ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನ ಮತ್ತು ತಂತ್ರಜ್ಞಾನ ಅಧ್ಯಯನ ಹೇಗೆ?

Last Updated 14 ಜುಲೈ 2021, 19:30 IST
ಅಕ್ಷರ ಗಾತ್ರ

ಸ್ಪರ್ಧಾತ್ಮಕ ಪರೀಕ್ಷೆಯೆಂದರೆ ಹತ್ತಾರು ವಿಷಯಗಳನ್ನು ಅಧ್ಯಯನ ಮಾಡಬೇಕಾಗುತ್ತದೆ. ಪ್ರಚಲಿತ ವಿದ್ಯಮಾನ, ಸಾಮಾನ್ಯ ಜ್ಞಾನ ಮೊದಲಾದವುಗಳ ಜೊತೆಗೆ ವಿಷಯಾವಾರು ಓದು ಕಡ್ಡಾಯ. ಇದರಲ್ಲಿ ಪ್ರಮುಖವಾದ ವಿಷಯ ವಿಜ್ಞಾನ ಮತ್ತು ತಂತ್ರಜ್ಞಾನ. ಈ ವಿಷಯದ ಮೇಲೆ ಪ್ರಶ್ನೆಗಳನ್ನು ಯುಪಿಎಸ್‌ಸಿ ಪ್ರಿಲಿಮ್ಸ್‌ನ ಜನರಲ್‌ ಸ್ಟಡಿ ಪತ್ರಿಕೆ ಒಂದರಲ್ಲಿ ಹಾಗೂ ಮೇನ್ಸ್‌ನ ಜನರಲ್‌ ಸ್ಟಡಿ ಪೇಪರ್‌ ಮೂರರಲ್ಲಿ ಕೇಳಲಾಗುತ್ತದೆ. ಸಾಮಾನ್ಯವಾಗಿ ಇತ್ತೀಚಿನ ತಂತ್ರಜ್ಞಾನದ ಮೇಲಿನ ಪ್ರಶ್ನೆಗಳನ್ನು ಕೇಳಲಾಗುತ್ತದೆ.

ವಿಜ್ಞಾನದಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಹಾಗೂ ಜೀವಶಾಸ್ತ್ರ ಮೊದಲಾದವುಗಳ ಮೇಲೆ ಪ್ರಶ್ನೆಗಳಿದ್ದರೆ, ತಂತ್ರಜ್ಞಾನ ಭಾಗದಲ್ಲಿ ಜೈವಿಕ ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ, ನ್ಯಾನೊ, ಬಾಹ್ಯಾಕಾಶ, ಶಕ್ತಿಯ ವಿವಿಧ ಮೂಲಗಳನ್ನು ಆಧರಿಸಿದ ತಂತ್ರಜ್ಞಾನದ ಮೇಲೆ ಪ್ರಶ್ನೆಗಳಿರುತ್ತವೆ.

ಬಹುತೇಕ ಎಲ್ಲಾ ವಿಷಯಗಳಂತೆ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲೂ ಕೂಡ, ಉಪ ವಿಭಾಗಗಳಿಗೆ ಆದ್ಯತೆ ನೀಡಬೇಕಾಗುತ್ತದೆ. ಸಾಮಾನ್ಯವಾಗಿ ಯುಪಿಎಸ್‌ಸಿಯಲ್ಲಿ ಜೀವಶಾಸ್ತ್ರ, ರಸಾಯನಶಾಸ್ತ್ರ, ಭೌತಶಾಸ್ತ್ರದ ಮೇಲೆ ಹೆಚ್ಚು ಪ್ರಶ್ನೆಗಳು ಬರುತ್ತವೆ. ಪುನಃ ಜೀವಶಾಸ್ತ್ರದಲ್ಲಿ ಯಾವುದು ಮುಖ್ಯ ಎಂದು ವಿಭಾಗಿಸಿಕೊಂಡು ಓದಬೇಕಾಗುತ್ತದೆ. ಅಂದರೆ ಸಸ್ಯಶಾಸ್ತ್ರ, ಜೀವಶಾಸ್ತ್ರ ಹಾಗೂ ಸೂಕ್ಷ್ಮಜೀವಿಶಾಸ್ತ್ರಕ್ಕೆ ಕೂಡ ಒತ್ತು ಕೊಟ್ಟು ಓದುವುದರಿಂದ ಹೆಚ್ಚು ಅಂಕಗಳನ್ನು ಗಳಿಸಬಹುದು. ಹಾಗೆಯೇ ತಳಿಶಾಸ್ತ್ರ (ಜೆನೆಟಿಕ್ಸ್‌), ಸೂಕ್ಷ್ಮಾಣು ಜೀವಿಗಳು ಮತ್ತು ಅವುಗಳಿಂದ ಬರುವ ಕಾಯಿಲೆಗಳು.. ಎಲ್ಲವನ್ನೂ ಶ್ರದ್ಧೆಯಿಂದ ಓದಬೇಕು.

ಈಗ ರಸಾಯನಶಾಸ್ತ್ರ ತೆಗೆದುಕೊಳ್ಳೋಣ. ಇದರಲ್ಲೂ ಕೂಡ ಉಪ ವಿಭಾಗಗಳತ್ತ ಗಮನ ಹರಿಸಬೇಕು. ಉದಾಹರಣೆಗೆ ನ್ಯೂಕ್ಲಿಯರ್‌ ರಸಾಯನಶಾಸ್ತ್ರ. ಭೌತಶಾಸ್ತ್ರದಲ್ಲಿ ಅಪ್ಲೈಡ್‌ ಭೌತಶಾಸ್ತ್ರದ ಮೇಲೆ ಹೆಚ್ಚು ಪ್ರಶ್ನೆಗಳು ಬರಬಹುದು. ಕೆಲವೊಮ್ಮೆ ಈ ವಿಭಾಗದಲ್ಲಿ ಕೆಲವೇ ಪ್ರಶ್ನೆಗಳನ್ನು ಕೇಳಿದ ಉದಾಹರಣೆಗಳೂ ಇವೆ.

ಆದರೆ ತಂತ್ರಜ್ಞಾನದ ಮೇಲೆ ಹೆಚ್ಚು ಪ್ರಶ್ನೆಗಳನ್ನು ಅದರಲ್ಲೂ ಮೇನ್ಸ್‌ ಪರೀಕ್ಷೆಯಲ್ಲಿ ಕೇಳಲಾಗುತ್ತದೆ. ಹಾಗೆಯೇ ಪ್ರಿಲಿಮ್ಸ್‌ನಲ್ಲೂ ಸಾಕಷ್ಟು ಪ್ರಶ್ನೆಗಳು ಬರುತ್ತವೆ. ಪ್ರಸಕ್ತ ಜನಪ್ರಿಯವಾಗಿರುವ ತಂತ್ರಜ್ಞಾನ ಮತ್ತು ಅದರ ಆಧಾರಿತ ಉಪಕರಣಗಳ ಕುರಿತು ಪರೀಕ್ಷೆಯಲ್ಲಿ ಪ್ರಶ್ನೆಗಳು ಬರಬಹುದು. ಹಾಗೆಯೇ ಜೈವಿಕತಂತ್ರಜ್ಞಾನ, ಬಾಹ್ಯಾಕಾಶ ತಂತ್ರಜ್ಞಾನ ಕೂಡ ಆದ್ಯತೆ ಪಡೆದಿವೆ.

ಹಾಗಾದರೆ ಯಾವ ಪುಸ್ತಕ ಓದಬೇಕು, ಎಲ್ಲಿ ವಿಷಯ ಸಂಗ್ರಹಿಸಬೇಕು? ಮೂಲ ವಿಜ್ಞಾನದ ಬಗ್ಗೆ 10ನೇ ತರಗತಿವರೆಗಿನ ಶಾಲಾ ಪಠ್ಯವನ್ನು ಓದಿ. ಎನ್‌ಸಿಇಆರ್‌ಟಿ ಪುಸ್ತಕಗಳಲ್ಲಿ ಈ ಬಗ್ಗೆ ಸಾಕಷ್ಟು ವಿಷಯವಿರುತ್ತದೆ. ಹಾಗೆಯೇ ವಿವಿಧ ದಿನಪತ್ರಿಕೆಗಳಲ್ಲಿ ಬರುವ ವಿಜ್ಞಾನ ಮತ್ತು ತಂತ್ರಜ್ಞಾನ ಕಾಲಂ ನೋಡಬಹುದು. ಆದರೆ ತಂತ್ರಜ್ಞಾನ ಕುರಿತು ಯಾವುದೇ ನಿಗದಿತ ಪುಸ್ತಕಗಳಿಲ್ಲ. ಶಾಲಾ ಪುಸ್ತಕಗಳು, ದಿನಪತ್ರಿಕೆ ಹಾಗೂ ಆನ್‌ಲೈನ್‌ನಲ್ಲಿ ಬರುವ ವಿಷಯ ಸಂಗ್ರಹಿಸಿಟ್ಟುಕೊಂಡು ಓದಬೇಕಾಗುತ್ತದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT