ಮಂಗಳವಾರ, ಅಕ್ಟೋಬರ್ 19, 2021
24 °C

ಪಿಯುಸಿ ನಂತರ ಸ್ಪರ್ಧಾತ್ಮಕ ಪರೀಕ್ಷೆ

ಶಶಿ ಕೆಳಗಿನಮನೆ Updated:

ಅಕ್ಷರ ಗಾತ್ರ : | |

Prajavani

ಪ್ರತಿಯೊಬ್ಬ ವಿದ್ಯಾರ್ಥಿಗೂ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಎಂದರೆ ಮಹತ್ವದ ಮೈಲಿಗಲ್ಲುಗಳಿದ್ದಂತೆ. ಈ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವುದು ಯಶಸ್ಸಿಗೆ ಮುನ್ನುಡಿ ಎನ್ನಬಹುದು. ಹೆಚ್ಚಿನವರು ಪದವಿ ಮಾಡಲು ಸಿದ್ಧತೆ ನಡೆಸಿದರೆ, ಕೆಲವರು ಸರ್ಕಾರಿ ಹುದ್ದೆಗಳಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಲು ಶುರು ಮಾಡುತ್ತಾರೆ.

ಪಿಯುಸಿ ಅಥವಾ 12ನೇ ತರಗತಿಯ ನಂತರ ಸರ್ಕಾರಿ ಹುದ್ದೆಗಳಿಗಾಗಿ ಸಾಕಷ್ಟು ಸ್ಪರ್ಧಾತ್ಮಕ ಪರೀಕ್ಷೆಗಳಿದ್ದು, ವಿದ್ಯಾರ್ಥಿಗಳು ತಮ್ಮ ಆಸಕ್ತಿಗೆ ಅನುಗುಣವಾಗಿ ಆಯ್ಕೆ ಮಾಡಿಕೊಳ್ಳಬಹುದು. ಈ ತರಹದ ಪರೀಕ್ಷೆಗಳ ವಿಷಯ ಬಂದಾಗ ಮತ್ತು ಸರ್ಕಾರಿ ಉದ್ಯೋಗಕ್ಕೆ ಸೇರುವಾಗ ಪ್ರತಿಯೊಬ್ಬರ ಮನಸ್ಸಿಗೆ ಬರುವುದೆಂದರೆ ಉದ್ಯೋಗ ಭದ್ರತೆ. ಹೀಗಾಗಿ ಪಿಯುಸಿ ನಂತರವೂ ರಕ್ಷಣಾ ಇಲಾಖೆಗಳು, ಬ್ಯಾಂಕ್‌ ಮತ್ತು ರೈಲ್ವೇಸ್‌ನಲ್ಲಿ ಉದ್ಯೋಗಗಳು ಸಾಕಷ್ಟಿದ್ದು, ಉದ್ಯೋಗ ಭದ್ರತೆ ಬಯಸುವವರು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡಬಹುದು.

ನ್ಯಾಷನಲ್‌ ಡಿಫೆನ್ಸ್‌ ಅಕಾಡೆಮಿ (ಎನ್‌ಡಿಎ)
ಭಾರತದಲ್ಲಿ ಭದ್ರತಾ ಪಡೆಗಳಲ್ಲಿ ಉದ್ಯೋಗಕ್ಕೆ ಸೇರುವವರ ಪ್ರಥಮ ಆಯ್ಕೆ ಇದು ಎನ್ನಬಹುದು. ಎನ್‌ಡಿಎ ಮತ್ತು ಇಂಡಿಯನ್‌ ನೇವಲ್‌ ಅಕಾಡೆಮಿ ಕೋರ್ಸ್‌ (ಐಎನ್‌ಎಸಿ) ನ ಆರ್ಮಿ, ನೇವಿ ಹಾಗೂ ಏರ್‌ಫೋರ್ಸ್‌ ವಿಭಾಗಗಳಲ್ಲಿರುವ ಖಾಲಿ ಹುದ್ದೆಗಳಿಗೆ ಇದು ಪರೀಕ್ಷೆಗಳನ್ನು ನಡೆಸುತ್ತದೆ. ವಿವಿಧ ಅಕಾಡೆಮಿಗಳಿಗೆ ವಿವಿಧ ಬಗೆಯ ಅರ್ಹತೆಗಳಿರುತ್ತವೆ.

ಉದಾಹರಣೆಗೆ ಐಎನ್‌ಎಸಿಯ ಆರ್ಮಿ ವಿಭಾಗಕ್ಕೆ ಸ್ಪರ್ಧಾರ್ಥಿಗಳು ಪಿಯುಸಿ ಪಾಸಾಗಿರಬೇಕು. ಎನ್‌ಡಿಎಯ ವಿವಿಧ ವಿಭಾಗಗಳಿಗೆ ಭೌತಶಾಸ್ತ್ರ ಮತ್ತು ಗಣಿತ ತೆಗೆದುಕೊಂಡು ಪಿಯುಸಿ ಅಥವಾ 12ನೇ ತರಗತಿ ಉತ್ತೀರ್ಣರಾಗಿರಬೇಕು. ಈ ಪರೀಕ್ಷೆಗಳು ವರ್ಷಕ್ಕೆ ಸಾಮಾನ್ಯವಾಗಿ ಎರಡು ಸಲ, ಎರಡು ಹಂತಗಳಲ್ಲಿ ನಡೆಯುತ್ತವೆ.

ಮೊದಲ ಹಂತ ಲಿಖಿತ ಪರೀಕ್ಷೆ– ಗಣಿತ ಮತ್ತು ಜನರಲ್‌ ಎಬಿಲಿಟಿ, ಎರಡನೆಯದು ಎಸ್‌ಎಸ್‌ಬಿ ಸಂದರ್ಶನ.

ಈ ಪರೀಕ್ಷೆ ಹಾಗೂ ಸಂದರ್ಶನದಲ್ಲಿ ಪಾಸಾದವರು ಮೂರು ವರ್ಷಗಳ ತರಬೇತಿ ಪಡೆದು, ಜೆಎನ್‌ಯುನಲ್ಲಿ ಪದವಿ ಕೂಡ ಮಾಡಬಹುದು. ಈ ಪರೀಕ್ಷೆಗಳನ್ನು ಯುಪಿಎಸ್‌ಸಿ ನಡೆಸುತ್ತದೆ.

ಎಸ್‌ಎಸ್‌ಸಿ ಸಿಎಚ್‌ಎಸ್‌ಎಲ್‌
12ನೇ ತರಗತಿ ನಂತರ ಸರ್ಕಾರಿ ಉದ್ಯೋಗಕ್ಕೆ ಸೇರುವವರು ನೆಚ್ಚಿನ ಸ್ಪರ್ಧಾತ್ಮಕ ಪರೀಕ್ಷೆಯಿದು.

ಪೋಸ್ಟಲ್‌ ಸಹಾಯಕರು/ ಸಾರ್ಟಿಂಗ್‌ ಸಹಾಯಕರು, ಡೇಟಾ ಎಂಟ್ರಿ ಆಪರೇಟ್‌, ಲೋವರ್‌ ಡಿವಿಸಿನಲ್‌ ಕ್ಲರ್ಕ್‌, ಕೋರ್ಟ್‌ ಕ್ಲರ್ಕ್‌ ಮೊದಲಾದ ಹುದ್ದೆಗಳಿಗೆ ಈ ಪರೀಕ್ಷೆಯು ಮೂರು ಹಂತಗಳಲ್ಲಿ ನಡೆಯುತ್ತದೆ.

ಒಬ್ಜೆಕ್ಟಿವ್‌ ಮಲ್ಟಿಪಲ್‌ ಟೈಪ್‌, ಇಂಗ್ಲಿಷ್‌/ ಹಿಂದಿಯಲ್ಲಿ ಪ್ರಶ್ನೆ ಪತ್ರಿಕೆ, ಕೌಶಲ ಪರೀಕ್ಷೆ/ ಕಂಪ್ಯೂಟರ್‌ ಕೌಶಲ ಪರೀಕ್ಷೆ. ಮೊದಲ ಹಂತದ ಪರೀಕ್ಷೆ ಆನ್‌ಲೈನ್‌ನಲ್ಲಿ, ಎರಡನೆಯ ಹಂತ ಆಫ್‌ಲೈನ್‌ನಲ್ಲಿ ನಡೆಯುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು