ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಟೆನೊಗ್ರಾಫರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗ
Published 9 ಆಗಸ್ಟ್ 2023, 23:30 IST
Last Updated 9 ಆಗಸ್ಟ್ 2023, 23:30 IST
ಅಕ್ಷರ ಗಾತ್ರ

ಕೇಂದ್ರ ಸರ್ಕಾರದ ಸಿಬ್ಬಂದಿ ನೇಮಕಾತಿ ಆಯೋಗವು (ಎಸ್‌ಎಸ್‌ಸಿ) ಸ್ಟೆನೊಗ್ರಾಫರ್ ಗ್ರೇಡ್ 'ಸಿ' ಮತ್ತು 'ಡಿ' ಹುದ್ದೆಗಳ ನೇಮಕಾತಿಗಾಗಿಕಂಪ್ಯೂಟರ್ ಆಧಾರಿತ ಸ್ಪರ್ಧಾತ್ಮಕ ಪರೀಕ್ಷೆ ನಡೆಸುತ್ತಿದೆ.

ಅಕ್ಟೋಬರ್ 2023 ರಲ್ಲಿ ಪರೀಕ್ಷೆ ನಡೆಯಲಿದೆ. ಪರೀಕ್ಷೆಯ ನಿಖರ ದಿನಾಂಕವನ್ನು ನಂತರ ಎಸ್‌ಎಸ್‌ಸಿ ವೆಬ್‌ಸೈಟ್ ಮೂಲಕ ತಿಳಿಸಲಾಗುವುದು. ಅಧಿಸೂಚನೆ ಮತ್ತಿತರ ವಿವರಗಳು ವೆಬ್‌ಸೈಟ್ www.ssckkr.kar.nic.in ಮತ್ತು https://ssc.nic.in ನಲ್ಲಿ ಲಭ್ಯವಿದೆ.

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಅರ್ಜಿ ಸಲ್ಲಿಸಲು ಕೊನೆ ದಿನ ಆಗಸ್ಟ್ 23, 2023. ಆನ್‌ಲೈನ್ ಮೂಲಕ ಸಲ್ಲಿಕೆಯಾದ ಅರ್ಜಿಗಳನ್ನು ಮಾತ್ರ ಸ್ವೀಕರಿಸಲಾಗುತ್ತದೆ. ಆನ್‌ಲೈನ್‌ನಲ್ಲಿ ಅರ್ಜಿಸಲ್ಲಿಸಲು ಲಿಂಕ್: https://ssc.nic.in

ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ 12ನೇ ತರಗತಿ ಅಥವಾ ತತ್ಸಮಾನ ಉತ್ತೀರ್ಣರಾಗಿರಬೇಕು. ಶೀಘ್ರಲಿಪಿ ಮತ್ತು ಬೆರಳಚ್ಚು ಕೌಶಲ್ಯ ಹೊಂದಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು.

ವಯೋಮಿತಿ:

i)ಸ್ಟೆನೊಗ್ರಾಫರ್ ಗ್ರೇಡ್‌ ‘ಸಿ‘ ಹುದ್ದೆಗೆ ಕನಿಷ್ಠ 18 ವರ್ಷಗಳು ಗರಿಷ್ಠ 30 ವರ್ಷಗಳು

ii) ಸ್ಟೆನೊಗ್ರಾಫರ್‌ ಗ್ರೇಡ್‌ ‘ಡಿ’ ಹುದ್ದೆಗೆ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಕನಿಷ್ಠ 17 ವರ್ಷ, ಗರಿಷ್ಠ 27 ವರ್ಷಗಳು. ಎಸ್‌.ಸಿ/ಎಸ್‌.ಟಿ/ಒಬಿಸಿ/ಆರ್ಥಿಕ ದುರ್ಬಲ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇದೆ. ವಿವರಗಳಿಗೆ ಅಧಿಸೂಚನೆಯ ಪ್ಯಾರಾ 4.1 ಅನ್ನು ನೋಡಿ.

ವೇತನ ಶ್ರೇಣಿ:

ಸ್ಟೆನೊ ಗ್ರೇಡ್‌ ‘ಸಿ‘ ಹುದ್ದೆಗೆ ಅಂದಾಜು ₹ 70,000

ಸ್ಟೆನೊ ಗ್ರೇಡ್‌ - ‘ಡಿ‘ ಹುದ್ದೆಗೆ ಅಂದಾಜು ₹ 43,000

ಅರ್ಜಿ ಶುಲ್ಕ : ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ₹100. ಮಹಿಳೆ/ ಎಸ್‌.ಸಿ/ಎಸ್‌.ಟಿ/ ಆರ್ಥಿಕ ದುರ್ಬಲ ವರ್ಗದ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ.

ನೇಮಕಾತಿ ವಿಧಾನ: ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಪರೀಕ್ಷೆಯಲ್ಲಿ ಎರಡು ಪತ್ರಿಕೆಗಳಿರುತ್ತವೆ. ಪತ್ರಿಕೆಗಳ ವಿವರ ಮತ್ತು ವಿಷಯಗಳು ಹೀಗಿವೆ.

ಪೇಪರ್-I ಕಂಪ್ಯೂಟರ್ ಆಧಾರಿತ ಪರೀಕ್ಷೆ.

(i) ಜನರಲ್ ಇಂಟೆಲಿಜೆನ್ಸ್ ಮತ್ತು ರೀಸನಿಂಗ್

(ii) ಸಾಮಾನ್ಯಅರಿವು

(iii) ಇಂಗ್ಲಿಷ್ ಭಾಷೆ ಮತ್ತು ಗ್ರಹಿಕೆ

ಪೇಪರ್-II ಕೌಶಲ ಪರೀಕ್ಷೆ

ಸ್ಟೆನೊಗ್ರಫಿ /ಟೈಪಿಂಗ್ (ಕಂಪ್ಯೂಟರ್ ಆಧಾರಿತ ಪರೀಕ್ಷೆಯಲ್ಲಿ ಅರ್ಹತೆ ಪಡೆದವರಿಗೆ).

ಎಸ್‌ಎಸ್‌ಸಿ ಪ್ರಧಾನ ಕಚೇರಿಯ ಅಧಿಕೃತ ವೆಬ್‌ಸೈಟ್ ಅಂದರೆ https://ssc.nic.in ಮೂಲಕ ಆನ್ಲೈನ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು. ವಿವರವಾದ ಸೂಚನೆಗಳಿಗಾಗಿ, ಅಧಿಸೂಚನೆಯ ಅನುಬಂಧ-I ಮತ್ತು ಅನುಬಂಧ-II ಅನ್ನುನೋಡಿ.

ಸೂಚನೆ: ಅಭ್ಯರ್ಥಿಗಳು ನಿಯಮಿತವಾಗಿ ನವದೆಹಲಿಯ ವೆಬ್‌ಸೈಟ್ https://ssc.nic.in ಮತ್ತು ಎಸ್‌ಎಸ್‌ಇ ಕರ್ನಾಟಕ-ಕೇರಳ ಪ್ರದೇಶದ ವೆಬ್‌ಸೈಟ್‌ www.ssckkr.kar.nic.in ವೀಕ್ಷಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT