ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

KPSC-UPSC: ಜಿ–20 ದೇಶಗಳ ಮಾಹಿತಿ ಮತ್ತು ಕಾರ್ಯವೈಖರಿ

Last Updated 3 ಆಗಸ್ಟ್ 2022, 19:30 IST
ಅಕ್ಷರ ಗಾತ್ರ

ಯುಪಿಎಸ್‌ಸಿ-ಪ್ರಿಲಿಮ್ಸ್ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ-3, ಕೆಪಿಎಸ್‌ಸಿ-ಪ್ರಿಲಿಮ್ಸ್ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ-3 ಸೇರಿದಂತೆ ಎಲ್ಲಾ ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವ ಪ್ರಚಲಿತ ವಿದ್ಯಮಾನ ಕುರಿತ ಮಾಹಿತಿ ಇಲ್ಲಿದೆ.

***

ನೀತಿ ಆಯೋಗದಮಾಜಿಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮಿತಾಬ್ ಕಾಂತ್ ಅವರನ್ನುಇತ್ತೀಚೆಗೆ 20 ರಾಷ್ಟ್ರಗಳ ಸಂಘಟನೆಯಾದ ‘ಜಿ–20’ಗೆ ಭಾರತದ ಹೊಸ ಶೆರ್ಪಾ ಆಗಿನೇಮಿಸಲಾಯಿತು. ಹಿಂದೆ ಈ ಸ್ಥಾನದಲ್ಲಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪೀಯೂಷ್ ಗೋಯಲ್ ಇದ್ದರು. ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಪೀಯೂಷ್ ಅವರನ್ನು ನೇಮಕ ಮಾಡಲಾಗಿತ್ತು.

ಈ ವರ್ಷದ ಕೊನೆಯಲ್ಲಿ ಭಾರತವು ಜಿ–20ಯ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಲಿದೆ. ಅದಕ್ಕೂ ಮುನ್ನವೇ ಅಮಿತಾಬ್ ಕಾಂತ್ ಅವರನ್ನು ನೇಮಿಸಲಾಗಿದೆ. ಭಾರತವು ಇದೇ ವರ್ಷ ಡಿಸೆಂಬರ್‌ 1 ರಂದು ‘ಜಿ–20’ಯ ಅಧ್ಯಕ್ಷ ಸ್ಥಾನ ವಹಿಸಲಿದೆ. ಈ ಅಧಿಕಾರಾವಧಿ 2023ರ ನವೆಂಬರ್‌ 30ರವರೆಗೆ ಇರಲಿದೆ. ಭಾರತ ಮುಂದಿನ ವರ್ಷ ಜಿ– 20 ಶೃಂಗಸಭೆಯ ಅತಿಥ್ಯ ವಹಿಸಲಿದೆ.

ಜಿ–20 ರಚನೆ ಹೇಗೆ ?

ಇದು 19 ದೇಶಗಳು ಮತ್ತು ಯುರೋಪಿಯನ್‌ ಒಕ್ಕೂಟ ಸೇರಿ 20 ರಾಷ್ಟ್ರಗಳನ್ನೊಳಗೊಂಡ ಒಂದು ಅಂತರರಾಷ್ಟ್ರೀಯ ವೇದಿಕೆ. ಇದು 1999 ರಲ್ಲಿ ರಚನೆಯಾಯಿತು. ಅಂತರಾಷ್ಟ್ರೀಯ ಹಣಕಾಸು ಸ್ಥಿರತೆಯನ್ನು ಸಾಧಿಸಲು ನೀತಿನಿಯಮಗಳನ್ನು ಚರ್ಚಿಸುವುದಕ್ಕಾಗಿ ರಚಿಸಲಾದ ವೇದಿಕೆಯಾಗಿದೆ.

l1997-1999ರಲ್ಲಿ ತಲೆದೋರಿದ ಜಾಗತಿಕ ಆರ್ಥಿಕ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನದ ಭಾಗವಾಗಿ ಇಂಡೋನೇಷ್ಯಾ ಸೇರಿದಂತೆ ಮಧ್ಯಮ-ಆದಾಯ ಹೊಂದಿರುವ ಹಲವು ರಾಷ್ಟ್ರಗಳನ್ನು ಒಳಗೊಂಡಂತೆ ಈ ವೇದಿಕೆಯನ್ನು ರಚಿಸಲಾಗಿದೆ.

lಪ್ರಾರಂಭದಲ್ಲಿ ಜಿ 7 ರಾಷ್ಟ್ರಗಳ ಹಣಕಾಸು ಸಚಿವಾಲಯಗಳ ಸಲಹೆಯ ಮೇರೆಗೆ, ಜಿ–20 ಹಣಕಾಸು ಸಚಿವರು ಮತ್ತು ಬ್ಯಾಂಕ್ ಗವರ್ನರ್‌ಗಳು, ಜಾಗತಿಕ ಆರ್ಥಿಕ ಬಿಕ್ಕಟ್ಟು ಮತ್ತು ಅದರ ಪರಿಣಾಮಗಳ ಬಗ್ಗೆ ಚರ್ಚಿಸುವ ಸಲುವಾಗಿ ಸಭೆಗಳನ್ನು ನಡೆಸಿದ್ದರು. ಮುಂದೆ ನಿಯಮಿತವಾಗಿ ಚಳಿಗಾಲದ ಅವಧಿಯಲ್ಲಿ ಹಣಕಾಸು ಸಚಿವರ ಮಟ್ಟದ ಸಭೆ ನಡೆಸುವ ಪರಿಪಾಠ ನಡೆದುಕೊಂಡು ಬಂದಿದೆ.

l2008ರ ನವೆಂಬರ್ 14 ಮತ್ತು15 ರಂದು, ಜಿ–20 ರಾಷ್ಟ್ರಗಳ ನಾಯಕರು ಮೊದಲ ಬಾರಿಗೆ ಈ ಶೃಂಗಸಭೆಯಲ್ಲಿ ಭಾಗವಹಿಸಿದ್ದರು. ಆ ಸಭೆಯಲ್ಲಿ ಅಮೆರಿಕದಲ್ಲಿ ಉಂಟಾಗಿದ್ದ ಆರ್ಥಿಕ ಬಿಕ್ಕಟ್ಟಿನ ಪ್ರಭಾವ ಮತ್ತು ಜಾಗತಿಕ ಪರಿಣಾಮಗಳ ಕುರಿತು ಎಲ್ಲ ನಾಯಕರು ಚರ್ಚಿಸಿದ್ದರು. ಸಭೆಯಲ್ಲಿ ಚರ್ಚೆಯಾದ ವಿಷಯವನ್ನು ಸಂಯೋಜಿಸಿ, ಅದರ ಪ್ರಕಾರ ಮುಂದಿನ ಸಭೆಗಳನ್ನು ನಡೆಸುವುದಾಗಿ ಒಪ್ಪಿಕೊಂಡರು.

ಜಿ–20 ಎಂದರೇನು?

lಜಿ–20, ಆರ್ಥಿಕವಾಗಿ ಅಭಿವೃದ್ಧಿ ಹೊಂದಿದ ಹಾಗೂ ಅಭಿವೃದ್ಧಿ ಹೊಂದುತ್ತಿರುವ ವಿಶ್ವದ ಪ್ರಮುಖ ದೇಶಗಳನ್ನು ಒಳಗೊಂಡಿರುವ→ಬಹುಪಕ್ಷೀಯ ವೇದಿಕೆ. ಇದುಒಂದು ನಿರ್ದಿಷ್ಟ ಕಾರ್ಯತಂತ್ರ ರೂಪಿಸುವ ಉದ್ದೇಶವನ್ನು ಒಳಗೊಂಡಿರುತ್ತದೆ.ಈ ವೇದಿಕೆ ಭವಿಷ್ಯದ ಜಾಗತಿಕ ಆರ್ಥಿಕ ಬೆಳವಣಿಗೆ ಮತ್ತು ಸಮೃದ್ಧಿಯನ್ನು ಭದ್ರಪಡಿಸುವಲ್ಲಿ ಕಾರ್ಯತಂತ್ರ ರೂಪಿಸುವ ಪಾತ್ರ ನಿರ್ವಹಿಸುತ್ತದೆ.

lಒಟ್ಟಾಗಿ ಜಿ–20 ಸದಸ್ಯರು ವಿಶ್ವದ ಜಿಡಿಪಿಯ ಸರಿಸುಮಾರು ಶೇ 85ರಷ್ಟು, ಅಂತರರಾಷ್ಟ್ರೀಯ ವ್ಯಾಪಾರದ ಶೇ 75ರಷ್ಟು ಮತ್ತು ವಿಶ್ವ ಜನಸಂಖ್ಯೆಯ ಶೇ 60 ರಷ್ಟು ಭಾಗವನ್ನು ಪ್ರತಿನಿಧಿಸುತ್ತಾರೆ.

l1999 ರಲ್ಲಿ ಹಣಕಾಸು ಸಚಿವರ ಮತ್ತು ಕೇಂದ್ರೀಯ ಬ್ಯಾಂಕ್ ಗವರ್ನರ್‌ಗಳ ಸಭೆಯಾಗಿ ಪ್ರಾರಂಭವಾದ ಜಿ–20 ಶೃಂಗಸಭೆ ಮುಂದೆ, ಅನೇಕ ರಾಷ್ಟ್ರಗಳು ಮತ್ತು ಸರ್ಕಾರದ ಮುಖ್ಯಸ್ಥರನ್ನು ಒಳಗೊಂಡ ವಾರ್ಷಿಕ ಶೃಂಗಸಭೆಯಾಗಿ ವಿಕಸನಗೊಂಡಿದೆ.

lಜೊತೆಗೆ, ಶೆರ್ಪಾ ಸಭೆಗಳು (ಮಾತುಕತೆಗಳನ್ನು ನಡೆಸುವ ಮತ್ತು ನಾಯಕರ ನಡುವೆ ಒಮ್ಮತವನ್ನು ಮೂಡಿಸುವ ಉಸ್ತುವಾರಿ), ಕಾರ್ಯಪಡೆಗಳು ಮತ್ತು ಅನೇಕ ವಿಶೇಷ ಸಮಾವೇಶಗಳನ್ನು ವರ್ಷವಿಡೀ ಆಯೋಜಿಸಲಾಗುತ್ತದೆ.

ಜಿ–20 ಸದಸ್ಯರು

lಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಭಾರತ, ಇಂಡೋನೇಷ್ಯಾ, ಇಟಲಿ, ಜಪಾನ್, ದಕ್ಷಿಣ ಕೊರಿಯಾ, ಮೆಕ್ಸಿಕೊ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಬ್ರಿಟನ್‌, ಅಮೆರಿಕ ಮತ್ತು ಐರೋಪ್ಯ ಒಕ್ಕೂಟಗಳು. ಕಾಯಂ ಅತಿಥಿಯಾಗಿ ಸ್ಪೇನ್‌ ದೇಶವನ್ನೂ ಈ ವೇದಿಕೆಗೆ ಆಹ್ವಾನಿಸಲಾಗಿದೆ.

lಜಿ–20ಯ ಅಧ್ಯಕ್ಷ ಸ್ಥಾನ ಹೊಂದಿದ ದೇಶವು ಪ್ರತಿ ವರ್ಷ ನಡೆಯುವ ಶೃಂಗಸಭೆಗೆ ಅತಿಥೇಯ ರಾಷ್ಟ್ರಗಳನ್ನು ಆಹ್ವಾನಿಸುತ್ತದೆ. ಈ ವೇದಿಕೆಯ ಎಲ್ಲ ಕಾರ್ಯಕ್ರಮದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತದೆ. ಹಲವು ಅಂತರರಾಷ್ಟ್ರೀಯ ಮತ್ತು ಪ್ರಾದೇಶಿಕ ಸಂಸ್ಥೆಗಳೂ ಈ ಸಭೆಯಲ್ಲಿ ಭಾಗವಹಿಸಲು ಅವಕಾಶವಿದೆ. ಇದು ಜಿ–20 ವೇದಿಕೆಗೆ ಇನ್ನೂ ವಿಶಾಲವಾದ ಪ್ರಾತಿನಿಧ್ಯವನ್ನು ನೀಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT