ಸೋಮವಾರ, ಆಗಸ್ಟ್ 15, 2022
25 °C

ಪೊಲೀಸ್‌ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಮಾದರಿ ಪ್ರಶ್ನೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾಗ– 6

66. ‘ಬ್ರಿಕ್ಸ್‌’ನ ಪ್ರಧಾನ ಕಚೇರಿ ಇರುವುದು ಎಲ್ಲಿ?

ಎ) ನವದೆಹಲಿ

ಬಿ) ಕಠ್ಮಂಡು

ಸಿ) ಶಾಂಘೈ

ಡಿ) ಢಾಕಾ

67. Entomology (ಎಂಟೊಮಾಲಜಿ) ಎಂದರೇನು?

ಎ) ಭೂಕಂಪನದ ಬಗ್ಗೆ ಅಧ್ಯಯನ

ಬಿ) ಶಿಲೆಗಳ ಬಗ್ಗೆ ಅಧ್ಯಯನ

ಸಿ) ಮಣ್ಣಿನ ಬಗ್ಗೆ ಅಧ್ಯಯನ

ಡಿ) ಕೀಟಗಳ ಬಗ್ಗೆ ಅಧ್ಯಯನ

68. ಭಾರತದಲ್ಲಿ ವೇಳೆ ನಿರ್ಧಾರಕ ರೇಖಾಂಶ ಯಾವುದು?

ಎ) 82.5 ಪೂರ್ವ

ಬಿ) 82.5 ಪಶ್ಚಿಮ

ಸಿ) 82.5 ಉತ್ತರ

ಡಿ) 82.5 ದಕ್ಷಿಣ

69. ರಾಜ್ಯಸಭೆಯ ಪ್ರಸ್ತುತ ಸಭಾಧ್ಯಕ್ಷರು ಯಾರು?

ಎ) ಹರಿವಂಶ್ ನಾರಾಯಣ್ ಸಿಂಗ್

ಬಿ) ಓಂ ಬಿರ್ಲಾ

ಸಿ) ಎಂ.ವೆಂಕಯ್ಯ ನಾಯ್ಡು

ಡಿ) ವೀರೇಂದ್ರಕುಮಾರ್

70. ಭಾರತದ ಅತ್ಯುನ್ನತ ಸೇನಾ ಪುರಸ್ಕಾರ ಯಾವುದು?

ಎ) ಪರಮಸೇನಾ ಚಕ್ರ

ಬಿ) ಪರಮಸೇವಾ ಚಕ್ರ

ಸಿ) ಮಹಾವೀರ ಚಕ್ರ

ಡಿ) ಪರಮವೀರ ಚಕ್ರ

71. ಬೆಂಗಳೂರು ನಗರದ ಪ್ರಥಮ ಪ್ರಜೆ ಯಾರು ಆಗಿರುತ್ತಾರೆ?

ಎ) ರಾಜ್ಯಪಾಲರು

ಬಿ) ಮುಖ್ಯಮಂತ್ರಿಗಳು

ಸಿ) ಮುಖ್ಯ ನ್ಯಾಯಾಧೀಶರು

ಡಿ) ಮಹಾಪೌರರು

72. ಈ ಮೊದಲು ಜಾರಿಯಲ್ಲಿದ್ದ ಒಂದು ರೂಪಾಯಿ ನೋಟನ್ನು ಯಾರು ಮುದ್ರಿಸುತ್ತಿದ್ದರು?

ಎ) ಆರ್.ಬಿ.ಐ

ಬಿ) ಹಣಕಾಸು ಸಚಿವಾಲಯದ ಪರವಾಗಿ
ಆರ್.ಬಿ.ಐ

ಸಿ) ಎಸ್.ಬಿ.ಐ

ಡಿ) ವಾಣಿಜ್ಯ ಸಚಿವಾಲಯದ ಪರವಾಗಿ

ಆರ್.ಬಿ.ಐ

73. ಕೇಂದ್ರ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಇರುವುದು ಎಲ್ಲಿ?

ಎ) ಬೆಂಗಳೂರು

ಬಿ) ಮೈಸೂರು

ಸಿ) ಮಂಗಳೂರು

ಡಿ) ಬೆಳಗಾವಿ

74. ಅಡಿಗೆ ಉಪ್ಪಿನ ರಾಸಾಯನಿಕ ಹೆಸರು ಏನು?

ಎ) ಸೋಡಿಯಂ ಕಾರ್ಬೊನೇಟ್

ಬಿ) ಸೋಡಿಯಂ ಬೈ ಕಾರ್ಬೊನೇಟ್

ಸಿ) ಸೋಡಿಯಂ ಕ್ಲೋರೈಡ್

ಡಿ) ಕ್ಯಾಲ್ಸಿಯಂ ಕ್ಲೋರೈಡ್

75. ದ್ವೈತ ಸಿದ್ಧಾಂತವನ್ನು ಯಾರು ಪ್ರತಿಪಾದಿಸಿದರು?

ಎ) ಶಂಕರಾಚಾರ್ಯ

ಬಿ) ರಾಮಾನುಜಾಚಾರ್ಯ

ಸಿ) ಮಧ್ವಾಚಾರ್ಯ

ಡಿ) ಮೇಲಿನ ಎಲ್ಲರೂ

76. ಮೊಘಲರ ಕಾಲದ ಆಡಳಿತ ಭಾಷೆ ಯಾವುದಾಗಿತ್ತು?

ಎ) ಪರ್ಶಿಯನ್

ಬಿ) ಉರ್ದು

ಸಿ) ಹಿಂದಿ

ಡಿ) ಹಿಂದಿ ಮತ್ತು ಉರ್ದು

77. ‘ಆರ್ಯ ಸಮಾಜ’ ಸ್ಥಾಪಿಸಿದವರು ಯಾರು?

ಎ) ದಯಾನಂದ ಸರಸ್ವತಿ

ಬಿ) ರಾಜಾರಾಮ್ ಮೋಹನ್‌ರಾಯ್

ಸಿ) ಸ್ವಾಮಿ ವಿವೇಕಾನಂದ

ಡಿ) ರಾಮಕೃಷ್ಣ ಪರಮಹಂಸ

78. ಮಾನವನ ರಕ್ತದಲ್ಲಿ ಯಾವ ಲೋಹದ ಅಂಶ ಇದೆ?

ಎ) ಕ್ಯಾಲ್ಸಿಯಂ

ಬಿ) ಹೈಡ್ರೋಜನ್

ಸಿ) ಇಂಗಾಲ

ಡಿ) ಕಬ್ಬಿಣ

79. ವಿಟಮಿನ್ ‘ಸಿ’ ಕೊರತೆಯಿಂದ ಬರುವ ರೋಗ ಯಾವುದು?

ಎ) ಇರುಳು ಕುರುಡು

ಬಿ) ಸ್ಕರ್ವಿ

ಸಿ) ರಿಕೆಟ್ಸ್

ಡಿ) ಬೆರಿಬೆರಿ

80. ‘ಕರೆನ್ಸಿ ಚೆಸ್ಟ್‌’ ಯಾರ ನಿಯಂತ್ರಣಕ್ಕೆ ಒಳಪಟ್ಟಿರುತ್ತದೆ?

ಎ) ಆರ್‌ಬಿಐ

ಬಿ)ಎಸ್‌ಬಿಐ

ಸಿ) ಕೆನರಾ ಬ್ಯಾಂಕ್

ಡಿ) ಯೂನಿಯನ್ ಬ್ಯಾಂಕ್

(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು