ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯೂಎಸ್ ವಿಶ್ವವಿದ್ಯಾಲಯಗಳ ರ‍್ಯಾಂಕಿಂಗ್‌: ಐಐಎಸ್‌ಸಿ–ಬೆಂಗಳೂರಿಗೆ ಉತ್ತಮ ಸ್ಥಾನ

Last Updated 10 ಜೂನ್ 2021, 8:39 IST
ಅಕ್ಷರ ಗಾತ್ರ

ನವದೆಹಲಿ: ಪ್ರತಿಷ್ಠಿತ ಕ್ವಾಕ್‌ಕ್ವರೇಲಿ ಸೈಮಂಡ್ಸ್‌ (ಕ್ಯೂಎಸ್‌) ವಿಶ್ವ ವಿಶ್ವವಿದ್ಯಾಲಯ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಸೇರಿಂದಂತೆಐಐಟಿ–ಬಾಂಬೆ, ಐಐಟಿ–ದೆಹಲಿ ಸ್ಥಾನ ಪಡೆದಿದೆ.

ಸಂಶೋಧನಾ ವಿಭಾಗದಲ್ಲಿಐಐಎಸ್‌ಸಿ–ಬೆಂಗಳೂರುಪ್ರಿನ್ಸ್ಟನ್, ಹಾವರ್ಡ್ ಮತ್ತು ಮ್ಯಾಸಚೂಸೆಟ್ಸ್ ವಿಶ್ವವಿದ್ಯಾಲಯಗಳನ್ನು ಹಿಂದಿಕ್ಕಿಅತ್ಯುತ್ತಮ ಸ್ಥಾನ ಪಡೆದಿದೆ.

ಜಾಗತಿಕ 200ರ ಪಟ್ಟಿಯಲ್ಲಿಐಐಟಿ–ಬಾಂಬೆ 177ನೇ ಸ್ಥಾನ, ಐಐಟಿ–ದೆಹಲಿ 185ನೇ ಸ್ಥಾನ ಹಾಗೂಐಐಎಸ್‌ಸಿ–ಬೆಂಗಳೂರು 186ನೇ ಸ್ಥಾನ ಪಡೆದಿವೆ.

ಲಂಡನ್‌ನಲ್ಲಿ ಈ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ವಿಶ್ವದ 200 ಅತ್ಯುತ್ತಮ ವಿಶ್ವವಿದ್ಯಾಲಯ/ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಗುರುತಿಸಲಾಗಿದೆ. ಐಐಟಿ–ಬಾಂಬೆ, ಐಐಟಿ–ದೆಹಲಿ,ಐಐಎಸ್‌ಸಿ–ಬೆಂಗಳೂರು ನೂರಕ್ಕೆ ನೂರಷ್ಟು ಅಂಕಗಳನ್ನು ಪಡೆದುವಿಶ್ವದ 200 ಅತ್ಯುತ್ತಮ ವಿಶ್ವವಿದ್ಯಾಲಯ/ ಉನ್ನತ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಇದನ್ನು ಕ್ಯೂಎಸ್‌ ಗ್ಲೋಬಲ್‌ ರ‍್ಯಾಂಕಿಂಗ್‌ ಎಂದೂ ಕರೆಯಲಾಗುತ್ತದೆ.

ಜೆಎನ್‌ಯು, ಐಐಟಿ ಭುವನೇಶ್ವರ, ಪುದುಚೇರಿ ವಿಶ್ವವಿದ್ಯಾಲಯ, ಉಸ್ಮಾನಿಯಾ ವಿಶ್ವವಿದ್ಯಾಲಯ, ಎಸ್‌ಆರ್‌ ವಿಜ್ಞಾನ ಮತ್ತು ತಾಂತ್ರಿಕ ವಿದ್ಯಾಲಯ, ಹಾಗೂ ಅನ್ಷುಮಾನ್‌ ಶಿಕ್ಷಣ ಸಂಸ್ಥೆಗಳು ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಹೊಸದಾಗಿ ಸ್ಥಾನ ಪಡೆದಿವೆ.

ಐಐಟಿ–ಮದ್ರಾಸ್‌, ಐಐಟಿ–ಖರಗ್‌ಪುರ, ಐಐಟಿ– ಕಾನ್ಪುರ, ಐಐಟಿ–ರೂರ್ಕಿ ಹಾಗೂ ಐಟಿ–ಗುವಾಹಟಿ ತಮ್ಮ ಸ್ಥಾನಗಳನ್ನು ಉತ್ತಮಪಡಿಸಿಕೊಂಡಿವೆ ಎಂದು ಮೂಲಗಳು ತಿಳಿಸಿವೆ.

ಭಾರತದ ಪ್ರತಿಷ್ಠಿತ ವಿವಿಗಳು ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆದಿರುವ ಹಿನ್ನಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಟ್ವೀಟ್‌ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.

ಐಐಎಸ್‌ಸಿ–ಬೆಂಗಳೂರುಸಂಶೋಧನಾ ವಿಭಾಗದಲ್ಲಿಅತ್ಯುತ್ತಮ ಸ್ಥಾನ ಪಡೆದಿರುವುದು ಹಾಗೂ ಜಾಗತಿಕ 200 ಪಟ್ಟಿಯಲ್ಲಿ ಮನ್ನಣೆ ಪಡೆದಿರುವುದಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಭಿನಂದನೆ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT