ಯಾದಗಿರಿ: ಜೂನ್ ತಿಂಗಳಿಂದ ಸೆಪ್ಟೆಂಬರ್ 29ರ ನಡುವೆ ಆಗಾಗ ಬೆಂಬಿಡದೆ ಕಾಡಿದ ಮಳೆ ಹಾಗೂ ಕೃಷ್ಣಾ, ಭೀಮಾ ನದಿಗಳ ಪ್ರವಾಹದಿಂದಾಗಿ ಜಿಲ್ಲೆಯಲ್ಲಿ ಅಂದಾಜು ₹ 665 ಕೋಟಿಯಷ್ಟು ಹಾನಿಯಾಗಿದೆ.

ಪ್ರವಾಹ ಮತ್ತು ಅತಿವೃಷ್ಟಿಯಿಂದಾಗಿ ಬೆಳೆಗಳು, ಮನೆಗಳು, ರಸ್ತೆಗಳು, ಸೇತುವೆ, ಕೆರೆ– ಕಟ್ಟೆ, ವಿದ್ಯುತ್ ಕಂಬಗಳು, ಟಿಸಿಗಳು, ಶಾಲಾ ಕಟ್ಟಡಗಳು ಮೊದಲಾದ ಮೂಲಸೌಕರ್ಯಗಳು ಸೇರಿ ಅಂದಾಜು ₹ 665 ಕೋಟಿಯಷ್ಟು ಹಾನಿಯಾಗಿದೆ. ಇದರಲ್ಲಿ ಬೆಳೆಗಳ ಹಾನಿಯೇ ಸಿಂಹಪಾಲಿದ್ದು, ₹ 500 ಕೋಟಿಯಷ್ಟು ಹಾನಿಯಾಗಿರುವ ಸಾಧ್ಯತೆ ಇದೆ ಎಂಬುದು ಈಚೆಗೆ ಜಿಲ್ಲಾಡಳಿತವು ಮುಖ್ಯಮಂತ್ರಿಗಳಿಗೆ ಸಲ್ಲಿಸಿದ್ದ ಹಾನಿಯ ಅಂದಾಜು ವರದಿಯಿಂದ ಗೊತ್ತಾಗಿದೆ.

ಕೃಷಿ, ಕಂದಾಯ ಹಾಗೂ ತೋಟಗಾರಿಕೆ ಇಲಾಖೆಗಳು ಬೆಳೆಹಾನಿಯ ಜಂಟಿ ಸಮೀಕ್ಷೆಯಲ್ಲಿ ನಿರತವಾಗಿವೆ. ಆಯಾ ಇಲಾಖೆಗಳು ತಮ್ಮ ವ್ಯಾಪ್ತಿಯಲ್ಲಿನ ಸ್ವತ್ತುಗಳ ಹಾನಿಯನ್ನು ಕಲೆಹಾಕುವಲ್ಲಿ ನಿರತವಾಗಿವೆ. ಹಾನಿಯ ಪ್ರಮಾಣ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಅಧಿಕಾರಿಗಳು.

ಮುಂಗಾರು ಹಂಗಾಮಿನಲ್ಲಿ ಭತ್ತ, ಮೆಕ್ಕೆಜೋಳ, ಸಜ್ಜೆ, ತೊಗರಿ, ಹೆಸರು, ಹತ್ತಿ ಸೇರಿ 4.10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಈ ಪೈಕಿ 1.18 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿನ ₹ 500 ಕೋಟಿಯಷ್ಟು ಬೆಳೆಹಾನಿಯಾಗಿರುವ ಅಂದಾಜಿದೆ. ಸಮೀಕ್ಷೆಯ ಬಳಿಕ ನಿಖರ ಮಾಹಿತಿ ತಿಳಿಯಲಿದ್ದು, ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.

ನಾಲ್ಕು ಮನೆಗಳು ಶೇ 50ರಿಂದ ಶೇ 75ರಷ್ಟು, 143 ಮನೆಗಳಿಗೆ ಶೇ 20ರಿಂದ ಶೇ 50ರಷ್ಟು ಹಾಗೂ 376 ಮನೆಗಳಿಗೆ ಶೇ 15ರಿಂದ ಶೇ 20ರಷ್ಟು ಹಾನಿಯಾಗಿದೆ. ಹಾನಿಯಾದ ಒಟ್ಟು 523 ಮನೆಗಳ ಅಂದಾಜು ಮೊತ್ತ ₹ 3.37 ಕೋಟಿಯಷ್ಟು ಆಗಲಿದೆ.

₹ 162 ಕೋಟಿ ಮೌಲ್ಯದಷ್ಟು ಮೂಲಸೌಕರ್ಯ ಸ್ವತ್ತುಗಳಿಗೆ ಧಕ್ಕೆಯಾಗಿದೆ. 5.66 ಕಿ.ಮೀ. ರಾಜ್ಯ ಹೆದ್ದಾರಿ, 69.30 ಕಿ.ಮೀ. ಜಿಲ್ಲಾ ಮುಖ್ಯರಸ್ತೆಗೆ ಹಾನಿಯಾಗಿದೆ. ರಾಜ್ಯ ಹೆದ್ದಾರಿಯ 13, ಜಿಲ್ಲಾ ಮುಖ್ಯರಸ್ತೆಯ 29 ಸೇರಿ ಒಟ್ಟು 42 ಸೇತುವೆಗಳು ಅತಿವೃಷ್ಟಿ ಹಾಗೂ ಪ್ರವಾಹಕ್ಕೆ ತುತ್ತಾಗಿವೆ. ಹಾನಿಯ ಅಂದಾಜು ಮೌಲ್ಯ ₹ 72.87 ಕೋಟಿಯಷ್ಟಿದೆ.

ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಪ್ರವಾಹ ಮತ್ತು ಅತಿವೃಷ್ಟಿಯಿಂದಾಗಿ ಇಬ್ಬರು ಸಾವನ್ನಪ್ಪಿದ್ದು, 245 ಜಾನುವಾರುಗಳು ಸಹ ಮೃತಪಟ್ಟಿವೆ.

ಶೇ 43ರಷ್ಟು ಹತ್ತಿ ಬೆಳೆಹಾನಿ

ಕಳೆದ ಬಾರಿಯ ಉತ್ತಮ ಇಳುವರಿ ಹಾಗೂ ಹೆಚ್ಚಿನ ದರದಿಂದಾಗಿ ಈ ಬಾರಿ ಹತ್ತಿಯ ಬಿತ್ತನೆ ಪ್ರದೇಶ 2.10 ಲಕ್ಷ ಹೆಕ್ಟೇರ್ಗೆ ವಿಸ್ತರಿಸಿಕೊಂಡಿತ್ತು. ಅತಿವೃಷ್ಟಿ ಹಾಗೂ ಪ್ರವಾಹದಿಂದಾಗಿ ಹಾನಿಯಾದ ಬೆಳೆಗಳಲ್ಲಿ ಹತ್ತಿಯದ್ದೆ ಅತ್ಯಧಿಕವಿದೆ. ಒಟ್ಟು 1.18 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿನ ಬೆಳೆಹಾನಿ ಅಂದಾಜಿದ್ದು ಅದರಲ್ಲಿ ಹತ್ತಿಯದ್ದು 90 ಸಾವಿರ ಹೆಕ್ಟೇರ್ ಪ್ರದೇಶವಿದೆ. ಶಹಾಪುರದಲ್ಲಿ 23893 ಹೆಕ್ಟೇರ್ ಯಾದಗಿರಿ ತಾಲ್ಲೂಕಿನಲ್ಲಿ 18681 ಹೆಕ್ಟೇರ್ ವಡಿಗೇರಾದಲ್ಲಿ 18665 ಹೆಕ್ಟೇರ್ ಪ್ರದೇಶವಿದೆ. 19871 ಹೆಕ್ಟೇರ್ ಪ್ರದೇಶದಲ್ಲಿನ ತೊಗರಿ 5294 ಹೆಕ್ಟೇರ್ನಲ್ಲಿನ ಭತ್ತ 3989 ಹೆಕ್ಟೇರ್ ಪ್ರದೇಶದಲ್ಲಿನ ಹೆಸರು ಹಾಗೂ 50 ಹೆಕ್ಟೇರ್ನಲ್ಲಿನ ಸೂರ್ಯಕಾಂತಿ ಹಾಳಾಗಿರುವ ಅಂದಾಜಿದೆ. 182 ಹೆಕ್ಟೇರ್ ಪ್ರದೇಶದಲ್ಲಿನ ತೋಟಗಾರಿಕ ಬೆಳೆಗಳು ಸಹ ತುತ್ತಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.