ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

SSLC,PUC,DEGREE ಪಾಸ್‌ | ವೇತನ ₹25,000: ESICಯಲ್ಲಿ 3847 ಹುದ್ದೆಗಳಿಗೆ ಅರ್ಜಿ

Last Updated 11 ಜನವರಿ 2022, 11:46 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಕಾರ್ಮಿಕ ವಿಮಾ ನಿಗಮದಲ್ಲಿ ಖಾಲಿ ಇರುವ 3847 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು.

ಹುದ್ದೆಗಳ ಸಂಖ್ಯೆ: 3847 ( ರಾಜ್ಯದಲ್ಲಿ 284 ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುವುದು)

ಹುದ್ದೆಗಳ ವಿವರ
1) ಕ್ಲರ್ಕ್ – 1726
2) ಸ್ಟೆನೋಗ್ರಾಫರ್ – 163
3) ಮಲ್ಟಿ ಟಾಸ್ಕಿಂಗ್ ಸ್ಟಾಫ್‌ – 1931

ಕ್ಲರ್ಕ್...
ವಿದ್ಯಾರ್ಹತೆ: ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಾಸ್‌ ಆಗಿರಬೇಕು.
ವೇತನ ಶ್ರೇಣಿ: ₹ 25,500-₹ 81,100.

ಸ್ಟೆನೋಗ್ರಾಫರ್...
ವಿದ್ಯಾರ್ಹತೆ: ದ್ವಿತೀಯ ಪಿಯುಸಿ ಪಾಸ್‌ ಅಥವಾ ತತ್ಸಮಾನ ವಿದ್ಯಾರ್ಹತೆ ಹಾಗೂ ಟೈಪಿಂಗ್‌, ಶಾರ್ಟ್‌ಹ್ಯಾಂಡ್‌ ಕೋರ್ಸ್‌ ಪಡೆದಿರಬೇಕು
ವೇತನ ಶ್ರೇಣಿ: ₹ 25,500-₹ 81,100.

ಮಲ್ಟಿ ಟಾಸ್ಕಿಂಗ್ ಸ್ಟಾಫ್‌ ...
ವಿದ್ಯಾರ್ಹತೆ: ಎಸ್‌ಎಸ್‌ಎಲ್‌ಸಿ ಪಾಸ್ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
ವೇತನ ಶ್ರೇಣಿ: ₹ 18,000-₹ 56,900.

ವಿದ್ಯಾರ್ಹತೆ ಮಾಹಿತಿ, ವೇತನ, ಅರ್ಜಿ ಶುಲ್ಕ ಪಾವತಿ, ನೇಮಕಾತಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್‌ ನೋಡುವುದು.

ವಯಸ್ಸು: ಕನಿಷ್ಠ 18 ವರ್ಷ, ಗರಿಷ್ಠ 27

ವಯೋಮಿತಿ ಸಡಿಲಿಕೆ

ಎಸ್‌ಸಿ/ಎಸ್‌ಟಿ: 5 ವರ್ಷಗಳು

ಒಬಿಸಿ: 3 ವರ್ಷಗಳು

ಅಂಗವಿಕಲರು 10 ವರ್ಷಗಳು

ಅರ್ಜಿ ಶುಲ್ಕ: ಎಸ್‌ಸಿ / ಎಸ್‌ಟಿ / ಅಂಗವಿಕಲ / ಮಹಿಳಾ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ₹ 250. ಹಾಗೂ ಸಾಮಾನ್ಯ ಅಭ್ಯರ್ಥಿಗಳಿಗೆ ₹ 500. ಶುಲ್ಕ ಇದೆ.

ನೇಮಕಾತಿ: ಎಲ್ಲ ಹುದ್ದೆಗಳ ಆಯ್ಕೆಗೆ ಆನ್‌ಲೈನ್‌ ಪರೀಕ್ಷೆ ನಡೆಸಲಾಗುವುದು. ಪ್ರಿಲಿಮ್ಸ್‌ ಪರೀಕ್ಷೆ, ಮುಖ್ಯ ಪರೀಕ್ಷೆ, ಸ್ಕಿಲ್‌ ಟೆಸ್ಟ್‌ ನಡೆಸಲಾಗುವುದು.

ಅರ್ಜಿ ಸಲ್ಲಿಕೆ: ಆನ್‌ಲೈನ್‌ ಮೂಲಕ ಹೊರತುಪಡಿಸಿ, ಇತರೆ ಯಾವುದೇ ವಿಧಾನದಲ್ಲಿ ಅರ್ಜಿ ಸ್ವೀಕರಿಸಲಾಗುವುದಿಲ್ಲ. ಅರ್ಜಿ ಸಲ್ಲಿಸಲು ವೆಬ್‌ಸೈಟ್ ವಿಳಾಸ www. esic.nic.in ಗೆ ಭೇಟಿ ನೀಡಲು ಸೂಚಿಸಲಾಗಿದೆ.

ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 15–02–2022

ವೆಬ್‌ಸೈಟ್ ವಿಳಾಸ:https://www.esic.nic.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT