ಬುಧವಾರ, ಜನವರಿ 19, 2022
27 °C
ಗ್ರೂಪ್-ಸಿ ತಾಂತ್ರಿಕೇತರ ಹುದ್ದೆ ಸ್ಪರ್ಧಾತ್ಮಕ ಪರೀಕ್ಷೆ

ಕರ್ನಾಟಕದಲ್ಲಿ ಪರಿಸರ ಸಮಸ್ಯೆಗಳು ಮತ್ತು ಅಭಿವೃದ್ಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗ್ರೂಪ್-ಸಿ ತಾಂತ್ರಿಕೇತರ ಹುದ್ದೆ ಸ್ಪರ್ಧಾತ್ಮಕ ಪರೀಕ್ಷೆ

ಕರ್ನಾಟಕ ಲೋಕ ಸೇವಾ ಆಯೋಗವು ಗ್ರೂಪ್ ಸಿ ವೃಂದದ ತಾಂತ್ರಿಕೇತರ ಹುದ್ದೆಗಳಿಗೆ ನಡೆಸಲಿರುವ ಸ್ಪರ್ಧಾತ್ಮಕ ಪರೀಕ್ಷೆಗೆ ಸಾಮಾನ್ಯ ಜ್ಞಾನ ವಿಭಾಗದಲ್ಲಿರುವ ‘ಕರ್ನಾಟಕದಲ್ಲಿ ಪರಿಸರ ಸಮಸ್ಯೆಗಳು ಮತ್ತು ಅಭಿವೃದ್ಧಿ ವಿಷಯಗಳು’ ಕುರಿತಾದ ಬಹುಆಯ್ಕೆ ಪ್ರಶ್ನೆಗಳು.

1. ಕೆಳಗಿನ ಹೇಳಿಕೆಗಳನ್ನು ಗಮನಿಸಿ

1. ರಾಜ್ಯದ ದಟ್ಟ ಅರಣ್ಯಗಳ ಶೇ 60ರಷ್ಟು ಭಾಗವು ಪಶ್ಚಿಮ ಘಟ್ಟದ ಪ್ರಾಂತ್ಯಗಳ ಪ್ರದೇಶದಲ್ಲಿದೆ. ನಮ್ಮ ರಾಜ್ಯದ ಭೌಗೋಳಿಕ ಪ್ರದೇಶ 1,91,791 ಚ. ಕಿ.ಮೀ ಯಷ್ಟಿದೆ. ಅದರಲ್ಲಿ 42,200 ಚ. ಕಿ.ಮೀ ಪ್ರದೇಶವು ಅರಣ್ಯ ಪ್ರದೇಶವಾಗಿದೆ.

2. ನಮ್ಮ ರಾಜ್ಯದಲ್ಲಿ 5 ರಾಷ್ಟ್ರೀಯ ಉದ್ಯಾನವನಗಳು (National Parks), 33 ವನ್ಯಜೀವಿ ಅಭಯಾರಣ್ಯಗಳು (Wildlife Sanctuaries), 14 ಸಂರಕ್ಷಿತ ಮೀಸಲು ಪ್ರದೇಶ (Conservation Reserves), 1 ಸಮುದಾಯ ಮೀಸಲು ಪ್ರದೇಶ (Community Reserve) ಇದೆ. ಇವುಗಳ ಒಟ್ಟು ವಿಸ್ತೀರ್ಣ 10,892 ಚ. ಕಿ.ಮೀ ಆಗಿದೆ. ಇದು ಒಟ್ಟು ಅರಣ್ಯ ಪ್ರದೇಶದ ಶೇ 25.33 ರಷ್ಟು ಭೂಪ್ರದೇಶವಾಗಿದೆ.

3. ನಮ್ಮ ದೇಶದಲ್ಲಿರುವ ಒಟ್ಟು ಆನೆಗಳ ಪೈಕಿ ಶೇ 25ರಷ್ಟು ಆನೆಗಳು ನಮ್ಮ ರಾಜ್ಯದಲ್ಲಿ ವಾಸಿಸುತ್ತಿವೆ. 2017ರ ಸಾಲಿನಲ್ಲಿ ಕೈಗೊಂಡ ಆನೆ ಗಣತಿಯ ಪ್ರಕಾರ ಕರ್ನಾಟಕವು 6,049 ಆನೆಗಳನ್ನು ಹೊಂದಿದೆ.

4. 2020-21ರಲ್ಲಿ ನಾಟಾ, ಉರುವಲು, ಎಲೆಗಳು, ಶ್ರೀಗಂಧ, ಬಿದಿರು, ಬೆತ್ತ ಮೊದಲಾದ ಅರಣ್ಯ ಉತ್ಪನ್ನಗಳ ಮಾರಾಟದಿಂದ 16,019 ಲಕ್ಷ ರೂಪಾಯಿಗಳನ್ನು ನಮ್ಮ ರಾಜ್ಯ ಸರ್ಕಾರವು ಗಳಿಸಿದೆ.

ಮೇಲಿನ ಹೇಳಿಕೆಗಳಲ್ಲಿ ಯಾವೆಲ್ಲಾ ಹೇಳಿಕೆಗಳು ಸರಿಯಾಗಿವೆ?

ಎ. ಹೇಳಿಕೆ 1 ಮತ್ತು 3ರ ಮಾತ್ರ ಸರಿಯಾಗಿದೆ

ಬಿ. ಹೇಳಿಕೆ 1, 2, ಮತ್ತು 3 ಮಾತ್ರ ಸರಿಯಾಗಿದೆ

ಸಿ. ಹೇಳಿಕೆ 1 ರಿಂದ 4ರ ತನಕ ಎಲ್ಲವೂ ಸರಿಯಾಗಿದೆ

ಡಿ. ಮೇಲಿನ ಯಾವ ಹೇಳಿಕೆಯೂ ಸರಿಯಾಗಿಲ್ಲ.

ಉತ್ತರ: ಸಿ

2. ಕೆಳಗಿನ ಹೇಳಿಕೆಗಳನ್ನು ಗಮನಿಸಿ

1. ಕರ್ನಾಟಕ ಸರ್ಕಾರ ಪ್ರಕಟಿಸಿದ ರಾಜ್ಯ ಎಕಾನಾಮಿಕ್ ಸರ್ವೆ 2020-21ರ ಪ್ರಕಾರ ಗಣಿಗಾರಿಕೆ, ಉಷ್ಣ ವಿದ್ಯುತ್, ಪೆಟ್ರೋ ಕೆಮಿಕಲ್ಸ್, ಸ್ಪಾಂಜ್ ಕಬ್ಬಿಣ ಘಟಕ, ಕೆಮಿಕಲ್ ಮತ್ತು ಫಾರ್ಮಾಸುಟಿಕಲ್ಸ್ ಉದ್ದಿಮೆ, ಜಿಲ್ಲಾ ಕ್ರಶರ್ ಘಟಕಗಳು ಮಾಲಿನ್ಯ ಉಂಟು ಮಾಡುವ ಸಾಮರ್ಥ್ಯವನ್ನು ಹೊಂದಿರುವ ಕೈಗಾರಿಕೆಗಳಾಗಿವೆ.

2. ಸಾಮಾನ್ಯವಾಗಿ ಹೇಳಿಕೆ 1ರಲ್ಲಿ ಉಲ್ಲೇಖಿತ ಕೈಗಾರಿಕೆಗಳು ಉತ್ಪಾದನೆ, ತಯಾರಿಕೆ, ವಿದ್ಯುಚ್ಛಕ್ತಿ, ಗಣಿಗಾರಿಕೆ ಮೊದಲಾದ ಕ್ಷೇತ್ರದಲ್ಲಿ ಬರುವ ಬಹು ಮುಖ್ಯವಾದ ಕ್ಷೇತ್ರಗಳಾಗಿವೆ. ರಾಜ್ಯದ ಗ್ರಾಸ್ ವ್ಯಾಲ್ಯೂ ಎಡಿಷನ್‌ (ಜಿವಿಎ)ಗೆ ತಯಾರಿಕೆ ಕ್ಷೇತ್ರವು ಶೇ 81.1ರಷ್ಟು, ವಿದ್ಯುತ್ ಕ್ಷೇತ್ರವು ಶೇ 11.8ರಷ್ಟು ಮತ್ತು ಗಣಿಗಾರಿಕಾ ಕ್ಷೇತ್ರವು ಶೇ 6.9ರಷ್ಟ ಕೊಡುಗೆಯನ್ನು ನೀಡುತ್ತವೆ.

3. ಕಬ್ಬಿಣದ ಅದಿರು ಗಣಿಗಳು ಬಳ್ಳಾರಿ, ಚಿತ್ರದುರ್ಗ, ತುಮಕೂರು ಜಿಲ್ಲೆಯಲ್ಲಿವೆ. ಲೈಮ್ ಸ್ಟೋನ್ ಗಣಿಗಳು ಕಲಬುರ್ಗಿ, ಯಾದಗಿರಿ, ಬಾಗಲಕೋಟೆ, ಬೆಳಗಾವಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿವೆ. ಮ್ಯಾಂಗನೀಸ್ ಖನಿಜ ಗಣಿಗಾರಿಕೆ ದಾವಣಗೆರೆ ಜಿಲ್ಲೆಯಲ್ಲಿ ನಡೆಯುತ್ತಿದೆ.

4. ನಮ್ಮ ಕರ್ನಾಟಕದಲ್ಲಿ 724 ಅದಿರು ಗಣಿಗಾರಿಕೆ ಉದ್ಯಮಗಳು ಇದ್ದು ಅದರಲ್ಲಿ ಮಾರ್ಚ್ 2020ರ ಹೊತ್ತಿಗೆ 123 ಕಾರ್ಯನಿರ್ವಹಿಸುತ್ತಿದ್ದವು. ಇವು ನಿರ್ಮಾಣ ಮಾಡುವ ಮಾಲಿನ್ಯ ದೊಡ್ಡ ಪ್ರಮಾಣದಲ್ಲಿದೆ.

ಮೇಲಿನ ಹೇಳಿಕೆಗಳಲ್ಲಿ ಯಾವೆಲ್ಲಾ ಹೇಳಿಕೆಗಳು ಸರಿಯಾಗಿವೆ?

ಎ. ಹೇಳಿಕೆ 1 ರಿಂದ 4ರತನಕ ಎಲ್ಲವೂ ಸರಿಯಾಗಿದೆ

ಬಿ. ಹೇಳಿಕೆ 1, 3 ಮತ್ತು 4 ಮಾತ್ರ ಸರಿಯಾಗಿದೆ

ಸಿ. ಹೇಳಿಕೆ 1 ರಿಂದ 3ರ ತನಕ ಮಾತ್ರ ಸರಿಯಾಗಿದೆ

ಡಿ. ಮೇಲಿನ ಯಾವ ಹೇಳಿಕೆಯೂ ಸರಿಯಾಗಿಲ್ಲ.

ಉತ್ತರ: ಎ

3. ಮಾರ್ಚ್ 2020ರ ಹೊತ್ತಿಗೆ ನಮ್ಮ ರಾಜ್ಯದಲ್ಲಿದ್ದ ಜಲ್ಲಿ ಕಲ್ಲು ಪುಡಿ ಮಾಡುವ ಘಟಕಗಳ ಸಂಖ್ಯೆ (ಸ್ಟೋನ್ ಕ್ರಷರ್‌ಗಳ) ಸಂಖ್ಯೆ ಎಷ್ಟು?

ಎ. 3,980

ಬಿ. 4,098

ಸಿ. 4,390

ಡಿ. 45,678

ಉತ್ತರ: ಸಿ

4. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯವರು ಮಾಪನ ಮಾಡಿರುವ ಸಮಗ್ರ ಪರಿಸರ ಮಾಲಿನ್ಯ ಸೂಚ್ಯಂಕದಲ್ಲಿ ಸಿಇಪಿಐ (Comprehensive Environmental Pollution Index) ಅಂಕವು 70ರ ಮೇಲೆ ಇದ್ದರೆ ಅವನ್ನು ಅಪಾಯಕಾರಿ ಮಲಿನಗೊಂಡಿರುವ (Critically Polluted Areas) ಕೈಗಾರಿಕಾ ಪ್ರದೇಶಗಳೆಂದು ಕರೆಯುವರು. ಕರ್ನಾಟಕದಲ್ಲಿರುವ ಅಂತಹ ಕೈಗಾರಿಕಾ ಪ್ರದೇಶಗಳನ್ನು ಗುರುತಿಸಿ.

ಎ) ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶ ಮತ್ತು ಬೆಂಗಳೂರಿನ ಆನೇಕಲ್‌ನಲ್ಲಿರುವ ಜಿಗಣಿ ಕೈಗಾರಿಕಾ ಪ್ರದೇಶ

ಬಿ) ಬೀದರ್ ಕೈಗಾರಿಕಾ ಪ್ರದೇಶ ಮತ್ತು ಕೋಲಾರ ಕೈಗಾರಿಕಾ ಪ್ರದೇಶ

ಸಿ) ರಾಯಚೂರು ಕೈಗಾರಿಕಾ ಪ್ರದೇಶ ಮತ್ತು ಭದ್ರಾವತಿ ಕೈಗಾರಿಕಾ ಪ್ರದೇಶ

ಡಿ) ಭದ್ರಾವತಿ ಕೈಗಾರಿಕಾ ಪ್ರದೇಶ ಮತ್ತು ಮಂಗಳೂರು ಬೈಕಂಪಾಡಿ ಕೈಗಾರಿಕಾ ಪ್ರದೇಶ

ಉತ್ತರ: ಎ

ವಿವರಣೆ: ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶ (ಸಿಇಪಿಐ ಅಂಕ: 78.12), ಬೆಂಗಳೂರಿನ ಆನೇಕಲ್‌ನಲ್ಲಿರುವ ಜಿಗಣಿ. ಕೈಗಾರಿಕಾ ಪ್ರದೇಶ (ಸಿಇಪಿಐ ಅಂಕ: 70.9), ಬೀದರ್ ಕೈಗಾರಿಕಾ ಪ್ರದೇಶ (ಸಿಇಪಿಐ ಅಂಕ: 65.64), ಕೋಲಾರ ಕೈಗಾರಿಕಾ ಪ್ರದೇಶ (ಸಿಇಪಿಐ ಅಂಕ: 65.64), ರಾಯಚೂರು ಕೈಗಾರಿಕಾ ಪ್ರದೇಶ (ಸಿಇಪಿಐ ಅಂಕ: 53.42) ಭದ್ರಾವತಿ ಕೈಗಾರಿಕಾ ಪ್ರದೇಶ (ಸಿಇಪಿಐ ಅಂಕ: 58.48), ಮಂಗಳೂರು ಬೈಕಂಪಾಡಿ ಪ್ರದೇಶ (ಸಿಇಪಿಐ ಅಂಕ: 58.20) ಗುರುತಿಸಲಾಗಿದೆ

5. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಥರ್ಮಲ್ ಪವರ್ ಪ್ಲಾಂಟ್, ಡಿಸ್ಟಿಲರಿ, ಸಿಮೆಂಟ್ ಕೈಗಾರಿಕೆ, ಪೆಟ್ರೋಲಿಯಂ ಸಹಿತ ಇತರೇ ರಿಫೈನರಿ ಕೈಗಾರಿಕೆಗಳು, ಬಲ್ಕ್ ಡ್ರಗ್ಸ್ ಮ್ಯಾನುಫ್ಯಾಕ್ಚರಿಂಗ್ ಇಂಡಸ್ಟ್ರಿಗಳು ಇದೇ ಮೊದಲಾದ 17 ಕೆಟಗರಿಯ ಕೈಗಾರಿಕೆಗಳನ್ನು ಹೈಲಿ ಪೊಲ್ಯೂಟಿಂಗ್ ಇಂಡಸ್ಟ್ರೀಸ್‌ ಎಂದು ಗುರುತಿಸಿದೆ. ಹಾಗಾದರೆ ಪ್ರಸ್ತುತ ಕರ್ನಾಟಕದಲ್ಲಿ ಈ ಕೆಟಗರಿಯಲ್ಲಿ ಎಷ್ಟು ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿವೆ?

ಎ. 205

ಬಿ. 206

ಸಿ. 208

ಡಿ. 204

ಉತ್ತರ: ಸಿ

6. ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ನೀರಿನ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಕ್ಲಾಸ್ ಎ, ಬಿ, ಸಿ, ಡಿ, ಇ ಎಂದು ಗುರುತಿಸಿದೆ. ಸಿ ನಲ್ಲಿ ಬರುವ ನೀರು ಶುದ್ಧೀಕರಣ ಪ್ರಕ್ರಿಯೆಗೆ ಒಳಪಡಿಸಿ ಕುಡಿಯಲು ಬಳಸುವ ನೀರಾಗಿದೆ. ಇಂತಹ ನೀರು ನಮ್ಮ ರಾಜ್ಯದಲ್ಲಿ ಶೇಕಡ …….. ರಷ್ಟಿದೆ

ಎ. 12

ಬಿ. 17

ಸಿ. 18

ಡಿ. 8

ಉತ್ತರ: ಬಿ

7. ನಮ್ಮ ರಾಜ್ಯದ ಆರೋಗ್ಯ ಕ್ಷೇತ್ರ ದೇಶದಲ್ಲಿಯೇ ಅತ್ಯುತ್ತಮ ಆರೋಗ್ಯ ಕ್ಷೇತ್ರ ಎಂದು ಹೆಸರು ಮಾಡಿದೆ. ದೇಶ– ವಿದೇಶಗಳಿಂದ ಚಿಕಿತ್ಸೆಗಾಗಿ ಜನರು ಇಲ್ಲಿಗೆ ಬರುತ್ತಾರೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಕಾರ ನಮ್ಮ ರಾಜ್ಯದಲ್ಲಿ 36021 ಹೆಲ್ತ್ ಕೇರ್ ಎಸ್ಟಾಬ್ಲಿಷ್‌ಮೆಂಟ್‌ಗಳು ಇವೆ. ಇವುಗಳಿಂದ ಪ್ರತಿ ದಿನ ಎಷ್ಟು ಟನ್ ವೈದ್ಯಕೀಯ ತ್ಯಾಜ್ಯ (ಬಯೊ ಮೆಡಿಕಲ್‌ ವೇಸ್ಟ್‌) ಉತ್ಪಾದನೆಯಾಗುತ್ತದೆ?

ಎ. 55.7 ಟನ್‌

ಬಿ. 88.9 ಟನ್

ಸಿ. 60.8 ಟನ್‌

ಡಿ. 77.5 ಟನ್

ಉತ್ತರ: ಡಿ

8. ನಮ್ಮ ರಾಜ್ಯದಲ್ಲಿ ಬಿಬಿಎಂಪಿ ಸೇರಿದಂತೆ 288 ಸ್ಥಳೀಯ ಸ್ವಯಂ ಆಡಳಿತ ಸಂಸ್ಥೆಗಳಿವೆ. ಅದರಲ್ಲಿ ಎಷ್ಟು ಸ್ಥಳೀಯ ಸ್ವಯಂ ಆಡಳಿತ ಸಂಸ್ಥೆಗಳು ಸಾಲಿಡ್ ವೇಸ್ಟ್/ ಘನ ತ್ಯಾಜ್ಯವನ್ನು ಭೂಮಿಯಲ್ಲಿ ಹೂಳಲು ಭೂ ಪ್ರದೇಶವನ್ನು ಮೀಸಲಿಟ್ಟಿವೆ?

ಎ. 250

ಬಿ. 240

ಸಿ. 214

ಡಿ. 114

ಉತ್ತರ: ಸಿ

9. ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಕೈಗಾ ಅಣುಸ್ಥಾವರದ 4ನೇ ಮತ್ತು 5ನೇ ಹಂತದ ಅಣುಸ್ಥಾವರದ ವಿಸ್ತರಣೆಗಾಗಿ 120 ಹೆಕ್ಟೇರ್ ಅರಣ್ಯ ಪ್ರದೇಶದಲ್ಲಿರುವ 8700 ಮರಗಳನ್ನು ಕಡಿಯಲು ಮಿನಿಸ್ಟರಿ ಆಫ್ ಎನ್ವಿರಾನ್‌ಮೆಂಟ್, ಫಾರೆಸ್ಟ್ ಎಂಡ್ ಕ್ಲೈಮೆಟಿಕ್ ಚೇಂಜ್ ಅನುಮತಿ ನೀಡಿವೆ. ಇದಕ್ಕೆ ಬದಲು ಯಾವ ಎರಡು ಜಿಲ್ಲೆಯಲ್ಲಿರುವ 732 ಹೆಕ್ಟೇರ್ ಪ್ರದೇಶದಲ್ಲಿ ಅರಣ್ಯ ಬೆಳೆಸಲು ಕೈಗಾ ನ್ಯೂಕ್ಲೀಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾಕ್ಕೆ ತಿಳಿಸಲಾಗಿದೆ?

ಎ) ಮಂಗಳೂರು ಮತ್ತು ಮಂಡ್ಯ

ಬಿ) ಮಂಡ್ಯ ಮತ್ತು ಹಾಸನ

ಸಿ) ಮಂಡ್ಯ ಮತ್ತು ಚಾಮರಾಜನಗರ

ಡಿ) ಕೊಡಗು ಮತ್ತು ಉತ್ತರಕನ್ನಡ

ಉತ್ತರ: ಸಿ

10. ಕೆಳಗಿನ ಹೇಳಿಕೆಗಳನ್ನು ಗಮನಿಸಿ

1. ಉತ್ತರ ಕನ್ನಡ ಜಿಲ್ಲೆಯು ನಮ್ಮ ದೇಶದಲ್ಲಿರುವ 8 ಬಯೋ ಡೈವರ್‌ಸಿಟಿ ಹಾಟ್‌ಸ್ಪಾಟ್‌ಗಳಲ್ಲಿ ಒಂದಾಗಿದೆ. 1973ರಲ್ಲಿ ಶೇ 74 ಅರಣ್ಯ ಇತ್ತು, ಇಂದು ಅಲ್ಲಿರುವ ಅರಣ್ಯದ ಪ್ರಮಾಣ ಶೇ 48 ರಷ್ಟು ಎಂಬ ಅಂಶವನ್ನು ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್ ಸೈನ್ಸ್ ಮತ್ತು ಖರಗ್‌ಪುರ್ ಐಐಟಿ ಸಂಶೋಧಕರ ತಂಡ ಪತ್ತೆ ಹಚ್ಚಿ ತನ್ನ ವರದಿಯಲ್ಲಿ ತಿಳಿಸಿದೆ.

2. ಉತ್ತರ ಕನ್ನಡ ಜಿಲ್ಲೆಯ ದಟ್ಟಡವಿಯಲ್ಲಿರುವ 4,600 ಸುಂದರವಾದ ಹೂಬಿಡುವ ಗಿಡಬಳ್ಳಿಗಳ ಪೈಕಿ ಶೇ 38ರಷ್ಟು ಭಾಗ ಅಳಿವಿನ ಅಂಚಿನಲ್ಲಿವೆ. 330 ಪ್ರಜಾತಿಯ ಬಣ್ಣಬಣ್ಣದ ಚಿಟ್ಟೆಗಳ ಪೈಕಿ ಶೇ 11ರಷ್ಟು ಅಳಿವಿನ ಅಂಚಿನಲ್ಲಿದೆ, 135 ತರಹದ ಉಭಯವಾಸಿಗಳ ಪೈಕಿ ಶೇ 75ರಷ್ಟು ಭಾಗ ಅಳಿವಿನ ಅಂಚಿನಲ್ಲಿವೆ. 289 ತರಹದ ಮೀನುಗಳ ಪೈಕಿ ಶೇ 41ರಷ್ಟು ಅಳಿವಿನಂಚಿನಲ್ಲಿವೆ.

3. ಗೋಕರ್ಣ-ಕುಮಟಾ ಮತ್ತು ಶಿರಸಿ ಭಾಗದಲ್ಲಿ ಕನ್‌ಸ್ಟ್ರಕ್ಷನ್ ಚಟುವಟಿಕೆಗಳಾದ ರಸ್ತೆ ನಿರ್ಮಾಣ, ರೈಲು ನಿರ್ಮಾಣ, ವಾಣಿಜ್ಯ ಕಟ್ಟಡಗಳ ನಿರ್ಮಾಣ ಇತ್ಯಾದಿಗಳು 1973ರ ಹೊತ್ತಿಗೆ ಶೇ 0.1ರಷ್ಟಿತ್ತು. ಇಂದು ಅದೂ ಶೇ 4.8ಕ್ಕೆ ಏರಿದೆ. ಅದರ ಪರಿಣಾಮ ಅರಣ್ಯದ ಪ್ರಮಾಣ ಶೇ 73 ರಿಂದ
ಶೇ 17.7ಕ್ಕೆ ಇಳಿದಿದೆ.

4. ಕಾಳಿ ನದಿ ಜಲಾನಯನ ಪ್ರದೇಶದಲ್ಲಿ ಸೂಪಾ ಡ್ಯಾಮ್, ಕೊಡಸಳ್ಳಿ ಡ್ಯಾಮ್, ಕದ್ರಾ ಡ್ಯಾಮ್ ನಿರ್ಮಾಣ ಮಾಡಿದ ಪರಿಣಾಮ ಅಲ್ಲಿದ್ದ ಶೇ 87ರಷ್ಟು ಅರಣ್ಯವು ಶೇಕಡ 54ಕ್ಕೆ ಇಳಿದಿದೆ.

ಮೇಲಿನ ಹೇಳಿಕೆಗಳಲ್ಲಿ ಯಾವೆಲ್ಲಾ ಹೇಳಿಕೆಗಳು ಸರಿಯಾಗಿವೆ?

ಎ) 1, 2 ಮತ್ತು 4 ಮಾತ್ರ ಸರಿಯಾಗಿದೆ

ಬಿ) ಹೇಳಿಕೆ 1, 3 ಮತ್ತು 4 ಮಾತ್ರ ಸರಿಯಾಗಿದೆ

ಸಿ) ಹೇಳಿಕೆ 1 ರಿಂದ 4ರ ತನಕ ಎಲ್ಲವೂ ಸರಿಯಾಗಿದೆ

ಡಿ) ಮೇಲಿನ ಎಲ್ಲಾ ಹೇಳಿಕೆಗಳು ತಪ್ಪಾಗಿವೆ

ಉತ್ತರ: ಸಿ

(ಮಾಹಿತಿ: Spardha Bharati UPSC ಯೂಟ್ಯೂಬ್‌ ಚಾನೆಲ್‌)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು