ಮಂಗಳವಾರ, ಜನವರಿ 25, 2022
28 °C

ಕೆಎಸ್‌ಆರ್‌ಪಿ, ಐಆರ್‌ಬಿ ಪರೀಕ್ಷಾ ಮಾರ್ಗದರ್ಶಿ: ಮಾದರಿ ಪ್ರಶ್ನೋತ್ತರ

ಕೆ.ಎಚ್‌.ಮಂಜುನಾಥ್ Updated:

ಅಕ್ಷರ ಗಾತ್ರ : | |

 ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿಯಿರುವ 70 ವಿಶೇಷ ಮೀಸಲು ಸಬ್‌ಇನ್‌ಸ್ಪೆಕ್ಟರ್‌ (ಕೆಎಸ್‌ಆರ್‌ಪಿ ಮತ್ತು ಐಆರ್‌ಬಿ) ಹುದ್ಧೆಗಳ ನೇರ ನೇಮಕಾತಿಗಾಗಿ ಸ್ಪರ್ಧಾತ್ಮಕ ಪರೀಕ್ಷೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಪರೀಕ್ಷೆಗೆ ನಿಗದಿಪಡಿ ಸಿರುವ ಪತ್ರಿಕೆ–2ರಲ್ಲಿನ ‘ಸಾಮಾನ್ಯ ಅಧ್ಯಯನ‘ ಕುರಿತಾದ ಮಾದರಿ ಬಹುಆಯ್ಕೆಗಳ ಪ್ರಶ್ನೋತ್ತರಗಳು ಇಲ್ಲಿವೆ.

1) ಪದ್ಮಶ್ರೀ ಪುರಸ್ಕೃತ ಸಿಂಧೂ ತಾಯಿ ಸಪ್‌ಕಾಲ್ ಅವರು ಇತ್ತೀಚಿಗೆ ನಿಧನರಾದರು. ಅವರ ವಿಶೇಷತೆ ಏನು?

ಎ) 2000ಕ್ಕೂ ಅಧಿಕ ಅನಾಥ ಮಕ್ಕಳನ್ನು ದತ್ತು ಪಡೆದು ಸಾಕಿ ಸಲಹಿದ್ದರು
ಬಿ) ಸಾವಿರಾರು ಅಂಗವಿಕಲರಿಗೆ ಉದ್ಯೋಗ ನೀಡಿ ಸಲಹಿದ್ದರು
ಸಿ) ಮಾತು ಬರದ ಮಕ್ಕಳಿಗೆ ಚಿಕಿತ್ಸೆ ನೀಡುವ ನಾಟಿ ವೈದ್ಯರಾಗಿ ಪ್ರಸಿದ್ಧರಾಗಿದ್ದರು.
ಡಿ) ಮೇಲಿನ ಯಾವುದೂ ಅಲ್ಲ

ಉತ್ತರ:ಎ

2) ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿಯಿರುವ 70 ವಿಶೇಷ ಮೀಸಲು ಸಬ್‌ಇನ್‌ಸ್ಪೆಕ್ಟರ್‌ (ಕೆಎಸ್‌ಆರ್‌ಪಿ ಮತ್ತು ಐಆರ್‌ಬಿ) ಹುದ್ಧೆಗಳ ನೇರ ನೇಮಕಾತಿಗಾಗಿ ಸ್ಪರ್ಧಾತ್ಮಕ ಪರೀಕ್ಷೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಪರೀಕ್ಷೆಗೆ ನಿಗದಿಪಡಿ ಸಿರುವ ಪತ್ರಿಕೆ–2ರಲ್ಲಿನ ‘ಸಾಮಾನ್ಯ ಅಧ್ಯಯನ‘ ಕುರಿತಾದ ಮಾದರಿ ಬಹುಆಯ್ಕೆಗಳ ಪ್ರಶ್ನೋತ್ತರಗಳು ಇಲ್ಲಿವೆ.

1) ಪದ್ಮಶ್ರೀ ಪುರಸ್ಕೃತ ಸಿಂಧೂ ತಾಯಿ ಸಪ್‌ಕಾಲ್ ಅವರು ಇತ್ತೀಚಿಗೆ ನಿಧನರಾದರು. ಅವರ ವಿಶೇಷತೆ ಏನು?

ಎ) 2000ಕ್ಕೂ ಅಧಿಕ ಅನಾಥ ಮಕ್ಕಳನ್ನು ದತ್ತು ಪಡೆದು ಸಾಕಿ ಸಲಹಿದ್ದರು
ಬಿ) ಸಾವಿರಾರು ಅಂಗವಿಕಲರಿಗೆ ಉದ್ಯೋಗ ನೀಡಿ ಸಲಹಿದ್ದರು
ಸಿ) ಮಾತು ಬರದ ಮಕ್ಕಳಿಗೆ ಚಿಕಿತ್ಸೆ ನೀಡುವ ನಾಟಿ ವೈದ್ಯರಾಗಿ ಪ್ರಸಿದ್ಧರಾಗಿದ್ದರು.
ಡಿ) ಮೇಲಿನ ಯಾವುದೂ ಅಲ್ಲ

ಉತ್ತರ:ಎ

2) ಮೊಬೈಲ್ ಮತ್ತಿತರ ಸಾಧನಗಳಲ್ಲಿ ಅಮೆರಿಕದ ಜಿಪಿಎಸ್, ಭಾರತದ ನಾವಿಕ ಮೊದಲಾದವುಗಳನ್ನು ಏಕಕಾಲದಲ್ಲಿ ಬಳಸಲು ಅನುಕೂಲವಾಗುವ ದೇಶೀಯ ಮಾರ್ಗದರ್ಶಿ ಚಿಪ್ (ರೇಡಿಯೊ ಅರ್ಥ ರಿಸೀವರ್) ಅನ್ನು ಬಾಂಬೆ ಐಐಟಿಯಲ್ಲಿ ಪ್ರೊ. ರಾಜೇಶ್ ಹರಿಶ್ಚಂದ್ರ ಝೆಲೆ ಮತ್ತು ಅವರ ತಂಡ ಅಭಿವೃದ್ಧಿಪಡಿಸಿದೆ. ಹಾಗಾದರೆ ಅದರ ಹೆಸರೇನು?

ಎ) ನಾವಿಕ
ಬಿ) ಧ್ರುವ
ಸಿ) ನ್ಯಾವಿಗೇಟರ್
ಡಿ) ನಚಿಕೇತ

ಉತ್ತರ:ಬಿ

3) ಪಾಕಿಸ್ತಾನದ ವಾಯವ್ಯ ಭಾಗದಲ್ಲಿರುವ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಕರಕ್ ಜಿಲ್ಲೆಯಲ್ಲಿರುವ ……100 ವರ್ಷದಷ್ಟು ಹಳೆಯದಾದ ಹಿಂದೂ ದೇವಾಲಯವನ್ನು ಪುನರುತ್ಥಾನಗೊಳಿಸಿ, ಇತ್ತೀಚೆಗೆ ಯಾತ್ರಾರ್ಥಿಗಳ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಹಾಗಾದರೆ ಆ ದೇವಾಲಯದಲ್ಲಿ ಯಾವ ಸಂತರ ಸಮಾಧಿ ಇದೆ?

ಎ) ಮಹಾರಾಜ ಪರಮಹಂಸ ಜೀ
ಬಿ) ಸ್ವಾಮಿ ನಾರಾಯಣ
ಸಿ) ಶಂಕರಾಚಾರ್ಯ
ಡಿ) ಮಧ್ವಾಚಾರ್ಯ

ಉತ್ತರ: ಎ

4) ಬೇಲೂರು, ಹಳೆಬೀಡು ದೇವಾಲಯಗಳ ನಿರ್ಮಾಣಕ್ಕೆ ಬಳಸಲಾದ ಶಿಲೆ ಯಾವುದು?

ಎ) ಗ್ರಾನೈಟ್
ಬಿ) ಸುಣ್ಣದ ಕಲ್ಲು/ ಲೈಮ್ ಸ್ಟೋನ್‌
ಸಿ) ಮರಳುಗಲ್ಲು/ಸ್ಯಾಂಡ್ ಸ್ಟೋನ್‌
ಡಿ) ಬಳಪದ ಕಲ್ಲು/ಸೋಪ್ ಸ್ಟೋನ್

ಉತ್ತರ: ಡಿ

5) ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ

1) ಎರಡು ರಾಷ್ಟ್ರಗಳಿಗೆ ರಾಷ್ಟ್ರಗೀತೆ ಬರೆದ ವಿಶ್ವದ ಏಕೈಕ ವ್ಯಕ್ತಿ ರವೀಂದ್ರನಾಥ್ ಟ್ಯಾಗೋರ್
2)ರವೀಂದ್ರನಾಥ್ ಟ್ಯಾಗೋರ್ ಹುಟ್ಟಿ 150 ವರ್ಷಗಳಾದಾಗ ಅವರು ಬರೆದ ಜನಗಣಮನ ಗೀತೆಗೆ 100 ವರ್ಷ ತುಂಬಿತ್ತು.
3) ಜನಗಣಮನ ರಾಷ್ಟ್ರಗೀತೆ ಹಾಡಲು 52 ಸೆಕೆಂಡುಗಳು ಸಾಕು.
4) ‘ಜನಗಣಮನ‘ ರಾಷ್ಟ್ರಗೀತೆಯಲ್ಲಿ ದಕ್ಷಿಣ ಭಾರತದ ಬಗ್ಗೆ ಮಹತ್ವ ನೀಡಿಲ್ಲ, ಭಾರತದಲ್ಲಿ ಇಲ್ಲದ ಸಿಂಧ್‌ನ ಬಗ್ಗೆ ಉಲ್ಲೇಖವಿದೆ. ಬ್ರಿಟಿಷ್ ರಾಜನನ್ನು ಹೊಗಳಲು ಬರೆದ ಗೀತೆ ಈ ಮೊದಲಾದ ಟೀಕೆಗಳು ಇವೆ.

ಉತ್ತರ ಸಂಕೇತ:-
ಎ) ಮೊದಲ ಎರಡು ಮಾತ್ರ ಸರಿ
ಬಿ) ಕೊನೆಯ ಎರಡು ಮಾತ್ರ ಸರಿ
ಸಿ) ಎಲ್ಲಾ ಹೇಳಿಕೆಗಳು ಸರಿ
ಡಿ) ಎಲ್ಲಾ ಹೇಳಿಕೆಗಳು ತಪ್ಪು.

ಉತ್ತರ:ಸಿ

6)  ಶ್ರೀ ರಾಮನಾಥ ಕೋವಿಂದ್‌ ಅವರು...

ಎ) ಭಾರತದ 15ನೇ ರಾಷ್ಟ್ರಾಧ್ಯಕ್ಷರು
ಬಿ) ಭಾರತದ 13ನೇ ರಾಷ್ಟ್ರಾಧ್ಯಕ್ಷರು
ಸಿ) ಭಾರತದ 12ನೇ ರಾಷ್ಟ್ರಾಧ್ಯಕ್ಷರು
ಡಿ) ಭಾರತದ 14ನೇ ರಾಷ್ಟ್ರಾಧ್ಯಕ್ಷರು

ಉತ್ತರ:ಡಿ

7) ಈ ಕೆಳಗೆ ನೀಡಲಾದ ರಾಜ್ಯಗಳ ಪೈಕಿ ಯಾವುದರಲ್ಲಿ ನಗರದ ಜನಸಂಖ್ಯೆ ಅತಿ ಹೆಚ್ಚು?

ಎ) ಮಣಿಪುರ ಬಿ) ಗೋವಾ
ಸಿ) ಅರುಣಾಚಲ ಪ್ರದೇಶ
ಡಿ) ತಮಿಳುನಾಡು

ಉತ್ತರ: ಬಿ (ವಿವರಣೆ: 2011ರ ಜನಗಣತಿಯ ಪ್ರಕಾರ ಗೋವಾ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ 49.8 ರಷ್ಟು ಜನ ನಗರಗಳಲ್ಲಿ ವಾಸಿಸುತ್ತಾರೆ)

8) ಇವುಗಳಲ್ಲಿ ಯಾವುದು ಸರಿಯಾಗಿದೆ

ಎ) ವಿಶ್ವದ ಅತಿದೊಡ್ಡ ಖಂಡ- ಉತ್ತರ ಅಮೆರಿಕ
ಬಿ) ಜಗತ್ತಿನಲ್ಲಿ ಅತಿಹೆಚ್ಚು ಮಳೆ ಬಿಳುವ ಪ್ರದೇಶ- ಬೀಜಿಂಗ್
ಸಿ) ವಿಶ್ವದಲ್ಲೇ ಅತಿ ಎತ್ತರದಲ್ಲಿರುವ ಪ್ರಸ್ಥಭೂಮಿ- ಟಿಬೆಟ್‌
ಡಿ) ವಿಶ್ವದ ಅತಿದೊಡ್ಡ ಮರುಭೂಮಿ- ಥಾರ್ ಮರುಭೂಮಿ

ಉತ್ತರ:ಸಿ

(ನಿರ್ದೇಶಕರು, ಜ್ಞಾನಭಾರತಿ ಸ್ಪರ್ಧಾ ಪರೀಕ್ಷಾ ಕೇಂದ್ರ, ಬೆಂಗಳೂರು)

ಎ) ನಾವಿಕ ಬಿ) ಧ್ರುವ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು