ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಷಿನ್ ಲರ್ನಿಂಗ್ ಸಮ್ಮರ್ ಸ್ಕೂಲ್: 4ನೇ ಆವೃತ್ತಿಗೆ ಅಮೆಜಾನ್ ಇಂಡಿಯಾ ಚಾಲನೆ

Published 30 ಮೇ 2024, 13:31 IST
Last Updated 30 ಮೇ 2024, 13:31 IST
ಅಕ್ಷರ ಗಾತ್ರ

ನವದೆಹಲಿ: ಮಷಿನ್ ಲರ್ನಿಂಗ್ (ಎಂ.ಎಲ್.) ಸಮ್ಮರ್ ಸ್ಕೂಲ್‌ 4ನೇ ಆವೃತ್ತಿಯ ನೋಂದಣಿ ದಿನಾಂಕಗಳನ್ನು ಅಮೆಜಾನ್ ಇಂಡಿಯಾ ಇಂದು ಪ್ರಕಟಸಿದೆ. ವಿದ್ಯಾರ್ಥಿಗಳು ವಿಜ್ಞಾನಿಗಳಿಂದ ಮಷಿನ್ ಲರ್ನಿಂಗ್ ಕೌಶಲ್ಯಗಳು ಮತ್ತು ತಂತ್ರಜ್ಞಾನಗಳನ್ನು ಕಲಿಯಲು ಇದರಿಂದ ಅವಕಾಶ ಸಿಗಲಿದೆ.

ಜುಲೈ ತಿಂಗಳಲ್ಲಿ 4 ವಾರಾಂತ್ಯದ ದಿನಗಳಲ್ಲಿ ನಡೆಸಲಾಗುವ ಈ ಉಚಿತ ಶೈಕ್ಷಣಿಕ ಕೋರ್ಸ್‌ಗೆ ಮೇ 31ರಿಂದ ಜೂನ್ 21ರವರೆಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ.

ಭಾರತದಲ್ಲಿ ಮಾನ್ಯತೆ ಪಡೆದ ಯಾವುದೇ ಶಿಕ್ಷಣ ಸಂಸ್ಥೆಯಲ್ಲಿ ನೋಂದಣಿಯಾದ ಮತ್ತು 2025 ಅಥವಾ 2026ರಲ್ಲಿ ಪದವಿ ಪಡೆಯಲಿರುವ ಸ್ನಾತಕ, ಸ್ನಾತಕೋತ್ತರ ಅಥವಾ ಪಿ.ಎಚ್.ಡಿ. ಪದವಿಗಳಲ್ಲಿ ಅಧ್ಯಯನ ಮಾಡುತ್ತಿರುವ ಎಲ್ಲ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೂ ಮಷಿನ್ ಲರ್ನಿಂಗ್ ಸಮ್ಮರ್ ಸ್ಕೂಲ್ ಮುಕ್ತವಾಗಿದೆ.

ಅರ್ಹ 3000 ವಿದ್ಯಾರ್ಥಿಗಳು ಎಂ.ಎಲ್.ಸಮ್ಮರ್ ಸ್ಕೂಲ್‌ಗೆ ಪ್ರವೇಶ ಪಡೆಯಲಿದ್ದಾರೆ.

ಅಮೆಜಾನ್ ಎಂ.ಎಲ್. ಸಮ್ಮರ್ ಸ್ಕೂಲ್ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಬಳಸಿ: https://amazonmlsummerschoolindia.splashthat.com/

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT