ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಡೆ-ನುಡಿಗಳಲ್ಲಿ ಸಮನ್ವಯ ಇರಲಿ- ಗಂಗಾಧರ ಶ್ರೀ

Last Updated 14 ಮಾರ್ಚ್ 2011, 6:55 IST
ಅಕ್ಷರ ಗಾತ್ರ

ಯಾದಗಿರಿ: ಮನುಷ್ಯನ ನಡೆ-ನುಡಿ ಯಲ್ಲಿ ಸಮನ್ವಯ ಅತ್ಯಗತ್ಯ. ಇದು ಸದಾಚಾರದಿಂದ ಮಾತ್ರ ಸಾಧ್ಯ ಎಂದು ಅಬ್ಬೆತುಮಕೂರಿನ ಸಿದ್ಧ ಸಂಸ್ಥಾನ ಮಠದ ಗಂಗಾಧರ ಸ್ವಾಮೀಜಿ ಹೇಳಿದರು. ವಿಶ್ವಾರಾಧ್ಯರ ಜಾತ್ರಾ ಮಹೋತ್ಸ ವದ ಅಂಗವಾಗಿ ತಾಲ್ಲೂಕಿನ ಅಬ್ಬೆ ತುಮಕೂರಿನ ವಿಶ್ವಾರಾಧ್ಯ ಮಠದಲ್ಲಿ ಆಯೋಜಿಸಿದ್ದ ಶರಣ ಸಂಸ್ಕೃತಿ ಉತ್ಸವದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಮನುಷ್ಯ ಸಾತ್ವಿಕನಾಗಿ ಬಾಳ ಬೇಕಾದರೆ, ಆಚಾರ ವಿಚಾರಗಳು ಒಂದಾಗಬೇಕು. ನಿಯಮ, ನಿಷ್ಠೆಯಲ್ಲಿ ಢಂಬಾಚಾರ, ತೋರಿಕೆಗಳು ಇರಬಾ ರದು. ಪೂಜೆ, ಪ್ರಾರ್ಥನೆಗಳು ಶ್ರದ್ಧೆ ಯಿಂದ ಮಾಡಿದರೆ ಸಾರ್ಥಕವಾಗು ತ್ತವೆ. ಕಾಯಕವನ್ನು ಸತ್ಯ, ಪ್ರಾಮಾ ಣಿಕತೆಯಿಂದ ಮಾಡಬೇಕು. ಕಾಯ ಕದ ಪ್ರತಿಫಲವನ್ನು ದಾಸೋಹದ ಮೂಲಕ ಸಮಾಜದ ಉಪಕಾರಿ ಕೆಲಸ ಗಳಿಗೆ ಸದ್ವಿನಿಯೋಗ ಮಾಡಬೇಕು ಎಂದು ಸಲಹೆ ಮಾಡಿದರು.

ದೀಕ್ಷಾ ಸಂಸ್ಕಾರ ಹೊಂದಿ ಭಕ್ತರಿಗೆ ಯಾದಗಿರಿ ಏಕದಂಡಿಗಿ ಮಠದ ಗುರು ನಾಥ ಸ್ವಾಮೀಜಿ, ಮಲ್ಲಿಕಾರ್ಜುನ ಶಾಸ್ತ್ರಿಗಳು, ಬಸವರಾಜ ಶಾಸ್ತ್ರಿಗಳು, ಆನಂದ ಶಾಸ್ತ್ರಿಗಳು, ಸಂಸ್ಕಾರದ ಬಗ್ಗೆ ತಿಳಿಸಿಕೊಟ್ಟರು. ಶ್ರೀನಿವಾಸರೆಡ್ಡಿ ಚೆನ್ನೂರ, ಈಶಪ್ಪ ಗೌಡ ಮಾಲಿಪಾಟೀಲ, ಮಹಾ ದೇವಪ್ಪ ಅಬ್ಬೆತುಮಕೂರು, ಪಂಪನ ಗೌಡ, ಸಿದ್ಧಣ್ಣಗೌಡ ಬಬಲಾದಿ ಸೇರಿದಂತೆ ಹಲವಾರು ಭಕ್ತರು ಪಾಲ್ಗೊಂಡಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮ: ಅಬ್ಬೆ ತುಮಕೂರಿನ ವಿಶ್ವಾರಾಧ್ಯರ ಮಠ ದಲ್ಲಿ ನಡೆದ ಸಾಂಸ್ಕೃತಿ ಕಾರ್ಯಕ್ರಮ ಗಳನ್ನು ಡಿಎಸ್ಪಿ ಎಸ್.ಡಿ. ಬಾಗವಾಡ ಮಠ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿಶ್ವಾರಾಧ್ಯರು ನಾಡಿನ ಜನ ತೆಯ ಪುಣ್ಯಪುಂಜವಾಗಿದ್ದಾರೆ. ಅವ ರನ್ನು ನೆನೆದು ಭಕ್ತಿಯಿಂದ ಪೂಜಿಸಿದರೆ ಇಷ್ಟಾರ್ಥಗಳು ನೆರವೇರುತ್ತವೆ ಎಂದು ಹೇಳಿದರು.

ಹಿರಿಯ ವಕೀಲ ಎಸ್.ಬಿ. ಪಾಟೀಲ, ಚನ್ನಪ್ಪಗೌಡ ಮೋಸಂಬಿ ಅತಿಥಿಗಳಾಗಿ ಆಗಮಿಸಿದ್ದರು. ಗಂಗಾ ಧರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಮುರಾ ಕಲಾ ತಂಡದವರು ವಚನ ಪ್ರಾರ್ಥನೆ ಮಾಡಿದರು. ಎಸ್.ಎನ್. ಮಿಂಚಿನಾಳ ಸ್ವಾಗತಿಸಿದರು. ಡಾ. ಸುಭಾಷಚಂದ್ರ ಕೌಲಗಿ ನಿರೂಪಿಸಿ, ವಂದಿಸಿದರು. ಇದೇ ಸಂದರ್ಭದಲ್ಲಿ ವಿಶ್ವಾರಾಧ್ಯ ವಿದ್ಯಾವರ್ಧಕ ಸಂಸ್ಥೆಯ ವಿವಿಧ ಶಾಲೆ-ಕಾಲೇಜುಗಳ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಶಾಸಕ ಡಾ. ಶರಣಪ್ರಕಾಶ ಉದ್ಘಾಟಿಸಿದರು. ಬಿ.ಎಸ್. ಮಾಲಿಬಿರಾದಾರ ಅತಿಥಿ ಗಳಾಗಿ ಆಗಮಿಸಿದ್ದರು. ವಿದ್ಯಾರ್ಥಿ ಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT