ಭಾಗ– 57
771) ಹೊನ್ಸು, ಹೊಕೈಡೊ, ಕ್ವಾಶು, ಶಿ ಕೊಕು ಇವು ಯಾವ ದೇಶದ ದ್ವೀಪಗಳು?
ಎ) ಚೀನಾ
ಬಿ) ಸಿಂಗಾಪುರ
ಸಿ) ಮಾಲ್ಡೀವ್ಸ್
ಡಿ) ಜಪಾನ್
772) ಹೊಂದಿಸಿ ಬರೆಯಿರಿ
ನದಿ ದೇಶ
ಅ. ಇರಾವಡಿ 1. ಮ್ಯಾನ್ಮಾರ್
ಆ. ಲೀನಾ 2. ರಷ್ಯಾ
ಇ. ರೆಡ್ 3. ಚೀನಾ
ಈ. ಟೈಗ್ರಿಸ್ 4. ಇರಾಕ್
ಅ ಆ ಇ ಈ
ಎ)3412
ಬಿ)3421
ಸಿ)1234
ಡಿ)1243
773) ಹೊಂದಿಸಿ ಬರೆಯಿರಿ
ಅ. ರಾಗಿ 1. ದಾವಣಗೆರೆ
ಆ. ಜೋಳ 2. ರಾಯಚೂರು
ಇ. ಮೆಕ್ಕೆಜೋಳ 3. ತುಮಕೂರು
ಈ. ಭತ್ತ 4. ವಿಜಯಪುರ
ಅ ಆ ಇ ಈ
ಎ)3412
ಬಿ)3421
ಸಿ)1234
ಡಿ)1243
774) ಕೆಳಗಿನ ಯಾವ ಜಿಲ್ಲೆಯು ಕಡಿಮೆ ಅರಣ್ಯ ಪ್ರದೇಶವನ್ನು ಹೊಂದಿದೆ?
ಎ) ಬಾಗಲಕೋಟ
ಬಿ) ವಿಜಯಪುರ
ಸಿ) ಗದಗ
ಡಿ) ಕಲಬುರ್ಗಿ
775) ಹೊಂದಿಸಿ ಬರೆಯಿರಿ
ಅ. ಕೃಷ್ಣಾ 1. ಹಿಡಕಲ್ ಜಲಾಶಯ
ಆ. ಘಟಪ್ರಭಾ 2. ನವಿಲುತೀರ್ಥ
ಇ. ತುಂಗಭದ್ರಾ 3. ಆಲಮಟ್ಟಿ
ಈ. ಮಲಪ್ರಭಾ 4. ಪಂಪಸಾಗರ
ಅ ಆ ಇ ಈ
ಎ) 1 2 3 4
ಬಿ) 2 1 3 4
ಸಿ) 2 3 1 4
ಡಿ) 3 1 4 2
776) ನಾಗರಹೊಳೆ ಉದ್ಯಾನವನ ಈ ಕೆಳಗಿನ ಯಾವ ಜಿಲ್ಲೆಗಳಲ್ಲಿ ವಿಸ್ತರಿಸಿದೆ?
ಎ) ಕೊಡಗು ಮತ್ತು ಮೈಸೂರು
ಬಿ) ಕೊಡಗು ಮತ್ತು ಚಾಮರಾಜನಗರ
ಸಿ) ಮೈಸೂರು ಮತ್ತು ಮಂಡ್ಯ
ಡಿ) ಮೈಸೂರು ಮತ್ತು ಚಾಮರಾಜನಗರ
777) ಲೀಥಿಯಂ ಯಾವ ರಾಜ್ಯದಲ್ಲಿ ಹೇರಳವಾಗಿದೆ?
ಎ) ಕರ್ನಾಟಕ
ಬಿ) ಕೇರಳ
ಸಿ) ಮಹಾರಾಷ್ಟ್ರ
ಡಿ) ಜಾರ್ಖಂಡ್
778) ಕೆಳಗಿನ ಹೇಳಿಕೆಗಳನ್ನು ಗಮನಿಸಿ.
ಅ) ಪಶ್ಚಿಮ ಘಟ್ಟಗಳ ಕಡೆಯಿಂದ ಪೂರ್ವದ ಕಡೆಗೆ ಹೋದಂತೆ ಮಳೆಯ ಪ್ರಮಾಣ ಕಡಿಮೆಯಾಗುತ್ತದೆ
ಆ) ಉತ್ತರಭಾರತದಿಂದ ದಕ್ಷಿಣ ಭಾರತದ ಕಡೆ ಹೋದಂತೆ ಕಾಲುವೆ ನೀರಾವರಿ ಪ್ರಮಾಣ ಹೆಚ್ಚಿಗೆಯಾಗುತ್ತದೆ
ಎ) ‘ಅ’ ಮಾತ್ರ ಸರಿ
ಬಿ) ‘ಆ’ ಮಾತ್ರ ಸರಿ
ಸಿ) ಎರಡೂ ಸರಿ
ಡಿ) ಎರಡೂ ತಪ್ಪು
779) ಚನ್ನಪಟ್ಟಣದ ಬೊಂಬೆಗಳು ರಾಷ್ಟ್ರಮಟ್ಟದಲ್ಲಿ ಪ್ರಸಿದ್ಧ. ಚನ್ನಪಟ್ಟಣ ಯಾವ ಜಿಲ್ಲೆಯಲ್ಲಿದೆ?
ಎ) ಬೆಂಗಳೂರು ಗ್ರಾಮಾಂತರ
ಬಿ) ಹಾಸನ
ಸಿ) ರಾಮನಗರ
ಡಿ) ಮಂಡ್ಯ
780) ಕುಮಾರಧಾರ, ಶಿಶಿಲಾ ನದಿಗಳು ಯಾವ ನದಿಯ ಉಪನದಿಗಳು
ಎ) ಶರಾವತಿ
ಬಿ) ಅಘನಾಶಿನಿ
ಸಿ) ನೇತ್ರಾವತಿ
ಡಿ) ಗಂಗಾವಳಿ
781. ರಾಜು ವಿನಾಯಕನ ಸಹೋದರ, ಉಮಾ ದಿನೇಶನ ಸಹೋದರಿ, ರಾಜು ಉಮಾಳ ಮಗನಾದರೆ, ವಿನಾಯಕ ಉಮಾಳಿಗೆ ಏನಾಗಬೇಕು?
ಎ) ಮಗ
ಬಿ) ಸಹೋದರ
ಸಿ) ಅಳಿಯ
ಡಿ) ತಂದೆ
782. ಕಬ್ಬಿಣದ ಚೂರುಗಳಿಗೆ ಸಾರಯುಕ್ತ ಹೈಡ್ರೋಕ್ಲೋರಿಕ್ ಆಮ್ಲವನ್ನು ಸೇರಿಸಿದಾಗ ಏನಾಗುತ್ತದೆ?
ಎ) ಹೈಡ್ರೋಜನ್ ಅನಿಲ ಮತ್ತು ಕಬ್ಬಿಣದ ಕ್ಲೋರೈಡ್ ಉಂಟಾಗುತ್ತವೆ
ಬಿ) ಕ್ಲೋರಿನ್ ಅನಿಲ ಮತ್ತು ಕಬ್ಬಿಣದ ಹೈಡ್ರಾಕ್ಸೈಡ್ ಉಂಟಾಗುತ್ತವೆ.
ಸಿ) ಯಾವುದೇ ಕ್ರಿಯೆ ನಡೆಯುವುದಿಲ್ಲ
ಡಿ) ಕಬ್ಬಿಣದ ಲವಣ ಮತ್ತು ನೀರು ಉಂಟಾಗುತ್ತವೆ
783. ಈ ಕೆಳಗಿನವುಗಳಲ್ಲಿ ಯಾವ ಪ್ರಕಾರದ ಔಷಧಗಳನ್ನು ಅಜೀರ್ಣತೆಯ ಚಿಕಿತ್ಸೆಗೆ ಬಳಸಲಾಗುತ್ತದೆ?
ಎ) ಜೀವಜಿರೋಧಕ
ಬಿ) ನೋವುನಿವಾರಕ
ಸಿ) ಆಮ್ಲಶಮಕ
ಡಿ) ನಂಜುನಿವಾರಕ
784. 10 ಜನ ಪ್ರತಿದಿನ 6 ಗಂಟೆಗಳಂತೆ ದುಡಿದು ಒಂದು ಕಾರ್ಯವನ್ನು 18 ದಿನದಲ್ಲಿ ಪೂರ್ಣಗೊಳಿಸುವರು. ಇದೇ ಕಾರ್ಯವನ್ನು 15 ಜನರು, 12 ದಿನದಲ್ಲಿ ಪೂರ್ಣಗೊಳಿಸಲು ಪ್ರತಿದಿನ ಎಷ್ಟು ಗಂಟೆ ದುಡಿಯಬೇಕು?
ಎ) 6 ಗಂಟೆ
ಬಿ) 8 ಗಂಟೆ
ಸಿ) 9 ಗಂಟೆ
ಡಿ) 7 ಗಂಟೆ
785. ನಾನು ಸೂರ್ಯನಿಗೆ ಮುಖ ಮಾಡಿ ನಡೆಯಲು ಆರಂಭಿಸಿದೆ. ಮೊದಲು ಎಡಕ್ಕೆ ತಿರುಗಿ ನಂತರ ಬಲಕ್ಕೆ ತಿರುಗಿದೆ. ಹಾಗಾದರೆ ನಾನು ಈಗ ಯಾವ ದಿಕ್ಕಿಗೆ ಮುಖ ಮಾಡಿದ್ದೇನೆ?
ಎ) ಪೂರ್ವ
ಬಿ) ಪಶ್ಚಿಮ
ಸಿ) ಉತ್ತರ
ಡಿ) ದಕ್ಷಿಣ
ಭಾಗ 56ರ ಉತ್ತರಗಳು: 756. ಸಿ, 757. ಸಿ, 758. ಡಿ, 759. ಬಿ, 760. ಸಿ, 761. ಎ, 762. ಸಿ, 763. ಡಿ, 764. ಬಿ, 765. ಬಿ, 766. ಎ, 767. ಸಿ, 768. ಎ, 769. ಬಿ, 770. ಬಿ
(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.