ಚಿಂಚೋಳಿ: ತಾಲ್ಲೂಕಿನಲ್ಲಿ ಪ್ರಸಕ್ತ ಮುಂಗಾರು ಹಂಗಾಮಿಗೆ 70745 ಹೆಕ್ಟೇರ್ ಬಿತ್ತನೆ ಗುರಿಯನ್ನು ಕೃಷಿ ಇಲಾಖೆ ನಿಗದಿಪಡಿಸಿದೆ ಎಂದು ಸಹಾಯಕ ನಿರ್ದೇಶಕರಾದ ಜಾನಕಿಬಾಯಿ ಬಳವಾಟ್ ತಿಳಿಸಿದ್ದಾರೆ.

70745 ಹೆಕ್ಟೇರ್ನಲ್ಲಿ ಸಿಂಹಪಾಲು ಪ್ರದೇಶ ಬೇಳೆಕಾಳು (ದ್ವಿದಳ ಧಾನ್ಯ)ಗಳ ಬೇಸಾಯಕ್ಕೆ 62825 ಹೆಕ್ಟೇರ್ ಪ್ರದೇಶ ನಿಗದಿಯಾಗಿದೆ ಎಂದರು. ಕ್ರಮವಾಗಿ ಧಾನ್ಯದ ಹೆಸರು, ಬಿತ್ತನೆಗೆ ನಿಗದಿಯಾಗಿ ಕ್ಷೇತ್ರ ಹೆಕ್ಟೇರ್ಗಳಲ್ಲಿ ವಿವರಿಸಲಾಗಿದೆ.

ದ್ವಿದಳ ಧಾನ್ಯಗಳಾದ ತೊಗರಿ -49100, ಉದ್ದು -9000, ಹೆಸರು -4250, ಅಲಸಂದಿ -250, ಮಟಕಿ -100, ಅವರೆ -75, ಹುರುಳಿ -50 ಹೀಗೆ ಒಟ್ಟು 62825 ಹೆಕ್ಟೇರ್ ಗುರಿಯಿದೆ.

ಏಕದಳ ಧಾನ್ಯಗಳು 2190 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಗೆ ಗುರಿ ಹೊಂದಲಾಗಿದೆ. ಸಜ್ಜೆ -1000, ಜೋಳ -700, ಮೆಕ್ಕೆಜೋಳ -300, ಬತ್ತ -100, ಇತರೆ -90. ಎಣ್ಣೆಕಾಳು ಬೆಳೆಗಳಿಗೆ 2730 ಹೆಕ್ಟೇರ್ ಗುರಿಯಿದೆ. ಇದರಲ್ಲಿ ಎಳ್ಳು -1000, ಸೂರ್ಯಕಾಂತಿ -1000, ಸೋಯಾ -350, ಗುರೆಳ್ಳು -250, ಸೇಂಗಾ -100 ಗುರಿಯಿದೆ.

ಬೀಜಗಳಿಗೆ ಕೊರತೆಯಿಲ್ಲ: ತಾಲ್ಲೂಕಿನ ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರಿಗೆ ಅಗತ್ಯವಿರುವ ಬೀಜಗಳ ದಾಸ್ತಾನು ಮಾಡಲಾಗಿದೆ. ಸದ್ಯ ಯಾವುದೇ ಬೀಜಗಳ ಕೊರತೆಯಿಲ್ಲ. ಉದ್ದಿನ ಬದಲಾಗಿ ಪ್ರಸಕ್ತ ವರ್ಷ ರೈತರು ಸೋಯಾ ಬೀಜದತ್ತ ತಮ್ಮ ಚಿತ್ತ ಹರಿಸಿದ್ದು, ಸೋಯಾಗೆ ಹೆಚ್ಚಿನ ಬೇಡಿಕೆ ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.