ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಚಲಿತ ವಿದ್ಯಮಾನಗಳು

Published 15 ಜೂನ್ 2023, 1:19 IST
Last Updated 15 ಜೂನ್ 2023, 1:19 IST
ಅಕ್ಷರ ಗಾತ್ರ

1. ವಿಶ್ವ ಆಹಾರ ಸುರಕ್ಷತಾ ದಿವಸ

  • ಪ್ರತಿವರ್ಷ ಜೂನ್ 7 ನೇ ತಾರೀಕಿನಂದು ವಿಶ್ವ ಆಹಾರ ಸುರಕ್ಷತಾ ದಿವಸವನ್ನು ಜಾಗತಿಕ ಮಟ್ಟದಲ್ಲಿ
    ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು 5 ನೇ ರಾಜ್ಯಮಟ್ಟದಆಹಾರ ಸುರಕ್ಷತಾ ಸೂಚ್ಯಂಕವನ್ನು ಬಿಡುಗಡೆ ಮಾಡಿದರು.

  • ಆಹಾರ ಸುರಕ್ಷತೆಗೆ ಸಂಬಂಧಿಸಿದಂತೆ ಭಾರತದ ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರಸ್ತುತ ಪರಿಸ್ಥಿತಿಯನ್ನು ಪರಾಮರ್ಶಿಸುವ ವರದಿಯಾಗಿದ್ದು, ಈ ವರದಿಯನ್ನು ಬಿಡುಗಡೆ ಮಾಡಲು ಕೆಲ ಮಾನದಂಡಗಳನ್ನುಅಳವಡಿಸಲಾಗುತ್ತದೆ.

ಅಳವಡಿಸಲಾಗುವ ಮಾನದಂಡಗಳು :

  • ಆಹಾರ ಸುರಕ್ಷತೆಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸಲು ಲಭ್ಯವಿರುವ ಮಾನವ ಸಂಪನ್ಮೂಲದ ಪ್ರಮಾಣ.

  • ಆಹಾರ ಸುರಕ್ಷತೆಗೆ ಸಂಬಂಧಿಸಿದಂತೆ ಸರ್ಕಾರದ ಬಳಿಯಿರುವ ದತ್ತಾಂಶದ ಮಾಹಿತಿ.

  • ಸುರಕ್ಷಿತ ಆಹಾರವನ್ನು ಕಲ್ಪಿಸಲು, ಆಹಾರ ಉತ್ಪನ್ನಗಳನ್ನು ಪರೀಕ್ಷಿಸಲು ರಾಜ್ಯ ಸರ್ಕಾರಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಬಳಿಯಿರುವ ಮೂಲಭೂತ ಸವಲತ್ತುಗಳು.

  • ರಾಜ್ಯ ಮಟ್ಟದಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಗ್ರಾಹಕರ ಸಬಲೀಕರಣಕ್ಕೆ ಕೈಗೊಂಡಿರುವ ಕ್ರಮಗಳು.

  • ಸರ್ಕಾರದ ವತಿಯಿಂದ ಹಮ್ಮಿಕೊಂಡಿರುವ ತರಬೇತಿ ಕಾರ್ಯಕ್ರಮಗಳು ಹಾಗೂ ಸಾಮರ್ಥ್ಯ ಅಭಿವೃದ್ಧಿ
    ಕಾರ್ಯಕ್ರಮಗಳು.

  • ಮೇಲಿನ ಮಾನದಂಡಗಳ ಆಧಾರದ ಮೇಲೆ ಆಹಾರ ಸುರಕ್ಷತಾ ಸೂಚ್ಯಂಕವನ್ನು 2018-19 ರಿಂದ ಬಿಡುಗಡೆ ಮಾಡಲಾಗುತ್ತಿದೆ. ಈ ಸೂಚ್ಯಂಕದ ಪ್ರಮುಖ ಉದ್ದೇಶವೇನೆಂದರೆ ರಾಷ್ಟ್ರಮಟ್ಟದಲ್ಲಿ ಆಹಾರ ಸುರಕ್ಷತೆಗೆ ಸಂಬಂಧಿಸಿದಂತೆ ಸೂಕ್ತ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು, ರಾಜ್ಯಗಳ ನಡುವೆ ಆರೋಗ್ಯಕರ ಸ್ಪರ್ಧೆಗೆ ಅವಕಾಶವನ್ನು ಕಲ್ಪಿಸುವುದು ಹಾಗೂ ಆಹಾರ ಸುರಕ್ಷತಾ ವಲಯದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರುವ ನಿಟ್ಟಿನಲ್ಲಿ ಉಪಯುಕ್ತವಾಗುತ್ತದೆ.

  • ಪ್ರಸ್ತುತ ವರ್ಷ ಬಿಡುಗಡೆಯಾದ ಸೂಚ್ಯಂಕದಲ್ಲಿ ಕೇರಳ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ, ಕ್ರಮವಾಗಿ ಪಂಜಾಬ್ ಮತ್ತು ತಮಿಳುನಾಡು ಎರಡನೇ ಹಾಗೂ ಮೂರನೇ ಸ್ಥಾನವನ್ನು ಅಲಂಕರಿಸಿದೆ.

  • ಸಣ್ಣರಾಜ್ಯಗಳ ವರ್ಗದಲ್ಲಿ ಗೋವಾ ಮೊದಲನೇ ಸ್ಥಾನವನ್ನು ಪಡೆದುಕೊಂಡರೆ, ಮಣಿಪುರ ಮತ್ತು ಸಿಕ್ಕಿಂ ರಾಜ್ಯಗಳು ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನವನ್ನು ಪಡೆದುಕೊಂಡಿತು.

  • ಕೇಂದ್ರಾಡಳಿತ ಪ್ರದೇಶಗಳ ಶ್ರೇಯಾಂಕವನ್ನು ಗಮನಿಸುವುದಾದರೆ, ಜಮ್ಮು ಕಾಶ್ಮೀರ ಮೊದಲನೇ ಸ್ಥಾನದಲ್ಲಿದ್ದರೆ ಕ್ರಮವಾಗಿ ದೆಹಲಿ ಮತ್ತು ಚಂದಿಗಡ ಎರಡನೇ ಮತ್ತು ಮೂರನೇ ಸ್ಥಾನವನ್ನು ಅಲಂಕರಿಸಿದೆ.

  • ಸೂಚ್ಯಂಕ ಬಿಡುಗಡೆಯಾದ ನಂತರ ತ್ವರಿತ ಆಹಾರ ಪರೀಕ್ಷಾ ಕಿಟ್ ಪೋರ್ಟಲ್ ಅನ್ನು ಅನಾವರಣಗೊಳಿಸಲಾಯಿತು. ಈ ಪೋರ್ಟಲ್ ಮೂಲಕ ಭಾರತದ ಆಹಾರ ಉತ್ಪನ್ನಗಳ ಸುರಕ್ಷತೆಯ ವಿಚಾರದಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಕಾಪಾಡಿಕೊಳ್ಳಲು ಈ ಪೋರ್ಟಲ್ ಸಹಕಾರಿಯಾಗಲಿದೆ.


ವಿಶೇಷ ಸೂಚನೆ : ಜಾಗತಿಕ ಮಟ್ಟದಲ್ಲಿ ವಿಶ್ವ ಆಹಾರ ಸುರಕ್ಷತಾ ದಿವಸವನ್ನು 2019 ರಿಂದ ಆಚರಿಸಲಾಗುತ್ತಿದೆ.

2.Mission on Advanced and High impact Research (MAHIR) :


  • ಇತ್ತೀಚಿಗೆ ಕೇಂದ್ರ ಶಕ್ತಿ ಸಚಿವಾಲಯ ನೂತನ ಮತ್ತು ನವೀಕರಿಸಬಹುದಾದ ಇಂಧನ ವಲಯದಲ್ಲಿ
    ಹೊರಹೊಮ್ಮುತ್ತಿರುವ ತಂತ್ರಜ್ಞಾನವನ್ನು ಪತ್ತೆಹಚ್ಚಲು ಹಾಗೂ ಈ ನೂತನ ತಂತ್ರಜ್ಞಾನಗಳನ್ನು ಭಾರತದಲ್ಲಿಯೇ ಅಭಿವೃದ್ಧಿಪಡಿಸಲು ಮಹಿರ್ ಎನ್ನುವ ನೂತನ ಯೋಜನೆಯನ್ನು ಜಾರಿಗೆ ತಂದಿದೆ.

  • ಯೋಜನೆಯನ್ನು 2023-24 ರ ಅವಧಿಯಿಂದ 2027-28 ರವರಿಗೆ ಜಾರಿಗೆ ತರಲಾಗುತ್ತದೆ. ಭಾರತ ಸರ್ಕಾರ ಈಗಾಗಲೇ 2070 ರ ಒಳಗಾಗಿ ಇಂಗಾಲ ಡೈ ಆಕ್ಸೈಡ್ ಶೂನ್ಯ ಹೊರಸೂಸುವಿಕೆ ಗುರಿಯನ್ನು
    ತಲುಪುವುದು ಆಗಿ ಸ್ವಯಂ ಪ್ರೇರಿತ ಘೋಷಣೆಯನ್ನು ಮಾಡಿದ್ದು ಈ ಗುರಿಯನ್ನು ಸಾಧಿಸಲು ಪ್ರಸ್ತುತ ಯೋಜನೆ ಹೆಚ್ಚು ಉಪಯುಕ್ತವಾಗಲಿದೆ.

  • ಯೋಜನೆಯನ್ನು ಜಾರಿಗೆ ತರಲು ಸಾರ್ವಜನಿಕ ವಲಯದ ಸ್ಟಾರ್ಟ್ ಅಪ್ ಗಳು ಹಾಗೂ ಖಾಸಗಿ ವಲಯದ ಸ್ಟಾರ್ಟ್ಅಪ್ ಗಳು ಕೈಜೋಡಿಸುವುದಲ್ಲದೆ, ಭಾರತದ ಪ್ರಮುಖ ವಿಶ್ವವಿದ್ಯಾಲಯಗಳು, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹಾಗೂಇನ್ನಿತರೆ ಪ್ರಮುಖ ಕೈಗಾರಿಕೆಗಳು ಈ ಅಭಿಯಾನದಲ್ಲಿ ಕೈಜೋಡಿಸಲು ಮುಂದಾಗಿದೆ.

  • ದೇಶಿಯ ಮಟ್ಟದ ಸಂಸ್ಥೆಗಳೊಂದಿಗೆ ಕೈಜೋಡಿಸುವುದರೊಂದಿಗೆ, ಅಂತರರಾಷ್ಟ್ರೀಯ ಮಟ್ಟದ ಉತ್ತಮ
    ಪ್ರಯೋಗಾಲಯಗಳೊಂದಿಗೆ ಕೂಡ ಕೈಜೋಡಿಸಲಾಗುತ್ತಿದೆ. ಪ್ರಸ್ತುತ ಉನ್ನತ ಗುಣಮಟ್ಟವನ್ನು ಹೊಂದಿರುವ ಅಂತರರಾಷ್ಟ್ರೀಯ ಪ್ರಯೋಗಾಲಯಗಳೊಂದಿಗೆ, ನೂತನ ತಂತ್ರಜ್ಞಾನಗಳ ಅಭಿವೃದ್ಧಿಯನ್ನು ಜಂಟಿಯಾಗಿ ಮಾಡಲುಯೋಜನೆಯ ಅಡಿಯಲ್ಲಿ ಅವಕಾಶವನ್ನು ಕಲ್ಪಿಸಲಾಗಿದೆ. ಅಂತಿಮವಾಗಿ ಮುಂದಿನ ವರ್ಷಗಳಲ್ಲಿ, ಭಾರತ ಸ್ವಾವಲಂಬಿಯಾಗುವ ಉದ್ದೇಶದಿಂದ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ವರದಿಯಲ್ಲಿ ಉಲ್ಲೇಖಿಸಿದೆ.

3. ರಾಷ್ಟ್ರೀಯ ಜಲ ವಿದ್ಯುತ್ ನಿಗಮ ಹಾಗೂ ಮಹಾರಾಷ್ಟ್ರದ ಶಕ್ತಿ ಇಲಾಖೆಯ ನಡುವೆ ಸಹಭಾಗಿತ್ವದ ಒಪ್ಪಂದ :

  • ಇತ್ತೀಚಿಗೆ ಮಹಾರಾಷ್ಟ್ರ ಸರ್ಕಾರದ ಶಕ್ತಿ ಇಲಾಖೆ ಹಾಗೂ ರಾಷ್ಟ್ರೀಯ ಜಲ ವಿದ್ಯುತ್ ನಿಗಮ ಸಂಸ್ಥೆಗಳು ಜಂಟಿಒಪ್ಪಂದಕ್ಕೆ ಸಹಿ ಹಾಕಿದ್ದು, ಮಹಾರಾಷ್ಟ್ರದಲ್ಲಿ ನವೀಕರಿಸಬಹುದಾದ ಇಂಧನ ಮೂಲಗಳನ್ನು ಪತ್ತೆಹಚ್ಚಲು ಹಾಗೂಅಭಿವೃದ್ಧಿಪಡಿಸಲು ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

  • ಮಹಾರಾಷ್ಟ್ರ ಸರ್ಕಾರ ಹಲವಾರು ಜಲ ಸಂಗ್ರಹಣ ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಂಡಿದ್ದು ಈ ಒಪ್ಪಂದದಅನ್ವಯ ರಾಷ್ಟ್ರೀಯ ಜಲ ವಿದ್ಯುತ್ ನಿಗಮ ಒಟ್ಟಾರೆಯಾಗಿ 7350 ಮೆಗಾವಾಟ್ ವಿದ್ಯುತ್ ಉತ್ಪಾದನೆಯ ಯೋಜನೆಗಳನ್ನು ಅಭಿವೃದ್ಧಿ ಪಡಿಸಲಿದೆ.

ರಾಷ್ಟ್ರೀಯ ಜಲ ವಿದ್ಯುತ್ ನಿಗಮ ಅಭಿವೃದ್ಧಿಪಡಿಸುತ್ತಿರುವ ಯೋಜನೆಗಳು :

  • ಕಾಲು ಜಲವಿದ್ಯುತ್ ಯೋಜನೆ-1,150 ಮೆಗಾವಾಟ್ ವಿದ್ಯುತ್ ಉತ್ಪಾದನೆ.

  • ಸಾವಿತ್ರಿ ಜಲವಿದ್ಯುತ್ ಯೋಜನೆ-2,250 ಮೆಗಾವಾಟ್ ವಿದ್ಯುತ್ ಉತ್ಪಾದನೆ.

  • ಜಲಾಂದ್ ಜಲವಿದ್ಯುತ್ ಯೋಜನೆ-2,400 ಮೆಗವಾಟ್ ವಿದ್ಯುತ್ ಉತ್ಪಾದನೆ.

  • ಕೆನ್ ಗಾಡಿ ಜಲವಿದ್ಯುತ್ ಯೋಜನೆ-1,550 ಮೆಗಾವಾಟ್ ವಿದ್ಯುತ್ ಉತ್ಪಾದನೆ.

  • ಕೇಂದ್ರ ಸರ್ಕಾರದ ಉದ್ದೇಶಿತ ಗುರಿಯ ಅನ್ವಯ 2030 ರ ವೇಳೆಗೆ 500 ಗಿಗ ವಾಟ್ ವಿದ್ಯುತ್ ಉತ್ಪಾದನೆಯನ್ನು ನವೀಕರಿಸಬಹುದಾದ ಇಂಧನ ಮೂಲಗಳಿಂದ ಉತ್ಪಾದಿಸುವ ಗುರಿಯನ್ನು ಹೊಂದಿದ್ದು, ಈ ಗುರಿಯನ್ನು ಸಾಧಿಸಲು ಪ್ರಸ್ತುತ ಒಪ್ಪಂದ ಹೆಚ್ಚು ಸಹಕಾರಿಯಾಗಲಿದೆ.

  • ರಾಷ್ಟ್ರೀಯ ಜಲ ವಿದ್ಯುತ್ ನಿಗಮ, ಭಾರತದ ಅತಿ ದೊಡ್ಡ ಜಲವಿದ್ಯುತ್ ಉತ್ಪಾದನಾ ವಲಯದಲ್ಲಿ
    ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯಾಗಿದ್ದು, ಜಲವಿದ್ಯುತ್ ಯೋಜನೆಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತದೆ.

  • ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರೀಯ ಜಲ ವಿದ್ಯುತ್ ನಿಗಮ ಜಲ ವಿದ್ಯುತ್ ಉತ್ಪಾದನಾ ವಲಯಕ್ಕೆ ಮಾತ್ರ ಸೀಮಿತವಾಗಿರದೆ ಸೌರವಿದ್ಯುತ್ ಹಾಗೂ ಪವನ ವಿದ್ಯುತ್ ಅಭಿವೃದ್ಧಿ ಯೋಜನೆಗಳನ್ನು ಕೂಡ
    ಅನುಷ್ಠಾನಗೊಳಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT