ಗುರುವಾರ , ಮೇ 26, 2022
26 °C
‘ಸಾಮಾನ್ಯ ಜ್ಞಾನ’ – ಪರೀಕ್ಷಾ ಮಾರ್ಗದರ್ಶನ

ಸಹಾಯಕ ಪ್ರಾಧ್ಯಾಪಕರ ಹುದ್ದೆಗಾಗಿ ಸ್ಪರ್ಧಾತ್ಮಕ ಪರೀಕ್ಷೆ: ಪರೀಕ್ಷಾ ಮಾರ್ಗದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ 1242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಗಾಗಿ ರಾಜ್ಯ ಸರ್ಕಾರ ಸ್ಪರ್ಧಾತ್ಮಕ ಪರೀಕ್ಷೆ ನಡೆಸುತ್ತಿದೆ. ಈ ಪರೀಕ್ಷೆಯಲ್ಲಿ ನಿಗದಿಪಡಿಸಿರುವ ‘ಸಾಮಾನ್ಯ ಜ್ಞಾನ‘ ವಿಷಯಕ್ಕೆ ಸಂಬಂಧಿಸಿದ ಕೆಲವು ಮಾದರಿ ಪ್ರಶ್ನೋತ್ತರಗಳನ್ನು ಈ ಅಂಕಣದಲ್ಲಿ ನೀಡಲಾಗಿದೆ.

***

1) ‘ವನಿತಾ ಸಂಗಾತಿ ಯೋಜನೆ’ ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
ಎ)
 ಗಾರ್ಮೆಂಟ್ಸ್‌ ಮಹಿಳಾ ನೌಕರರಿಗೆ ಉಚಿತ ಬಿಎಂಟಿಸಿ ಬಸ್ ಪಾಸ್ ನೀಡಿಕೆ
ಬಿ) ಬೀದರ್ – ಕಲಬುರಗಿ ನಗರಗಳಲ್ಲಿ ಮಹಿಳೆಗೆ ಉಚಿತ ಕಂಪ್ಯೂಟರ್ ಸಾಕ್ಷರತಾ ಕಾರ್ಯಕ್ರಮ
ಸಿ) ಕರ್ನಾಟಕ ರಾಜ್ಯದಲ್ಲಿರುವ ಎಲ್ಲಾ 18 ವರ್ಷ ಮೇಲ್ಪಟ್ಟ ಹೆಣ್ಣುಮಕ್ಕಳಿಗೆ ಎಲ್‌ಪಿಜಿ ಗ್ಯಾಸ್ ಸಂಪರ್ಕ ನೀಡಲು ಅವಕಾಶ
ಡಿ) ಮೇಲಿನ ಯಾವುದೂ ಅಲ್ಲ
ಉತ್ತರ: ಎ‌

2) ‘ಗೌಸಿಯನ್ ಮಿಕ್ಸ್‌ಚರ್‌ ಮಾಡೆಲ್’ (Gaussian Mixture model) ಬಳಸಿ ಈ ಕೆಳಗಿನ ಯಾವುದನ್ನು ಲೆಕ್ಕ ಹಾಕಲಾಗಿದೆ.
ಎ) ಕೋವಿಡ್‌-19 ಮೂರನೇ ಅಲೆ
ಬಿ) ಸದ್ಯದಲ್ಲಿಯೇ ಬರಲಿರುವ ಧೂಮಕೇತು
ಸಿ) 2024ರಲ್ಲಿ ನಡೆಯಲಿರುವ ಲೋಕಸಭೆಯ ಚುನಾವಣಾ ಫಲಿತಾಂಶ
ಡಿ) ಮೇಲಿನ ಯಾವುದೂ ಅಲ್ಲ.
ಉತ್ತರ: ಎ

(ವಿವರಣೆ:- ಡಿಸೆಂಬರ್‌ ಮಧ್ಯ ಭಾಗದಲ್ಲೇ ಆರಂಭವಾಗಿರುವ ‘ಕೋವಿಡ್‌-19’ ಸಾಂಕ್ರಾಮಿಕದ ‘ಓಮೈಕ್ರಾನ್‌’ ರೂಪಾಂತರ ತಳಿ, ದೇಶದಲ್ಲಿ ಸೋಂಕಿನ ಮೂರನೇ ಅಲೆ ಹರಡಲು ಕಾರಣವಾಗುತ್ತಿದೆ.  2022ರ ಫೆಬ್ರುವರಿ ವೇಳೆಗೆ ಸೋಂಕು ಗರಿಷ್ಠ ಮಟ್ಟ ತಲುಪಲಿದೆ ಎಂದು ಕಾನ್ಪುರ ಐಐಟಿಯ ಸಂಶೋಧಕರು ಅಂದಾಜಿಸಿದ್ದಾರೆ.

ಈ ವರದಿ ತಯಾರಿಕೆಗೆ ‘ಗೌಸಿಯನ್ ಮಿಕ್ಸ್‌ಚರ್‌ ಮಾಡೆಲ್’ ಎಂಬ ಸಂಖ್ಯಾಶಾಸ್ತ್ರದ ಪರಿಕರವನ್ನು ಬಳಸಲಾಗಿದೆ.

ದೇಶದಲ್ಲಿ ನಿತ್ಯ ದಾಖಲಾಗುತ್ತಿರುವ ಪ್ರಕರಣಗಳ ಸಂಖ್ಯೆ ಹಾಗೂ ಅತಿ ಹೆಚ್ಚು ಕೋವಿಡ್‌ ಪ್ರಕರಣಗಳು ದಾಖಲಾಗುತ್ತಿರುವ ವಿಶ್ವದ ಟಾಪ್‌ -10 ದೇಶಗಳಲ್ಲಿನ ಸೋಂಕಿನ ಪ್ರಮಾಣ ಅವಲೋಕಿಸಿ ಈ ವರದಿಯನ್ನು ತಯಾರಿಸಲಾಗಿದೆ.

ಸಬರ್ ಪರ್ಶದ್ ರಾಜೇಶ್ ಭಾಯ್, ಶುಭ್ರ ಶಂಕರ್‌ಧರ್ ಹಾಗೂ ಸುಲಭ್ ಅವರನ್ನೊಳಗೊಂಡ ತಂಡ (ಐಐಟಿಯ ಗಣಿತ ಹಾಗೂ ಸಂಖ್ಯಾಶಾಸ್ತ್ರ ವಿಭಾಗದಿಂದ) ಈ ಸಂಶೋಧನಾ ವರದಿ ತಯಾರಿಸಿದೆ).

3) ಇತ್ತೀಚೆಗೆ ಯಾರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಘೋಷಿಸಲಾಗಿದೆ?
ಎ)
ದೇವಿ ಪ್ರಸಾದ್ ಶೆಟ್ಟಿ
ಬಿ) ಪುನೀತ್ ರಾಜಕುಮಾರ್
ಸಿ) ಡಾ. ಎಂ.ಸಿ. ಮೋದಿ
ಡಿ) ಅನಂತಕುಮಾರ್
ಉತ್ತರ: ಬಿ

4) ‘ಪ್ರಳಯ’ ಖಂಡಾಂತರ ಕ್ಷಿಪಣಿ ಕುರಿತು ನೀಡಲಾದ ಹೇಳಿಕೆಗಳನ್ನು ಗಮನಿಸಿ
1)
ಭೂಮಿಯಿಂದ ಭೂಮಿಗೆ ನೆಗೆಯುವ ಖಂಡಾಂತರ ಕ್ಷಿಪಣಿ ಇದಾಗಿದೆ. ಸುಮಾರು 150 ಕಿ.ಮೀ.ನಿಂದ 500 ಕಿಮೀ ವರೆಗಿನ ಗುರಿ ತಲುಪುವ ಸಾಮರ್ಥ್ಯವನ್ನು ಹೊಂದಿದೆ.(Surface-to-Surface tactical short-range ballistic missile - SRBM)
2) ಇತ್ತೀಚಿಗೆ ಒಡಿಶಾದ ಬಾಲಸೋರ್‌ನಲ್ಲಿರುವ ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಯಶಸ್ವಿ ಉಡಾವಣೆಯನ್ನು ಮಾಡಲಾಯಿತು.
3) ಈ ಕ್ಷಿಪಣಿಯಲ್ಲಿ ಮಾರ್ಗದರ್ಶನಕ್ಕಾಗಿ ಅತ್ಯಾಧುನಿಕ ನ್ಯಾವಿಗೇಷನ್ ಮತ್ತು ಏವಿಯಾನಿಕ್ಸ್ ತಂತ್ರಜ್ಞಾನ ಅಳವಡಿಕೆಯಾಗಿದೆ. ಇದು ಕಡಿಮೆ ಪ್ರಮಾಣದ ಅಂತರದಲ್ಲಿ ವೈರಿಗಳ ಮೇಲೆ ನಿಗಾ ಇಡಲು ಅನುಕೂಲವಾಗಿದೆ.
4) ಇದು ರಷ್ಯಾ ದೇಶದ ಸಹಯೋಗದೊಂದಿಗೆ ಡಿಆರ್‌ಡಿಒ ಅಭಿವೃದ್ಧಿಪಡಿಸಿದ ಮೊದಲ ಕ್ಷಿಪಣಿಯಾಗಿದೆ.
ಇದರಲ್ಲಿ ಯಾವ ಹೇಳಿಕೆ ಸರಿಯಾಗಿದೆ?

ಎ) ಹೇಳಿಕೆ 1, 2 ಮತ್ತು 4 ಮಾತ್ರ ಸರಿಯಾಗಿದೆ
ಬಿ) ಹೇಳಿಕೆ 1ರಿಂದ 4ರತನಕ ಎಲ್ಲವೂ ಸರಿಯಾಗಿದೆ
ಸಿ) ಹೇಳಿಕೆ 1, 2,3 ಮಾತ್ರ ಸರಿಯಾಗಿದೆ
ಡಿ) ಮೇಲಿನ ಯಾವುದೂ ಸರಿಯಾಗಿಲ್ಲ
ಉತ್ತರ: ಸಿ

5) ಚಿಲಿ ದೇಶದ ನೂತನ ಅಧ್ಯಕ್ಷರಾಗಿ ಯಾರು ಆಯ್ಕೆಯಾದರು?
ಎ)
ಗ್ರೆಬಿಯನ್ ಜಾನ್ ಸನ್ 
ಬಿ) ಗೆಬ್ರಿಯಲ್ ಬೋರಿಕ್
ಸಿ) ಜೋಸ್ ಅಂಟೊನಿಯೊ ಕಾಸ್ಟ್
ಡಿ) ಮೇಲಿನ ಯಾರೂ ಅಲ್ಲ
ಉತ್ತರ: ಬಿ

6) ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ (Khyber Pakhtunkhwa province) 2300 ವರ್ಷ ಹಳೆಯದಾದ ಭಗವಾನ್ ಬುದ್ಧನ ದೇವಾಲಯ ಪತ್ತೆಯಾಗಿದೆ. ಇದನ್ನು ಪಾಕಿಸ್ತಾನ ಮತ್ತು _____________________ ದೇಶದ ಪುರಾತತ್ವ ತಜ್ಞರು ಜಂಟಿಯಾಗಿ ಉತ್ಖನನ ಮಾಡುವ ಮೂಲಕ ಪತ್ತೆ ಹಚ್ಚಿದರು.
ಎ)
ಭಾರತ 
ಬಿ) ಇಂಗ್ಲೆಂಡ್‌ 
ಸಿ) ಜರ್ಮನಿ 
ಡಿ) ಇಟಲಿ

ಉತ್ತರ: ಡಿ

7) ಮನುಷ್ಯರಲ್ಲಿ ಎಷ್ಟು ಜೋಡಿ ಲಾಲಾರಸ ಗ್ರಂಥಿಗಳಿವೆ?
ಎ)
3
ಬಿ) 5
ಸಿ) 7
ಡಿ) 2

ಉತ್ತರ:

ವಿವರಣೆ:- ಪ್ರಮುಖ ಲಾಲಾರಸ ಗ್ರಂಥಿಗಳಲ್ಲಿ ಮೂರು ಜೋಡಿಗಳಿವೆ:
1)
ಪ್ಯಾರೊಟಿಡ್ ಗ್ರಂಥಿಗಳು (Parotid glands),
2) ಸಬ್‌ಮ್ಯಾಂಡಿಬ್ಯುಲರ್ ಗ್ರಂಥಿಗಳು (Submandibular glands)
3) ಸಬ್‌ಲಿಂಗ್ಯುಯಲ್ ಗ್ರಂಥಿಗಳು (Sublingual glands)
8) ಈ ಕೆಳಗಿನ ಯಾವ ಇಲಾಖೆಗಳು ಕೇಂದ್ರ ಬಜೆಟ್ ಅನ್ನು ಸಿದ್ಧಪಡಿಸುತ್ತವೆ?

ಎ) ಬಜೆಟ್ ಸೇವೆ ಇಲಾಖೆ
ಬಿ) ಆರ್ಥಿಕ ವ್ಯವಹಾರಗಳ ಇಲಾಖೆ(Department of Economic Affairs)
ಸಿ) ನೀತಿ ಆಯೋಗ
ಡಿ) ಆರ್‌ಬಿಐ
ಉತ್ತರ: ಬಿ

9) ‘ಇಂಟರ್ ನ್ಯಾಷನಲ್ ಡಿಸಾಸ್ಟರ್ ಮ್ಯಾನೇಜ್‌ಮೆಂಟ್ ಡೇ’ ಎಂದು ಯಾವ ದಿನ ಆಚರಿಸಲಾಗುತ್ತದೆ?
ಎ) ಅಕ್ಟೋಬರ್ 13
ಬಿ) ಅಕ್ಟೋಬರ್ 15
ಸಿ) ನವೆಂಬರ್ 16
ಡಿ) ಡಿಸೆಂಬರ್ 4
ಉತ್ತರ:

10) ಸ್ವತಂತ್ರ ಭಾರತದ ಮೊದಲ ಕೇಂದ್ರ ಸರ್ಕಾರದ ಶಿಕ್ಷಣ ಸಚಿವ ಯಾರು?
ಎ)
ಎಂಸಿ ಚಾವ್ಲಾ 
ಬಿ) ರಫಿ ಅಹ್ಮದ್ ಕಿದ್ವಾಯಿ
ಸಿ) ಎನ್ ಜಿ ಅಯ್ಯಂಗಾರ
ಡಿ) ಮೌಲಾನಾ ಅಬ್ದುಲ್ ಕಲಾಂ ಆಜಾದ್
ಉತ್ತರ: ಡಿ

ಮಾಹಿತಿ: Spardha Bharati UPSC, ಯೂಟ್ಯೂಬ್‌ ಚಾನೆಲ್‌

ರಾಷ್ಟ್ರೀಯ ವೈದ್ಯರ ದಿನ ಮತ್ತು ಬಿ. ಸಿ. ರಾಯ್‌ ಜನ್ಮದಿನ
ಪ್ರತಿ ವರ್ಷ ಜುಲೈ 1 ಅನ್ನು ‘ರಾಷ್ಟ್ರೀಯ ವೈದ್ಯರ ದಿನ’ವನ್ನಾಗಿ ಆಚರಿಸಲಾಗುತ್ತದೆ. ಇದು ಭಾರತದ ವೈದ್ಯರೆಲ್ಲರೂ ಗೌರವಿಸುವ ಡಾ.ಬಿ.ಸಿ.ರಾಯ್ ಅವರ ಜನ್ಮದಿನ. ರಾಯ್‌ ಅವರ ಸ್ಮರಣಾರ್ಥ ಭಾರತ ಸರ್ಕಾರ ಈ ದಿನವನ್ನು ‘ವೈದ್ಯರ ದಿನ’ ಎಂದು ಆಚರಿಸುವಂತೆ ಸೂಚಿಸಿದೆ.

ಬಿದನ್ ಚಂದ್ರರಾಯ್ (ಬಿ. ಸಿ. ರಾಯ್) ಪಟ್ನಾದ ಬಂಕಿಪುರದ ಬೆಂಗಾಲಿ ಕುಟುಂಬವೊಂದರಲ್ಲಿ 1882ರ ಜುಲೈ 1 ರಂದು ಜನಿಸಿದರು. ಇವರ ತಂದೆ ಪ್ರಕಾಶ್ ಚಂದ್ರರಾಯ್ ಹಾಗೂ ತಾಯಿ ಅಂಗೋರ್ಕಮಣಿ ದೇವಿ. ತಂದೆ ಅಬಕಾರಿ‌ ಇನ್ಸ್‌ಪೆಕ್ಟರ್ ಆಗಿದ್ದರು. ತಾಯಿ ಸಮಾಜ ಸೇವಕಿಯಾಗಿದ್ದರು. ಇಬ್ಬರೂ ಬ್ರಹ್ಮ ಸಮಾಜದಲ್ಲಿ ಸಕ್ರಿಯರಾಗಿದ್ದರು.

ಬಿ.ಸಿ. ರಾಯ್ ಕೋಲ್ಕತ್ತಾ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣವನ್ನು ಪಡೆದರು.  ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ್ದರು. ಇವರು ಭಾರತೀಯ ವೈದ್ಯ ಪರಿಷತ್ತಿನ ಸ್ಥಾಪನೆಯಲ್ಲಿ ಮಹತ್ವದ ಪಾತ್ರವಹಿಸಿದ್ದರು. ಹೀಗಾಗಿ ರಾಯ್‌ ಜನ್ಮ ದಿನವನ್ನು ‘ರಾಷ್ಟ್ರೀಯ ವೈದ್ಯರ ದಿನ’ ಎಂದು ಆಚರಿಸಲಾಗುತ್ತದೆ. ಮಹಾತ್ಮ ಗಾಂಧಿಯವರ ಅನುಯಾಯಿಯಾಗಿದ್ದ ಇವರು ಅಸಹಕಾರ ಚಳವಳಿಯಲ್ಲಿ ಭಾಗವಹಿಸಿದ್ದರು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿಯೂ ಸೇವೆ ಸಲ್ಲಿಸಿದ ರಾಯ್‌ ಅವರಿಗೆ 1961ರಲ್ಲಿ ‘ಭಾರತ ರತ್ನ‘ ಪುರಸ್ಕಾರ ನೀಡಿ ಗೌರವಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು