ದಾವಣಗೆರೆ: ಬಸವ ತತ್ವದ ಅನುಯಾಯಿಗಳು ಪ್ರಚಾರಪ್ರಿಯರಾಗದೇ ಬಸವಪ್ರಿಯರಾಗಬೇಕು ಎಂದು ಚಿತ್ರದುರ್ಗದ ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ನಗರದ ವಿರಕ್ತಮಠದಲ್ಲಿ ಬುಧವಾರ ಬಸವಜಯಂತಿ ಶತಮಾನೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾದ ಬಸವ ಪ್ರಭಾತ್ ಫೇರಿ ಉದ್ಘಾಟಿಸಿ ಅವರು ಮಾತನಾಡಿದರು.

ನೂರು ವರ್ಷಗಳ ಹಿಂದ ವಿರಕ್ತಮಠದಲ್ಲಿ ಮೃತ್ಯುಂಜಯ ಸ್ವಾಮೀಜಿ ಮತ್ತು ಹರ್ಡೇಕರ್ ಮಂಜಪ್ಪ ಅವರು ಬಸವ ಜಯಂತಿಯನ್ನು ಆರಂಭಿಸಿದರು. ಆ ಇತಿಹಾಸಕ್ಕೆ ಇಂದು ನಾವು ಸಾಕ್ಷಿಯಾಗಿದ್ದೇವೆ. ವಿಶ್ವಗುರು ಬಸವಣ್ಣನ ತತ್ವಗಳಾದ ಸಮಾನತೆ, ಕಾಯಕ, ದಾಸೋಹ, ಸೋದರತೆ, ಸ್ವಾತಂತ್ರ್ಯ ಇಂದಿಗೂ ಆದರ್ಶಗಳಾಗಿವೆ.

ನಾವೆಲ್ಲರೂ ಬಸವ ಜಯಂತಿ ಹೆಸರಿನಲ್ಲಿ ಕೇವಲ ಪ್ರಚಾರ ಫಲಕಗಳಲ್ಲಷ್ಟೇ ಕಾಣಿಸಿಕೊಳ್ಳಲು ಸೀಮಿತವಾಗಬಾರದು. ಬಸವ ತತ್ವಗಳನ್ನು ಮನೆಮನೆಗೆ ತಲುಪಿಸಬೇಕು. ಅದಕ್ಕಾಗಿ ಬಸವ ಪ್ರಭಾತ್ ಫೇರಿ ನಡೆಸಲಾಗುತ್ತಿದೆ ಎಂದರು.

ಬಸವಪ್ರಭು ಸ್ವಾಮೀಜಿ ಮಾತನಾಡಿ, ಬಸವ ಜಯಂತಿಯ ಆರಂಭ ಸ್ಥಳವಾದ ವಿರಕ್ತಮಠ ಈ ನಿಟ್ಟಿನಲ್ಲಿ ಬಸವ ಗಂಗೋತ್ರಿ ಆಗಿದೆ. ಬಸವಣ್ಣನವರು ಬೋಧಿಸಿದ ಜಾಗತಿಕ ತತ್ವಗಳನ್ನು ಪಾಲಿಸಬೇಕಿದೆ ಎಂದು ಹೇಳಿದರು.

ವಿರಕ್ತಮಠದಿಂದ ಹೊರಟ ಪ್ರಭಾತ್ ಫೇರಿಯು ದೊಡ್ಡಪೇಟೆಯ ಬಸವಮಂಟಪ, ಪಾತಾಳಲಿಂಗೇಶ್ವರ ದೇವಸ್ಥಾನ, ಸ್ವಾಗೇರ ಪೇಟೆ, ಹೊಂಡದ ರಸ್ತೆ, ಕಾಯಿಪೇಟೆಗಳಲ್ಲಿ ಸಂಚರಿಸಿತು.

ಮೃತ್ಯುಂಜಯ ಸ್ವಾಮೀಜಿ, ಹರ್ಡೇಕರ ಮಂಜಪ್ಪ ಮತ್ತಿತರ ಶರಣರ ಕುರಿತು ಘೋಷಣೆಗಳು ಮೊಳಗಿದವು.
ಮೇಯರ್ ಸುಧಾ ಜಯರುದ್ರೇಶ್, `ದೂಡಾ~ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಕೆಪಿಸಿಸಿ ಸದಸ್ಯ ಡಿ. ಬಸವರಾಜ್, ಎಚ್.ಕೆ.ರಾಮಚಂದ್ರಪ್ಪ, ಎಚ್.ಎಂ. ಸ್ವಾಮಿ, ಜಯಕುಮಾರ್, ಜಿ. ಶಿವಯೋಗಪ್ಪ, ಕಣಕುಪ್ಪೆ ಮುರುಗೇಶಪ್ಪ, ಎ. ನಾಗರಾಜ್, ದಿನೇಶ್ ಕೆ. ಶೆಟ್ಟಿ, ಎಚ್.ಬಿ. ಮಂಜುನಾಥ್ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.