ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಮತ್ತಿಗೂಡು ವಲಯದಲ್ಲಿ ನಡೆದ ಕಾಡಾನೆಗಳ ಕಾಳಗದಲ್ಲಿ 15 ವರ್ಷದ ಗಂಡಾನೆ ಮೃತಪಟ್ಟಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಮತ್ತಿಗೂಡು ಅರಣ್ಯದ ಸಿಪಿಟಿ 4 ಚೌಳಿಮರ ಎಂಬಲ್ಲಿ ಆನೆಯ ಮೃತದೇಹವು ಇಲಾಖೆ ಸಿಬ್ಬಂದಿಗೆ ಶುಕ್ರವಾರ ದೊರೆತಿದೆ. ಅರಣ್ಯದೊಳಗೆ ನಾಲ್ಕೈದು ದಿನಗಳ ಹಿಂದೆ ಎರಡು ಆನೆಗಳ ನಡುವೆ ಕಾಳಗ ನಡೆದು ಆ ಸಮಯದಲ್ಲಿ ಈ ಆನೆ ಮೃತಪಟ್ಟಿರಬಹುದು ಎಂದು ಇಲಾಖೆ ಅಧಿಕಾರಿಗಳು ಶಂಕಿಸಿದ್ದಾರೆ.

ಸಿಬ್ಬಂದಿಯಾದ ಸೋಮು, ಶಿವಶಂಕರ್, ರಾಜಶೇಖರ್ ಮತ್ತು ಅಣ್ಣಯ್ಯ ಶುಕ್ರವಾರ ಚೌಳಿಮರ ಸಿಪಿಟಿ 4ರಲ್ಲಿ ಗಸ್ತು ತಿರುಗುತ್ತಿದ್ದಾಗ ದುರ್ವಾಸನೆ ಆಧರಿಸಿ ಸ್ಥಳಕ್ಕೆ ತೆರಳಿದಾಗ ಆನೆ ಸತ್ತಿರುವುದು ಖಾತರಿಯಾಗಿದೆ.
ಆನೆಯ ದಂತ 1 ಮೀಟರ್ ಉದ್ದ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.