ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Karnataka 2nd PUC Result 2024: ರಾಜ್ಯದ ಶೇ 81.15 ವಿದ್ಯಾರ್ಥಿಗಳು ಉತ್ತೀರ್ಣ

Published 10 ಏಪ್ರಿಲ್ 2024, 5:28 IST
Last Updated 10 ಏಪ್ರಿಲ್ 2024, 5:28 IST
ಅಕ್ಷರ ಗಾತ್ರ

ಬೆಂಗಳೂರು: 2023-24ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಇಂದು ಪ್ರಕಟವಾಗಿದೆ. ರಾಜ್ಯದಲ್ಲಿ ಒಟ್ಟು ಶೇ 81.15 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

6,81,079 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅವರಲ್ಲಿ 5,52,690 ಮಂದಿ ತೇರ್ಗಡೆಯಾಗಿದ್ದಾರೆ.

ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಶೇ 97.37 ಸಾಧನೆ ಮಾಡುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದಿದೆ.

ದ್ವಿತೀಯ ಪಿಯುಸಿ ಫಲಿತಾಂಶ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ

https://karresults.nic.in

ಜಿಲ್ಲೆಗಳ ಶೇಕಡಾವಾರು ಫಲಿತಾಂಶ (ಹೊಸಬರು ಮಾತ್ರ)

ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಥಮ ಸ್ಥಾನ

ದ್ಚಿತೀಯ ಪಿಯುಸಿ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಕಾಯ್ದುಕೊಂಡಿದೆ.‌ ಜಿಲ್ಲೆಯಲ್ಲಿ ಈ‌ ಬಾರಿ ಶೇ 97.37 ಫಲಿತಾಂಶ‌ ದಾಖಲಾಗಿದೆ.‌ 21-22ನೇ ಸಾಲಿನಿಂದ ಸತತವಾಗಿ ದಕ್ಷಿಣ ಕನ್ನಡ ಜಿಲ್ಲೆ ರಾಜ್ಯದಲ್ಲಿ ಪ್ರಥಮ‌ ಸ್ಥಾನದಲ್ಲಿದೆ.‌ 2022-23 ನೆ ಸಾಲಿನಲ್ಲಿ ಜಿಲ್ಲೆಯಲ್ಲಿ ಶೇ 95.33 ಫಲಿತಾಂಶ, 2021-22 ನೇ ಸಾಲಿನಲ್ಲಿ ಶೇ 88.02 ಫಲಿತಾಂಶ ದಾಖಲಾಗಿತ್ತು. ಕೋವಿಡ್ 19 ಸಾಂಕ್ರಾಮಿಕದ ಕಾರಣಕ್ಕೆ 2020-21ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ರದ್ದುಗೊಂಡಿತ್ತು.

ಫಲಿತಾಂಶದ ಅಂಕಿಅಂಶಗಳು:

*ದ್ವಿತೀಯ ಪಿಯುಸಿ ಪರೀಕ್ಷೆ-1ನ್ನು ದಿನಾಂಕ: 01-03-2024 ರಿಂದ 22-03-2024 ರವರೆಗೆ ಒಟ್ಟು 1124 ಪರೀಕ್ಷಾ ಕೇಂದ್ರಗಳಲ್ಲಿ ರಾಜ್ಯಾದಂತ ನಡೆಸಲಾಯಿತು.

*ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವನ್ನು ಒಟ್ಟು 70 ಮೌಲ್ಯಮಾಪನ ಕೇಂದ್ರಗಳಲ್ಲಿ ದಿನಾಂಕ 25/03/2024 ರಿಂದ 03/04/2024 ರವರೆಗೆ 27,650 ಮೌಲ್ಯಮಾಪಕರಿಂದ ನಡೆಸಲಾಯಿತು.

*ಪರೀಕ್ಷೆಗೆ ಅರ್ಹರಾದ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ: 6,98378

*ಎಲ್ಲಾ ವಿಷಯಗಳಿಗೆ ಗೈರುಹಾಜರಾದ ವಿದ್ಯಾರ್ಥಿಗಳ ಸಂಖ್ಯೆ: 17,299

*ಪರೀಕ್ಷೆಗೆ ಹಾಜರಾದ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ: 6,81,079

*ತೇರ್ಗಡೆಯಾದ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ: 5,52,690

* 2024ರಲ್ಲಿ ಶೇಕಡವಾರು ಉತ್ತೀರ್ಣತಾ ಪ್ರಮಾಣ 81.15% ಇದ್ದು, ಇದು 2023ರ ವರ್ಷದ ಉತ್ತೀರ್ಣತಾ ಪ್ರಮಾಣ 74.67% ಗಿಂತ 6.48%ರಷ್ಟು ಹೆಚ್ಚಿದೆ.

*ಫಲಿತಾಂಶವನ್ನು ಕಾಲೇಜುಗಳಲ್ಲಿ ಪ್ರಕಟಿಸುವ ದಿನಾಂಕ: 10-04-2024 ಮಧ್ಯಾಹ್ನ 3ಗಂಟೆಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT