ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ಪರ್ಧಾ ವಾಣಿ | ಬಹುಆಯ್ಕೆಯ ಪ್ರಶ್ನೆಗಳು

Published : 4 ಸೆಪ್ಟೆಂಬರ್ 2024, 19:50 IST
Last Updated : 4 ಸೆಪ್ಟೆಂಬರ್ 2024, 19:50 IST
ಫಾಲೋ ಮಾಡಿ
Comments

ಯುಪಿಎಸ್‌ಸಿ ಪ್ರಿಲಿಮ್ಸ್‌, ಕೆಪಿಎಸ್‌ಸಿ-ಪ್ರಿಲಿಮ್ಸ್ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ - 2 ಹಾಗೂ ಎಲ್ಲಾ ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಸಾಮಾನ್ಯ ಜ್ಞಾನದ ಮಾಹಿತಿಗಳಿವು.

1. ಅರ್ಜೆಂಟೀನಾದ ಯಾವ ಪ್ರದೇಶವನ್ನು ಕೃಷಿ ಚಟುವಟಿಕೆಯ ಹೃದಯಭಾಗ ಎಂದು ಕರೆಯಲಾಗುತ್ತದೆ?

ಎ. ಪಂಪಸ್.→→ಬಿ. ದ ಆಂಡೀಸ್.

ಸಿ. ಪಟಗೋನಿಯ.→ಡಿ. ಸೆಟಗೋನಿಯ.

ಉತ್ತರ : ಎ

2. ಭಾರತ ಮತ್ತು ಅರ್ಜೆಂಟೀನಾ ರಾಷ್ಟ್ರಗಳು ಕೆಳಗಿನ ಯಾವ ವಲಯದ ಒಪ್ಪಂದಕ್ಕೆ ಸಹಿ ಹಾಕಿವೆ?

ಎ. ಮುಕ್ತ ವ್ಯಾಪಾರ ಒಪ್ಪಂದ.

ಬಿ. ಸಾಂಸ್ಕೃತಿಕ ವಿನಿಮಯ ಒಪ್ಪಂದ.

ಸಿ. ಸಾಮಾಜಿಕ ಭದ್ರತಾ ಒಪ್ಪಂದ.

ಡಿ. ಮಹಿಳಾ ಹಕ್ಕುಗಳ ಸಂರಕ್ಷಣಾ ಒಪ್ಪಂದ.

ಉತ್ತರ : ಸಿ

3.ಇ-ಆಡಳಿತಕ್ಕೆ ಸಂಬಂಧಿಸಿದಂತೆ ಕೆಳಗಿನ ಯಾವ ಯೋಜನೆಗಳನ್ನು ಕರ್ನಾಟಕ ಸರ್ಕಾರ ಜಾರಿಗೆ ತಂದಿದೆ?

1. ಭೂಮಿ.→2.ಖಜಾನೆ.

3. ಮನುಜ.→4. ನಿರಂತರ ಸೇವಾ.

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.

ಎ. 1 ಮತ್ತು 2 ಬಿ. 2 ಮತ್ತು 3 ‌

ಸಿ. 3 ಮತ್ತು 4 ಡಿ. 4 ಮಾತ್ರ

ಉತ್ತರ : ಎ

4. ಸ್ಮಾರ್ಟ್ ಆಡಳಿತದಲ್ಲಿ ಕೆಳಗಿನ ಯಾವ ಅಂಶಗಳನ್ನು ಅಳವಡಿಸಿಕೊಳ್ಳಲಾಗುತ್ತದೆ?

1. ಸರಳೀಕರಣ.

2. ಆಡಳಿತ ವ್ಯವಸ್ಥೆಯಲ್ಲಿ ಮೌಲ್ಯಗಳ ಅಳವಡಿಕೆ.

3. ಉತ್ತರದಾಯಿತ್ವ.

4. ಪ್ರತಿಕ್ರಿಯಾಶೀಲ ಆಡಳಿತ.

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.

ಎ. 1 ಮತ್ತು 2 ಬಿ. 1, 2, 3 ಮತ್ತು 4

ಸಿ. 2 ಮತ್ತು 4 ಡಿ. 3 ಮತ್ತು 4

ಉತ್ತರ : ಬಿ

5. ಭಾಮ ಕಲಾಪಂ ನಾಟಕ ಕೆಳಗಿನ ಯಾವ ಲೇಖಕರಿಗೆ ಸಂಬಂಧಿಸಿದೆ?

ಎ. ಸಿದ್ಧೇಂದ್ರ ಯೋಗಿ.

ಬಿ. ಸಿದ್ದೇಶ್ವರ ಮುನಿ.

ಸಿ. ಲೋಕೇಶ್ವರ ಯೋಗಿ.

ಡಿ. ಓಹಿಲೇಶ್ವರ ಯೋಗಿ.

ಉತ್ತರ : ಎ

6.ಜಲಚಿತ್ರ ನೃತ್ಯಂಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಗಳನ್ನು ಗುರುತಿಸಿ?

1. ಈ ನೃತ್ಯ ಸ್ವರೂಪದಲ್ಲಿ ರಾಮಾಯಣದ ಕಥಾ ಹಂದರವನ್ನು ಪ್ರದರ್ಶಿಸಲಾಗುತ್ತದೆ.

2. ಈ ನೃತ್ಯ ಸ್ವರೂಪದಲ್ಲಿ ರಾಮಾಯಣ ಮತ್ತು ಮಹಾಭಾರತದ ಕಥಾ ಹಂದರವನ್ನು ಪ್ರದರ್ಶಿಸಲಾಗುತ್ತದೆ.

3. ನೃತ್ಯಪಟು ತನ್ನ ಕಾಲಿನ ಬೆರಳನ್ನು ಬಳಸಿಕೊಂಡು ಚಿತ್ರವನ್ನು ಬಿಡಿಸುವ ನೃತ್ಯ ಶೈಲಿಯಾಗಿದೆ.

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.

ಎ. 1 ಮತ್ತು 2 ಬಿ. 1 ಮತ್ತು 3

ಸಿ. 3 ಮಾತ್ರ ಡಿ. 2 ಮಾತ್ರ

ಉತ್ತರ : ಸಿ

7. ಕೆಳಗಿನ ಯಾವ ಸ್ಥಳದಲ್ಲಿ ನೂತನ ಪರಮಾಣು ವಿದ್ಯುತ್ ಉತ್ಪಾದನಾ ಘಟಕವನ್ನು ಪ್ರಾರಂಭಿಸಲಾಗುತ್ತಿದೆ?

ಎ. ಗೋರಖ್ ಪುರ್, ಹರಿಯಾಣ.

ಬಿ. ಭೋಪಾಲ್, ಮಧ್ಯ ಪ್ರದೇಶ.

ಸಿ. ಪ್ರಯಾಗ್ ರಾಜ್, ಉತ್ತರ ಪ್ರದೇಶ.

ಡಿ. ತಿರುವನಂತಪುರಂ, ಕೇರಳ.

ಉತ್ತರ : ಎ

8. ಕಲ್ಪಕಂನಲ್ಲಿ ಪ್ರಾಯೋಗಿಕವಾಗಿ ಕಾರ್ಯನಿರ್ವಹಿಸುತ್ತಿರುವ ಥೋರಿಯಂ ಆಧಾರಿತ ಪರಮಾಣು ಘಟಕದ ಸರಿಯಾದ ಹೆಸರನ್ನು ಗುರುತಿಸಿ?

ಎ. ಕಾಮಿನಿ→ಬಿ. ದುರ್ಗಾ.

ಸಿ. ಭವಾನಿ→ಡಿ. ಚಾಮುಂಡಿ.

ಉತ್ತರ : ಎ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT