅಕ್ಷರ ಗಾತ್ರ

ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯಲ್ಲಿ ಸೋಮವಾರದಿಂದ 1ರಿಂದ 5 ನೇ ತರಗತಿ ಆರಂಭವಾಯಿತು.

ಶಾಲಾ ಸಮವಸ್ತ್ರ ಧರಿಸಿ ಆಗಮಿಸಿದ ವಿದ್ಯಾರ್ಥಿಗಳು, ಮಾಸ್ಕ್ ಧರಿಸದವರಿಗೆ ಶಿಕ್ಷಕರು ಮಾಸ್ಕ್ ವಿತರಣೆ ಮಾಡಿದರು.

ಶಾಲಾವರಣದೊಳಗೆ ಪ್ರವೇಶ ಪಡೆದ ನಂತರ ಕೈಗಳಿಗೆ ಸ್ಯಾನಿಟೈಸ್ ಸಿಂಪರಣೆ ಮಾಡಲಾಯಿತು.

ಚಾಕೊಲೆಟ್ ನೀಡಿ ಬರಮಾಡಿಕೊಂಡ ಶಿಕ್ಷಕರು:ಹಲವಾರು ತಿಂಗಳ ನಂತರ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಶಿಕ್ಷಕರು ಚಾಕೊಲೆಟ್ ನೀಡಿ ಬರಮಾಡಿಕೊಂಡರು. ಕೆಲ ಕಡೆ ತಳಿರು ತೋರಣ ಕಟ್ಟಿ ಶಾಲೆಯನ್ನು ಶೃಂಗಾರ ಮಾಡಲಾಗಿತ್ತು.

1,324 ಪ್ರಾಥಮಿಕ ಶಾಲೆಗಳು:ಜಿಲ್ಲೆಯಲ್ಲಿ ಸರ್ಕಾರಿ, ಅನುದಾನ ಸಹಿತ, ಅನುದಾನ ರಹಿತ, ಖಾಸಗಿ ಸೇರಿ 1,324 ಶಾಲೆಗಳು ಪ್ರಾಥಮಿಕ ಶಾಲೆಗಳಿವೆ.

ಭಾನುವಾರವೇ ಶಾಲಾ ಕೊಠಡಿ, ಶೌಚಾಲಯ, ಅಡುಗೆ ಕೋಣೆ, ಆಟದ ಮೈದಾನ ಸೇರಿದಂತೆ ಶಾಲಾವಾರಣದಲ್ಲಿ ಸ್ಯಾನಿಟೈಸ್ ಸಿಂಪಡಿಸಿ ಸ್ವಚ್ಛತೆ ಕೈಗೊಳ್ಳಲಾಗಿತ್ತು.

ಶಿಕ್ಷಕರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕೈಗೆ ಕಪ್ಪು ಧರಿಸಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

***

ಎರಡು ವರ್ಷದ ನಂತರ ಶಾಲೆ ಆರಂಭವಾಗಿದ್ದು, ಖುಷಿಯಾಗಿದೆ. ಶಾಲೆಯಲ್ಲಿ ಎಲ್ಲ ಸ್ನೇಹಿತರನ್ನು ಭೇಟಿಯಾಗಬಹುದು

-ವರುಣ, 4 ನೇ ತರಗತಿ ವಿದ್ಯಾರ್ಥಿ

ಶಾಲೆ ಆರಂಭವಾಗಿರುವುದಕ್ಕೆ ತುಂಬಾ ಖುಷಿಯಾಗಿದೆ. ಕಲಿಕೆ ಮುಂದುವರೆಯಲು ಸಹಕಾರಿಯಾಗಲಿದೆ.

-ಸುಜಾತಾ, 5 ನೇ ತರಗತಿ ವಿದ್ಯಾರ್ಥಿನಿ

ಶಿಕ್ಷಕರ ಸಮಸ್ಯೆಗಳನ್ನು ಬಗೆ ಹರಿಸುವಂತೆ ಆಗ್ರಹಿಸಿ ಶಿಕ್ಷಕರು ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಸರ್ಕಾರ ಶೀಘ್ರ ನಮ್ಮ ಬೇಡಿಕೆ ಈಡೇರಿಸಲಿ

-ಗಾಯತ್ರಿ, ಸಹಾಯಕ ಶಿಕ್ಷಕಿ, ಸ್ಟೇಷನ್ ಬಜಾರ್ ಶಾಲೆ ಯಾದಗಿರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT