ಬೆಂಗಳೂರು: ನಾಗರಿಕ ವಿಮಾನಯಾನ ಸಚಿವಾಲಯದಡಿ ಕಾರ್ಯನಿರ್ವಹಿಸುವ ಭಾರತೀಯ ವಿಮಾನನಿಲ್ದಾಣಗಳ ಪ್ರಾಧಿಕಾರ (AAI) 83 ವಿವಿಧ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನಿಸಿದೆ.

ಜೂನಿಯರ್ ಎಕ್ಸಿಕ್ಯೂಟಿವ್ ಫೈರ್ ಸರ್ವಿಸ್ 13 ಹುದ್ದೆಗಳು, ಮಾನವ ಸಂಪನ್ಮೂಲ ವಿಭಾಗದ (ಎಚ್ಆರ್) ಜೂನಿಯರ್ ಎಕ್ಸಿಕ್ಯೂಟಿವ್ 66 ಹುದ್ದೆಗಳು ಹಾಗೂ ಜೂನಿಯರ್ ಎಕ್ಸಿಕ್ಯೂಟಿವ್ ಹಿಂದಿ–ಇಂಗ್ಲಿಷ್ ಭಾಷಾಂತರಕಾರ 4 ಹುದ್ದೆಗಳಿವೆ

ಜೂನಿಯರ್ ಎಕ್ಸಿಕ್ಯೂಟಿವ್ ಫೈರ್ ಸರ್ವಿಸ್ ಹುದ್ದೆಗಳಿಗೆ ಮೆಕಾನಿಕಲ್ ಎಂಜಿನಿಯರಿಂಗ್ ಅಥವಾ ಫೈರ್ ಎಂಜಿನಿಯರಿಂಗ್ ಅಥವಾ ಆಟೊಮೊಬೈಲ್ ಎಂಜಿನಿಯರಿಂಗ್ ಪದವಿ ಪಾಸಾಗಿರಬೇಕು.

ಮಾನವ ಸಂಪನ್ಮೂಲ ವಿಭಾಗದ (ಎಚ್ಆರ್) ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಎಂಬಿಎ ಎಚ್ಆರ್ ಆಗಿರಬೇಕು.

ಜೂನಿಯರ್ ಎಕ್ಸಿಕ್ಯೂಟಿವ್ ಹಿಂದಿ–ಇಂಗ್ಲಿಷ್ ಭಾಷಾಂತರಕಾರ 4 ಹುದ್ದೆಗಳಿಗೆ ಹಿಂದಿ ಅಥವಾ ಇಂಗ್ಲಿಷ್ನಲ್ಲಿ ಸ್ನಾತಕೋತ್ತರ ಪದವಿ ಪಾಸಾಗಿರಬೇಕು.

ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 27 ವರ್ಷ. ಮೀಸಲು ವರ್ಗಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇದೆ. ಫೆಬ್ರುವರಿ 18ವರೆಗೆ ಅರ್ಜಿ ಸಲ್ಲಿಸಲು ಅವಕಾಶ ಇದೆ. ಅರ್ಜಿ ಶುಲ್ಕ ₹1,000.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.