–ಆರ್.ಕೆ.ಬಾಲಚಂದ್ರ
ಕಳೆದ ಸಂಚಿಕೆಯಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ 1,402 ಸ್ಪೆಷಲ್ ಆಫೀಸರ್ಸ್ ನೇಮಕಾತಿ ಕುರಿತು ಅರ್ಜಿ ಸಲ್ಲಿಕೆ ವಿವರ ಪ್ರಕಟಿಸಲಾಗಿತ್ತು. ಈ ಸಂಚಿಕೆಯಲ್ಲಿ ಹುದ್ದೆಗಳ ಆಯ್ಕೆಗಾಗಿ ನಡೆಸುವ ಪರೀಕ್ಷೆಗಳ ವಿವರ ಮತ್ತು ಪರೀಕ್ಷೆಗೆ ನಿಗದಿಪಡಿಸಿರುವ ವಿಷಯಗಳು, ಅಂಕಗಳು ಮತ್ತು ಅವಧಿ ಕುರಿತ ಮಾಹಿತಿ ನೀಡಲಾಗಿದೆ.
ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ (ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸೋನಲ್ ಸೆಲೆಕ್ಷನ್- ಐಬಿಪಿಎಸ್) ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಖಾಲಿಯಿರುವ ಸ್ಪೆಷಲ್ ಆಫೀಸರ‍್ಸ್‌ಗ ನೇಮಕಾತಿಗಾಗಿ ಮೂರು ಹಂತಗಳಲ್ಲಿ ಪರೀಕ್ಷೆಗಳನ್ನು ನಡೆಸುತ್ತದೆ. ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಮತ್ತು ಸಂದರ್ಶನ. ಇವೇ ಆ ಮೂರು ಹಂತಗಳು. ಇವುಗಳಲ್ಲಿ ಮೊದಲ ಎರಡು ಪರೀಕ್ಷೆಗಳನ್ನು ಆನ್‌ಲೈನ್ ಮೂಲಕ (ಕಂಪ್ಯೂಟರ್ ಆಧಾರಿತ ಪರೀಕ್ಷೆ –ಸಿಬಿಟಿ) ನಡೆಸಲಾಗುತ್ತದೆ.
ಪೂರ್ವಭಾವಿ ಪರೀಕ್ಷೆ
ಇದು ಒಂದು ಗಂಟೆ ಅವಧಿಯ ಪರೀಕ್ಷೆ. ಮೂರು ಪತ್ರಿಕೆಗಳಿರುತ್ತವೆ. 125 ಅಂಕಗಳಿಗೆ 150 ಪ್ರಶ್ನೆಗಳನ್ನು ಕೇಳಲಾಗುತ್ತದೆ. ಪ್ರತಿ ಪತ್ರಿಕೆಗೂ 40 ನಿಮಿಷಗಳಂತೆ ಒಟ್ಟಾರೆ 120 ನಿಮಿಷಗಳು. ಇಂಗ್ಲಿಷ್ ಭಾಷಾ ಪತ್ರಿಕೆಗೆ 50 ಪ್ರಶ್ನೆಗಳು (25 ಅಂಕ), ಕ್ವಾಂಟಿಟೇಟಿವ್ ಅಪ್ಟಿಟ್ಯೂಡ್‌ಗೆ 50 ಪ್ರಶ್ನೆಗಳು(50 ಅಂಕ) ಹಾಗೂ ರೀಸನಿಂಗ್ ಎಬಿಲಿಟಿಯ 50 ಪ್ರಶ್ನೆ(50 ಅಂಕ)ಗಳಿರಲಿವೆ (ಇದು ರಾಜ್‌ಭಾಷಾ ಅಧಿಕಾರಿ ಹಾಗೂ ಲಾ ಆಫೀಸರ್ ಹುದ್ದೆಗಳಿಗೆ ಹೊರತಾಗಿ. ಇವೆರಡೂ ಹುದ್ದೆಗಳಿಗೆ ಕ್ವಾಂಟಿಟೇಟಿವ್ ಅಪ್ಟಿಟ್ಯೂಡ್ ಪರೀಕ್ಷೆ ಬದಲಾಗಿ ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ ಸಾಮಾನ್ಯ ಅರಿವು ಪರೀಕ್ಷಿಸುವ ವಿಷಯ ಕುರಿತು 50 ಅಂಕಗಳ 50 ಪ್ರಶ್ನೆಗಳಿರಲಿವೆ)
ಪ್ರತಿ ಪರೀಕ್ಷೆಯಲ್ಲೂ ಕನಿಷ್ಟ ಅಂಕ ಗಳಿಸಬೇಕೆಂಬ ನಿಯಮವಿದೆ. ಆದರೆ ಒಟ್ಟಾರೆ ಹೆಚ್ಚು ಅಂಕಗಳಿಸುವುದು ಮುಖ್ಯ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಮುಂದಿನ ಹಂತದ ಅಂದರೆ ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆಯುತ್ತಾರೆ. ಮುಖ್ಯ ಪರೀಕ್ಷೆಯು ಬೆಂಗಳೂರು ಹಾಗೂ ಹುಬ್ಬಳ್ಳಿ-ಧಾರವಾಡಗಳಲ್ಲಿ ಮಾತ್ರ ನಡೆಯಲಿದೆ.
ಮುಖ್ಯ ಪರೀಕ್ಷೆ
ಮುಖ್ಯ ಪರೀಕ್ಷೆಯು ವೃತ್ತಿಪರ ಜ್ಞಾನಕ್ಕೆ ಸಂಬಂಧಿಸಿದ್ದು. ಇದು 45 ನಿಮಿಷಗಳ ಅವಧಿಯ ಪರೀಕ್ಷೆಯಾಗಿದ್ದು, 60 ಪ್ರಶ್ನೆಗಳನ್ನು 60 ಅಂಕಗಳಿಗೆ ಕೇಳಲಾಗುತ್ತದೆ(ರಾಜ ಭಾಷಾ ಅಧಿಕಾರಿಗಳ ಹುದ್ದೆಗಳಿಗೆ ಡಿಸ್ಕೃಪ್ಟಿವ್ ಟೆಸ್ಟ್ ಎರಡು ಹಂತಗಳಲ್ಲಿ ನಡೆಯಲಿದೆ). ಇದರಲ್ಲಿ ವೃತ್ತಿಪರ ಜ್ಞಾನಕ್ಕೆ ಸಂಬಂಧಿಸಿದ ಆಬ್ಜೆಕ್ಟಿವ್ ಮಾದರಿಯ 45 ಪ್ರಶ್ನೆಗಳು, ವ್ತತ್ತಿಪರ ಜ್ಞಾನಕ್ಕೆ ಸಂಬಂದಿಸಿದಂತೆ ಇನ್ನೊಂದು ಡಿಸ್ಕ್ರೆಪ್ಟಿವ್ ಪತ್ರಿಕೆಯಲ್ಲಿ ಎರಡು ಪ್ರಶ್ನೆಗಳಿರಲಿವೆ. ಎರಡೂ ಪರೀಕ್ಷೆಗಳಿಗೆ 30 ನಿಮಿಷಗಳಂತೆ ಒಟ್ಟಾರೆ ಒಂದು ಗಂಟೆಯ ಅವಧಿ ನೀಡಲಾಗಿದೆ.
ಗಮನಿಸಿ: ಮುಖ್ಯ ಪರೀಕ್ಷೆಯಲ್ಲಿ ಬದಲಾವಣೆ ಮಾಡಿದ್ದು ಈ ಸಲ ವೃತ್ತಿಪರ ಜ್ಞಾನದ ಪರೀಕ್ಷೆ ಬರೆಯಬೇಕು. (ಸ್ಪೆಷಲ್ ಆಫೀಸರ್ ಹುದ್ದೆಗಳಾಗಿರುವುದರಿಂದ)
ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಪರೀಕ್ಷೆ ಬರೆಯಲು ಅವಕಾಶವಿದೆ. ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶವಿಲ್ಲ. ಋಣಾತ್ಮಕ ಮೌಲ್ಯಮಾಪನವಿದೆ. ಈ ನಿಯಮದನ್ವಯ ತಪ್ಪು ಉತ್ತರ ಗುರುತಿಸಿದಲ್ಲಿ, ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಳಲ್ಲಿ ಆಯಾ ವಿಷಯದ ಪ್ರತಿ ಪ್ರಶ್ನೆಗೆ ನಿಗದಿ ಪಡಿಸಿದ ಅಂಕದ 0.25 ಅಂಕವನ್ನು ಗಳಿಸಿದ ಅಂಕದಿಂದ ಕಳೆಯಲಾಗುತ್ತದೆ.
ಅಂತಿಮ ಹಂತಕ್ಕೆ ಆಯ್ಕೆ :
ಮುಖ್ಯ ಪರೀಕ್ಷೆಗಳಲ್ಲಿ ಕನಿಷ್ಠ ಅರ್ಹತಾ ಅಂಕಗಳನ್ನು ಬ್ಯಾಂಕ್ ನಿರ್ಧರಿಸುತ್ತದೆ. ಬ್ಯಾಂಕ್ ನಿಗದಿಪಡಿಸಿದಷ್ಟು ಅಂಕ ಪಡೆದವರು ಮಾತ್ರ ಮೂರನೇ ಹಂತಕ್ಕೆ ಅರ್ಹರಾಗುತ್ತಾರೆ. ಮೂರನೇ ಹಂತ ಅಂದರೆ ಸಂದರ್ಶನ (100 ಅಂಕಗಳು) ಬ್ಯಾಂಕ್‌ಗಳು ನಡೆಸಲಿವೆ.
ಆಯ್ಕೆ ಪಟ್ಟಿ:
ಅಂತಿಮ ಸುತ್ತಿಗೆ ಆಯ್ಕೆಯಾದ ಅಭ್ಯರ್ಥಿಗಳು ಹಂತ-II ಪ್ರತ್ಯೇಕವಾಗಿ ಅರ್ಹತೆ ಪಡೆದಿರಬೇಕು. ಮುಖ್ಯ ಪರೀಕ್ಷೆಯಲ್ಲಿ ಪಡೆದ ಅಂಕಗಳು, ವಸ್ತುನಿಷ್ಠ ಪರೀಕ್ಷೆ ಮತ್ತು ವಿವರಣಾತ್ಮಕ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಹಾಗೂ ಹಂತ-3 ರಲ್ಲಿ ಪಡೆದ ಅಂಕಗಳಿಗೆ ಸೇರಿಸಲಾಗುತ್ತದೆ. ಅರ್ಹತೆ ಪಟ್ಟಿಗೆ ಪ್ರಾಥಮಿಕ ಪರೀಕ್ಷೆಯಲ್ಲಿ (ಹಂತ-1) ಪಡೆದ ಅಂಕಗಳನ್ನು ಪರಿಗಣಿಸುವುದಿಲ್ಲ.
ಹಂತ-2 ರಲ್ಲಿ ಅಭ್ಯರ್ಥಿಗಳು ಪಡೆದಿರುವ ಅಂಕಗಳಲ್ಲಿ ಶೇ 80 ಅಂಕಗಳು ಮತ್ತು ಹಂತ-3 ರಲ್ಲಿ ಪಡೆದ ಅಂಕಗಳಲ್ಲಿ ಶೇ 20ರಷ್ಟು ಅಂಕಗಳನ್ನು ತೆಗೆದುಕೊಂಡು ಸೇರಿಸಿ ನಂತರ ಅಂತಿಮ ಅರ್ಹತಾ ಪಟ್ಟಿಯನ್ನು ತಯಾರಿಸಲಾಗುತ್ತದೆ. ಹಂತ- 2 ಮತ್ತು ಹಂತ-3 ರಲ್ಲಿ ಉನ್ನತ ಶ್ರೇಣಿಯನ್ನು ಪಡೆದ ಪ್ರತಿ ವರ್ಗದ ಮಾತ್ರ ಆಯ್ಕೆ ಮಾಡಲಾಗುವುದು.
ಸ್ಪೆಷಲ್ ಆಫೀಸರ್ ಹುದ್ದೆಗಳ ಕುರಿತ ಇನ್ನಷ್ಟು ಮಾಹಿತಿಗಾಗಿ https://ibpsonline.ibps.in/crpsp13jun23/ ಹಾಗೂ www.ibps.in ಜಾಲತಾಣಗಳಿಗೆ ಭೇಟಿ ನೀಡಿ.
(ಲೇಖಕರು ಬ್ಯಾಂಕಿಂಗ್ ಮತ್ತು ವ್ಯಕ್ತಿತ್ವ ವಿಕಸನ ತರಬೇತುದಾರರು ಹಾಗೂ ವೃತ್ತಿ ಮಾರ್ಗದರ್ಶಕರು, ಮಡಿಕೇರಿ)
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.