ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಾಯಕ ಪ್ರಾಧ್ಯಾಪಕರ ಹುದ್ದೆ | ಸಾಮಾನ್ಯ ಜ್ಞಾನ – ಮಾದರಿ ಪ್ರಶ್ನೋತ್ತರ

ಸ್ಪರ್ಧಾತ್ಮಕ ಪರೀಕ್ಷೆ
Last Updated 12 ಜನವರಿ 2022, 19:31 IST
ಅಕ್ಷರ ಗಾತ್ರ

ಭಾಗ 4

ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಗಾಗಿ ರಾಜ್ಯ ಸರ್ಕಾರ ಸ್ಪರ್ಧಾತ್ಮಕ ಪರೀಕ್ಷೆ ನಡೆಸುತ್ತಿದೆ. ಈ ಪರೀಕ್ಷೆಯಲ್ಲಿನ ‘ಸಾಮಾನ್ಯ ಜ್ಞಾನ‘ ವಿಷಯಕ್ಕೆ ಸಂಬಂಧಿಸಿದ ಮಾದರಿ ಪ್ರಶ್ನೋತ್ತರಗಳನ್ನು ಇಲ್ಲಿ ನೀಡಲಾಗಿದೆ.


1) ಈ ಕೆಳಗೆ ಉಲ್ಲೇಖಿಸಿರುವ ರಾಷ್ಟ್ರಗಳಲ್ಲಿ ಯಾರು ಉಕ್ರೇನ್ ದೇಶದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ?

ಎ) ಚೀನಾ ಬಿ) ಅಮೆರಿಕ
ಸಿ) ರಷ್ಯಾ ಡಿ) ಟರ್ಕಿ

ಉತ್ತರ: ಸಿ

2) ವಿಶ್ವ ಸಂಸ್ಥೆ ಭದ್ರತಾ ಮಂಡಳಿಯ ಭಯೋತ್ಪಾದನಾ ನಿಗ್ರಹ ಸಮಿತಿಯ (Counter-Terrorism Committee) ಅಧ್ಯಕ್ಷ ಸ್ಥಾನ ಭಾರತಕ್ಕೆ ಒಲಿದಿದೆ. ಈ ಸ್ಥಾನಕ್ಕೆ ಯಾರನ್ನು ನೇಮಕ ಮಾಡಲಾಗಿದೆ?

ಎ) ಅನುಪಮ ರಾವ್ ಬಿ) ಜೆ. ಸುಶೀಲ ಕುಮಾರ
ಸಿ)ಟಿ.ಎಸ್. ತಿರುಮೂರ್ತಿ ಡಿ) ದೀಪಾ ಫರ್ನಾಂಡಿಸ್
ಉತ್ತರ: ಸಿ

3) ವಿಶ್ವದ ಅತಿಹೆಚ್ಚು ಮೌಲ್ಯಯುತ ಕಂಪನಿ
(3 ಟ್ರಿಲಿಯನ್ ಡಾಲರ್ ಮಾರುಕಟ್ಟೆಯ ಮೌಲ್ಯ) ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕಂಪನಿ ಯಾವುದು ?

ಎ) ಆ್ಯಪಲ್ ಬಿ) ಮೈಕ್ರೋ ಸಾಪ್ಟ್

ಸಿ) ವಿಪ್ರೋ ಡಿ) ಟಿಸಿಎಸ್

ಉತ್ತರ:- ಎ

4) ಭಾರತ ಮತ್ತು ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ನಡುವೆ ನಡೆಯಲಿರುವ ಮೂರು ಏಕದಿನ ಸರಣಿಯ ಕ್ರಿಕೆಟ್‌ ಪಂದ್ಯಗಳಲ್ಲಿ ಕನ್ನಡಿಗ ಕೆ.ಎಲ್‌.ರಾಹುಲ್‌ ಭಾರತದ ತಂಡವನ್ನು ಮುನ್ನಡೆಸಲಿದ್ದಾರೆ. ಹಾಗಾದರೆ ರಾಹುಲ್ ಸೇರಿದಂತೆ ಇಲ್ಲಿವರೆಗೆ ಭಾರತದ ಕ್ರಿಕೆಟ್ ತಂಡವನ್ನು ಮುನ್ನಡೆಸಿದ ಕನ್ನಡಿಗರೆಷ್ಟು?

ಎ) 10 ಬಿ) 5 ಸಿ) 3 ಡಿ) 8

ಉತ್ತರ:- ಬಿ

(ವಿವರಣೆ: ಭಾರತದ ತಂಡವನ್ನು ಮುನ್ನಡೆಸಿದವರಲ್ಲಿ ಜಿ.ಆರ್‌. ವಿಶ್ವನಾಥ್‌, ಸೈಯದ್ ಕಿರ್ಮಾನಿ ಎರಡನೆಯವರು, ರಾಹುಲ್ ದ್ರಾವಿಡ್ ಮೂರನೆಯವರು. ಅನಿಲ್ ಕುಂಬ್ಳೆ ನಾಲ್ಕನೆಯವರು, ಕೆ.ಎಲ್. ರಾಹುಲ್ ಐದನೆಯವರು)

5) ಭಾರತ ಈ ದಶಕದಲ್ಲೇ ಅತಿ ಹೆಚ್ಚು ಚಿನ್ನವನ್ನು 2021ರಲ್ಲಿ ಆಮದು ಮಾಡಿಕೊಂಡಿದೆ. ಹಾಗಾದರೆ ಭಾರತ ಆಮದು ಮಾಡಿಕೊಂಡಿರುವ ಚಿನ್ನದ ಪ್ರಮಾಣವೆಷ್ಟು?

ಎ) 1050 ಟನ್ ಬಿ) 430 ಟನ್
ಸಿ) 1250 ಟನ್ ಡಿ) 850 ಟನ್
ಉತ್ತರ:-ಎ

6) ಕರ್ನಾಟಕದ ಯಾವ ಉತ್ಸವವನ್ನು ವಿಶ್ವ ಪಾರಂಪರಿಕ ಆಚರಣೆಗಳ ಪಟ್ಟಿಯಲ್ಲಿ ಸೇರಿಸುವ ಪ್ರಸ್ತಾವವನ್ನು ಯುನೆಸ್ಕೊ ಮುಂದೆ ಇಡಲಾಗಿದೆ?

ಎ) ಬೆಂಗಳೂರಿನ ಕರಗ
ಬಿ) ಯುಗಾದಿ ಉತ್ಸವ
ಸಿ) ಸಾರ್ವಜನಿಕ ಗಣೇಶೋತ್ಸವ
ಡಿ) ಮೈಸೂರು ದಸರಾ

ಉತ್ತರ: ಡಿ

7) ಯಾರ ಸಹಾಯವೂ ಇಲ್ಲದೇ ಏಕಾಂಗಿಯಾಗಿ ದಕ್ಷಿಣ ಧ್ರುವವನ್ನು ತಲುಪಿದ ಭಾರತೀಯ ಮೂಲದ ಬ್ರಿಟಿಷ್ ಕ್ಯಾಪ್ಟನ್ ಯಾರು?

ಎ) ಹರ್‌ಪ್ರೀತ್ ಚಾಂದಿ ಬಿ) ಹರ್ ಚರಣ ಸಿಂಗ್ ಬಾದಲ್
ಸಿ) ಅಮೃತಾ ಕೌರ್ ಡಿ) ಜೈಸಿಂಗ್ ಶೇರಾವಾಲಾ
ಉತ್ತರ:ಎ

8) `ಬುಲ್ಲಿ ಬಾಯಿ’ ಏನಿದು?

ಎ) ಮೈಕ್ರೋಸಾಪ್ಟ್ ಕಾರ್ಪೋರೇಷನ್ ಗಿಟ್‌ಹಬ್ ಪ್ಲಾಟ್‌ಫಾರ್ಮ್‌ನಲ್ಲಿ ಸೃಷಿಸಲಾದ ಒಂದು ಅಪ್ಲಿಕೇಷನ್
ಬಿ) ಇನ್‌ಫೋಸಿಸ್ ಕಂಪನಿ ಸೃಷ್ಟಿಸಿದ ಒಂದು ಅಪ್ಲಿಕೇಷನ್
ಸಿ) ಮಣಿಪುರದ ಒಂದು ಜನಪದ ಕ್ರೀಡೆ
ಡಿ) ಮೇಲಿನ ಯಾವುದೂ ಅಲ್ಲ

ಉತ್ತರ:ಎ

**

ಟಾರ್ಪೆಡೊ
ಟಾರ್ಪೆಡೊ ಒಂದು ಜಲಾಂತರ್ಗಾಮಿ (ಸಬ್‌ಮೆರೀನ್‌) ನೌಕೆ. ಇದೊಂದು ಸ್ವಯಂಚಾಲಿತ ಅಸ್ತ್ರ. ಕಡಲಾಳದಿಂದಲೇ ಕ್ಷಿಪಣಿ ಪ್ರಯೋಗಿಸುವ ನೌಕೆ. ಶತ್ರು ಪಾಳಯದ ಜಲಾಂತರ್ಗಾಮಿಗಳ ಮೇಲೆ ದಾಳಿ ನಡೆಸುವುದಕ್ಕಾಗಿ ಟಾರ್ಪೆಡೊವನ್ನು ರೂಪಿಸಲಾಗಿದೆ. ಆಧುನಿಕ ಟಾರ್ಪೆಡೊದಲ್ಲಿ ಆಳ ಮತ್ತು ಚಲಿಸುವ ದಿಕ್ಕನ್ನು ನಿಯಂತ್ರಿಸುವ ಸೂಕ್ಷ್ಮ ಪರಿಕರಗಳಿರುತ್ತವೆ. ಶತ್ರುಗಳ ಹಡಗು ಮತ್ತು ಜಲಾಂತರ್ಗಾಮಿಗಳನ್ನು ನಾಶಪಡಿಸುವುದಕ್ಕಾಗಿ ಈ ಅಸ್ತ್ರವನ್ನು ಬಳಸಲಾಗುತ್ತದೆ.

1275ರಲ್ಲಿ ಈಜಿಫ್ಟ್‌ನ ರಾಜ ಮಾಮುಲಿಕ್ ಸುಲ್ತಾನೇಟ್‌ನ ಆಸ್ಥಾನದಲ್ಲಿ ಕೆಲಸ ಮಾಡುತ್ತಿದ್ದ ಸೇನಾ ವಿಜ್ಞಾನಿ ಹಸನ್ ಅಲ್ ರಾಮ್ಮಹ್‌ (Arab engineer`Hasan al-Rammah), ನೀರಿನಲ್ಲಿ ವೇಗವಾಗಿ ಚಲಿಸಬಲ್ಲ ಹಾಗೂ ಶತ್ರುಗಳನ್ನು ನೀರಿನಲ್ಲಿ ಮುಳುಗಿಸುವ ಸಾಧನದ ಬಗ್ಗೆ ಉಲ್ಲೇಖಿಸಿ ಲೇಖನವೊಂದನ್ನು ಬರೆದಿದ್ದರು. ನಂತರದ ದಿನಗಳಲ್ಲಿ ಇಂಗ್ಲೆಂಡಿನ ರಾಜ ಜೇಮ್ಸ್ ಆಡಳಿತದಲ್ಲಿದ್ದ ಎಂಜಿನಿಯರ್‌ ಕಾರ್ನೆಲಿಯಸ್ ಡ್ರೇಬೆಲ್ (DutchmanCornelius Drebbel) ಸಣ್ಣ ಟಾರ್ಪೆಡೊ(spar torpedoes) ತಯಾರಿಸಿದರು. ಇದನ್ನು 1626ರ ಲಾ ರೊಚೆಲ್ಲೆ ಮೇಲಿನ ದಾಳಿಯಲ್ಲಿ ಬಳಸಲಾಯಿತು (expeditions to La Rochellein 1626) . ಮುಂದೆ 1855ರಲ್ಲಿ ರಷ್ಯನ್ನರು ಕ್ರಿಮಿಯನ್ ಯುದ್ದದಲ್ಲಿ ಬ್ರಿಟಿಷರ ಹಡಗುಗಳನ್ನು ಉರುಳಿಸಲು ಟಾರ್ಪೆಡೊಗಳನ್ನು ಬಳಸಿದರು.

1866ರಲ್ಲಿ ಬ್ರಿಟನ್‌ನ ಎಂಜಿನಿಯರ್ ರಾಬರ್ಟ್ ವೈಟ್‌ಹೆಡ್ ಆಧುನಿಕ ಟಾರ್ಪೆಡೊಗಳನ್ನು ಅಭಿವೃದ್ಧಿಪಡಿಸಿದರು. ಈ ಟಾರ್ಪೆಡೊ ನೀರಿನೊಳಗೆ ಗಂಟೆಗೆ 13 ಕಿ.ಮೀ ವೇಗದಲ್ಲಿ (7 knots) ಚಲಿಸಬಲ್ಲ ಸಾಮರ್ಥ್ಯ ಹೊಂದಿತ್ತು. ಇದಾದ ನಂತರ ಆಧುನಿಕ ಉಪಕರಣಗಳೊಂದಿಗೆ ಹಲವು ಟಾರ್ಪೆಡೊಗಳು ತಯಾರಾದವು.

ಮಾಹಿತಿ: Spardha Bharathi UPSC, ಯೂಟ್ಯೂಬ್ ಚಾನೆಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT