ತುಮಕೂರು:‘ಪೋಷಕರು, ಶಿಕ್ಷಕರು, ಕಾಲೇಜಿನ ಆಡಳಿತ ಮಂಡಳಿ ಸಹಕಾರ ಸಾಧನೆಗೆ ಪೂರಕವಾಗಿದೆ. ನಿರೀಕ್ಷೆಯಂತೆಯೇ ಫಲಿತಾಂಶ ಲಭಿಸಿದೆ’–

ಇದುವಾಣಿಜ್ಯ ವಿಭಾಗದಲ್ಲಿ 600ಕ್ಕೆ 594 ಅಂಕಗಳಿಸಿ ರಾಜ್ಯಕ್ಕೆ 3ನೇ ಟಾಪರ್ ಆಗಿರುವನಗರದ ವಿದ್ಯಾವಾಹಿನಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಪ್ರಜ್ಞಾ ಸತೀಶ್ ಅವರ ಸಂತಸದ ನುಡಿ.

ವಾಣಿಜ್ಯ ಕೋರ್ಸ್ ಅಧ್ಯಯನ ನನಗೆ ಇಷ್ಟವಿತ್ತು. ಹೀಗಾಗಿ ಕಾಮರ್ಸ್ ಪ್ರವೇಶ ಪಡೆದು ಶ್ರಮ ಪಟ್ಟಿದ್ದಕ್ಕೆ ಹೆಚ್ಚು ಅಂಕಗಳು ಲಭಿಸಿವೆ. ಇದೇ ಕಾಲೇಜಿನಲ್ಲಿ ಬಿ.ಕಾಂ. ಪದವಿ ಪೂರೈಸಿ ಭವಿಷ್ಯದಲ್ಲಿ ಲೆಕ್ಕಪರಿಶೋಧಕಿ ಆಗುವ ಆಸೆ ಇದೆ ಎಂದು ಪ್ರಜ್ಞಾ ‘ಪ್ರಜಾವಾಣಿ’ಗೆ ತಿಳಿಸಿದರು.

ಒಬ್ಬ ಮಗಳು ಎಂಜಿನಿಯರ್ ಇದ್ದಾಳೆ. ಇವಳು ಕಾಮರ್ಸ್ ಮಾಡುತ್ತೇನೆ ಎಂದು ಇಷ್ಟಪಟ್ಟು ಕೋರ್ಸ್ ಆಯ್ಕೆ ಮಾಡಿಕೊಂಡಿದ್ದಳು. ಇಷ್ಟದಂತೆ ಓದಿ ಹೆಚ್ಚು ಅಂಕಗಳಿಸಿದ್ದಾಳೆ. ಅವಳ ಆಸೆಯಂತೆಯೇ ಪ್ರೋತ್ಸಾಹಿಸುತ್ತೇವೆ ಎಂದು ಪ್ರಜ್ಞಾ ತಂದೆ ಹಾಗೂ ಇಂಗ್ಲಿಷ್ ಅಧ್ಯಾಪಕರಾದ ಸತೀಶ್ ಹಾಗೂ ತಾಯಿ ಚೇತನಾ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.