ಹಾಸನ: ನಗರದ ರೈಲ್ವೆ ಗೇಟ್ಬಳಿ ಹಲವು ವರ್ಷಗಳಿಂದ ವಾಸಿಸುತ್ತಿದ್ದ ಮತ್ತು ಹೊಸ ಬಸ್ ನಿಲ್ದಾಣಕ್ಕೆ ಹೋಗುವ ರಸ್ತೆ ಅಗಲೀಕರಣದಲ್ಲಿ ಮನೆಗಳನ್ನು ಕಳೆದುಕೊಂಡಿದ್ದ 20 ಕುಟುಂಬದವರಿಗೆ ಮಂಗಳವಾರ ಕೃಷ್ಣ ನಗರದಲ್ಲಿ ಹೊಸ ನಿವೇಶನಗಳ ಹಕ್ಕುಪತ್ರ ವಿತರಿಸಲಾಯಿತು.

ತಹಶೀಲ್ದಾರ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸರಳ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಸಿ.ಆರ್. ಶಂಕರ್ ಹಕ್ಕುಪತ್ರ ನೀಡಿದರು.ಹೊಸ ಬಸ್ ನಿಲ್ದಾಣಕ್ಕೆ ಹೋಗುವ ರಸ್ತೆಯ ಅಗಲೀಕರಣ ಹಾಗೂ ಮೇಲು ಸೇತುವೆ ನಿರ್ಮಾಣಕ್ಕಾಗಿ ಇಲ್ಲಿನ 20 ಕುಟುಂಬದವರನ್ನು ತೆರವು ಮಾಡಲಾಗಿತ್ತು. ಅವರಿಗೆ ನಗರದ ಹೊರವಲಯದ ಕೃಷ್ಣಾ ನಗರದಲ್ಲಿ ಆಶ್ರಯ ಮನೆಗಳನ್ನು ನೀಡಲಾಗಿತ್ತು.

ಆದರೆ ಇವುಗಳಲ್ಲಿ ಕೆಲವು ಮನೆಗಳು ಬೇರೆಯವರಿಗೆ ಮಂಜೂರಾಗಿದ್ದರಿಂದ ಸಮಸ್ಯೆ ಸೃಷ್ಟಿಯಾಗಿತ್ತು. ಜತೆಗೆ ಹಕ್ಕುಪತ್ರವೂ ಇಲ್ಲದೆ 20 ಕುಟುಂಬಗಳು ಅತಂತ್ರ ಸ್ಥಿತಿಯಲ್ಲಿದ್ದವು. ಈಗ ಹಕ್ಕುಪತ್ರಗಳನ್ನು ನೀಡಿದ್ದರಿಂದ ಕುಟುಂಬದವರ ಆತಂಕ ನಿವಾರಣೆಯಾದಂತಾಗಿದೆ.

ನಿವಾಸಿಗಳಾದ ಮೋಹನಾಕ್ಷಿ, ಸುಂದರಮ್ಮ, ಯಶೋದ, ಮಂಜುಳಾ, ಸಾಜಿದ್, ಲಲಿತ, ಅಲೀಮಾಬಿ, ಮಂಜುಳಾ, ವೆಂಕಟಲಕ್ಷ್ಮಿ, ನಂಜಮ್ಮ, ಶೋಭಾ, ಸುಕನ್ಯಾ, ಅಂಜನಮ್ಮ, ನಿಂಗಮ್ಮ, ನಾಗರತ್ನ, ಪುಷ್ಪಾ, ವಿದ್ಯಾಮಾಲಿನಿ, ಕಲಾವತಿ, ಚಂದ್ರಕಲಾ ಹಾಗೂ ಗಾಯತ್ರಿ ಎಂಬುವವರಿಗೆ ಕಸಬಾ ಹೋಬಳಿ ಜೋಟಿತಟ್ಟೇಕೆರೆ ಗ್ರಾಮದ ಸರ್ವೆ ನಂಬರ್ 103ರಲ್ಲಿ ಆಶ್ರಯ ಯೋಜನೆಯಡಿ ನಿರ್ಮಿಸಿರುವ ಆಶ್ರಯ ಬಡಾವಣೆಯಲ್ಲಿ ನಿವೇಶನಗಳನ್ನು ನೀಡಲಾಯಿತು.

`ಮನೆ ತೆರವು ಮಾಡುವಾಗ ನಗರಸಭೆ ನೀಡಿದ್ದ ಭರವಸೆಗಳನ್ನು ಈಗ ಈಡೇರಿಸಿದಂತಾಗಿದೆ~ ಎಂದು ನಗರಸಭೆ ಅಧ್ಯಕ್ಷ ಸಿ.ಆರ್. ಶಂಕರ್ ಹೇಳಿದರು. ತಹಶೀಲ್ದಾರ್ ಕೆ. ಮಥಾಯಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.