ಯಾದಗಿರಿ: ಕೃಷ್ಣಾ ನದಿಯಲ್ಲಿ ಅನಧಿಕೃತವಾಗಿ ಮರಳು ಗಣಿಗಾರಿಕೆಗೆ ಬಳಸಿದ ಆರೋಪದಡಿ 6 ಹಿಟಾಚಿ ವಾಹನಗಳ ಆಪರೇಟರ್ ಹಾಗೂ ಮಾಲೀಕರು ಸೇರಿ ಏಳು ಮಂದಿ ವಿರುದ್ಧ ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮರಳು ಮತ್ತು ಹಿಟಾಚಿಗಳು ಸೇರಿ ₹ 1.58 ಕೋಟಿ ಮೌಲ್ಯದ ಸ್ವತ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.

ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ವೀರೇಶ ಶಾಂತಪ್ಪ ಅವರು ನೀಡಿದ ದೂರಿನ ಅನ್ವಯ ಅಕ್ರಮವಾಗಿ ಮರಳು ದಾಸ್ತಾನು ಮಾಡಿಕೊಂಡು ಆರೋಪದಡಿ ಜಮೀನಿನ ಮಾಲೀಕ ಹಣಮಪ್ಪ ಶೆಳ್ಳಗಿ ಹಾಗೂ ಹಿಟಾಚಿಗಳ ಆರು ಮಂದಿ ಅನಾಮಿಕ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೃಷ್ಣಾ ನದಿ ಪಾತ್ರದಲ್ಲಿ ಅನಧಿಕೃತವಾಗಿ ಮರಳು ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ದೂರು ಬಂದಿತ್ತು. ದೂರು ಆಧರಿಸಿ ಸುರಪುರ ಕಂದಾಯ ನಿರೀಕ್ಷ ಬಸವರಾಜ ಬಿರಾದಾರ, ವಿಎ ಶರಣು ಹಾಗೂ ವೀರೇಶ ಅವರಿದ್ದ ತಂಡ ದಾಳಿ ಮಾಡಿತ್ತು.

ದಾಳಿಯ ವೇಳೆ ನದಿ ದಡದಲ್ಲಿ ಅನಧಿಕೃತವಾಗಿ ಮರಳು ಗಣಿಗಾರಿಕೆ ಮಾಡುತ್ತಿದ್ದ ಆರು ಹಿಟಾಚಿಗಳ ಆಪರೇಟರ್ಗಳು ಓಡಿ ಹೋದರು. ಸುರಪುರ ತಾಲ್ಲೂಕಿನ ಸರ್ಕಾರಿ ಗೈರಾಣಿ ಜಮೀನಿನಲ್ಲಿ ಅನಧಿಕೃತವಾಗಿ ₹ 38.25 ಲಕ್ಷ ಮೌಲ್ಯದ 4,500 ಮೆಟ್ರಿಕ್ ಟನ್ ಅಕ್ರಮ ಮರಳು ಸಂಗ್ರಹಿಸಿ ಇರಿಸಲಾಗಿತ್ತು. ಹಣಮಂತ ಅವರ ಜಮೀನಿನಲ್ಲಿಯೂ ₹ 29.75 ಲಕ್ಷ ಮೌಲ್ಯದ 3,500 ಮೆಟ್ರಿಕ್ ಟನ್ ಮರಳು ಸೇರಿ ಒಟ್ಟು ₹ 68 ಲಕ್ಷ ಮೌಲ್ಯದ ಅನಧಿಕೃತ ಮರಳು ಪತ್ತೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಕೃಷ್ಣಾ ನದಿಯಿಂದ ಅನಧಿಕೃತವಾಗಿ ಮರಳು ತೆಗೆಯಲು ಬಳಸಿದ್ದ ತಲಾ ₹ 15 ಲಕ್ಷ ಮೌಲ್ಯದ ಒಟ್ಟು 6 ಹಿಟಾಚಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಮರಳು ಸೇರಿ ಒಟ್ಟು ₹ 1.58 ಕೋಟಿ ಮೌಲ್ಯದ ಸ್ವತ್ತುಗಳನ್ನು ಗಣಿ ಇಲಾಖೆಯ ಅಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದಾರೆ.

ಎರಡೇ ವಾರಗಳಲ್ಲಿ ಮತ್ತೊಂದು ಪ್ರಕರಣ: ಕೃಷ್ಣಾ ನದಿ ಪಾತ್ರದಲ್ಲಿ ಮರಳು ಗಣಿಗಾರಿಕೆಗಾಗಿ ಹಟ್ಟಿ ಚಿನ್ನದ ಗಣಿ ಕಂಪನಿಗೆ ನೀಡಿದ್ದ ಪರವಾನಗಿ ಸ್ಥಳದಿಂದ ಅನಧಿಕೃತವಾಗಿ 11,500 ಮೆಟ್ರಿಕ್ ಟನ್ ಮರಳು ತೆಗೆದು ಖಾಸಗಿ ಜಮೀನುಗಳಲ್ಲಿ ದಾಸ್ತಾನು ಮಾಡಿದ ಆರೋಪದಡಿ ಎಂಟು ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ₹ 97.75 ಲಕ್ಷ ಮೌಲ್ಯದ ಮರಳು ಜಪ್ತಿ ಮಾಡಲಾಗಿತ್ತು. ಅದೇ ನದಿ ದಡದಲ್ಲಿ ಬಹುಲಕ್ಷ ಮೌಲ್ಯದ ಮತ್ತೊಂದು ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.