ಶಾಲಾ ತರಗತಿಯಲ್ಲಿ ಮಕ್ಕಳನ್ನು ವೃತ್ತಾಕಾರದಲ್ಲಿ ಕೂರಿಸುವ ಪದ್ಧತಿ ಈಗ ಚರ್ಚೆಯಲ್ಲಿದೆ. ಹಾಗಿದ್ದರೆ ಸಾಮಾನ್ಯ ತರಗತಿಗಿಂತ ಈ ಮಾದರಿಯ ತರಗತಿ ಹೇಗೆ ಭಿನ್ನ? ಅದರಿಂದಾಗುವ ಪ್ರಯೋಜನಗಳೇನು?

ಮಲಯಾಳಂ ಸಿನಿಮಾವೊಂದರಿಂದ ಪ್ರೇರಣೆ ಪಡೆದ ಕೇರಳದ ಶಾಲೆಗಳು ಈಗ ತರಗತಿಗಳಲ್ಲಿ ಮಕ್ಕಳನ್ನು ವೃತ್ತಾಕಾರದಲ್ಲಿ ಕೂರಿಸುವ ವಿಧಾನವನ್ನು ಅನುಸರಿಸತೊಡಗಿವೆ. ಹೀಗಾಗಿ, ಇದು ‘ಕೇರಳ ಮಾದರಿ’ ಎಂದು ಪ್ರಚಾರ ಪಡೆಯುತ್ತಿದೆ. ನಮ್ಮ ರಾಜ್ಯದ ಶಾಲೆಗಳೂ ಈ ಮಾದರಿ ಅನುಸರಿಸಬೇಕೆಂಬ ಒತ್ತಾಯ ಕೇಳಿಬರುತ್ತಿದೆ. ಆದರೆ, ಕರ್ನಾಟಕದ ಶಾಲೆಯೊಂದರಲ್ಲಿ ಸುಮಾರು ಮೂರು ದಶಕಗಳ ಹಿಂದೆಯೇ ಈ ಮಾದರಿಯನ್ನು ಅಳವಡಿಸಲಾಗಿದ್ದು, ಸುಳ್ಯದ ಪ್ರಕೃತಿ ಸಂಪದ್ಭರಿತ ‘ಸ್ನೇಹ ಶಾಲೆ’ಯಲ್ಲಿ ಲಾಗಾಯ್ತಿನಿಂದಲೂ ಮಕ್ಕಳು ಹೀಗೇ ಕೂರುತ್ತಿದ್ದಾರೆ.

ಇಂಗ್ಲಿಷ್ ಮಾಧ್ಯಮದ ಪ್ರವಾಹದ ಎದುರು ಕನ್ನಡ ಮಾಧ್ಯಮದ ಈ ಖಾಸಗಿ ಶಾಲೆಯನ್ನು 1996ರಲ್ಲಿ ತೆರೆದಾಗ, ಅದು ವಿಶಿಷ್ಟವಾಗಿ ಇರಬೇಕೆಂಬ ಕಾರಣಕ್ಕೆ ವೃತ್ತಾಕಾರದ ಕಟ್ಟಡಗಳನ್ನು ಕಟ್ಟಲಾಯಿತು. ಜೊತೆಗೆ ತರಗತಿಗಳಲ್ಲಿ ಮಕ್ಕಳನ್ನೂ ವೃತ್ತಾಕಾರದಲ್ಲೇ ಕೂರಿಸುವ ವ್ಯವಸ್ಥೆ ಮಾಡಲಾಯಿತು. ಒಂದು ತರಗತಿಗೆ 30 ಮಕ್ಕಳಿಗೆ ಮಾತ್ರ ಪ್ರವೇಶ ನೀಡುವ ನೀತಿ ಇಲ್ಲಿ ಇದೆ. ಇಪ್ಪತ್ತು ಅಡಿಗಳ ವ್ಯಾಸದ ಕೊಠಡಿಯಲ್ಲಿ ಒಂದೇ ವೃತ್ತದಲ್ಲಿ ಗೋಡೆಯ ಪರಿಧಿಯಲ್ಲಿ ಎಲ್ಲ ಮಕ್ಕಳನ್ನೂ ಕೂರಿಸಲು ಸಾಧ್ಯವಾಗಿದೆ. ಕುತ್ತಿಗೆ ನೋವು, ಬೆನ್ನು ನೋವು, ಬೋರ್ಡ್ ಕಾಣದಿರುವಂತಹ ಸಮಸ್ಯೆಗಳಿಗೆ ಇಲ್ಲಿ ಜಾಗವಿಲ್ಲ. ‘ಹಿಂದಿನ ಬೆಂಚಿನ’ ಸಮಸ್ಯೆಯನ್ನು ಸಹ ಇದು ನೀಗಿಸಿದೆ.

ಹೀಗಿದೆ ಪ್ರಯೋಜನ

1. ಮಧ್ಯದಲ್ಲಿ ಏನೂ ಅಡಚಣೆ ಇರುವುದಿಲ್ಲವಾದ್ದರಿಂದ ಶಿಕ್ಷಕಿಗೆ ನೇರವಾಗಿ, ಕ್ಷಿಪ್ರವಾಗಿ ಯಾವುದೇ ಮಗುವಿನ ಬಳಿಗೆ ಹೋಗಲು ಮತ್ತು ಕಲಿಕೆಯನ್ನು ಪರಿಶೀಲಿಸಲು ಸಾಧ್ಯ.

2. ಮಕ್ಕಳು ಪರಸ್ಪರ ಮುಖಾಮುಖಿ ಆಗುವುದರಿಂದ ಅವರಿಗೆ ಸಭಾ ಕಂಪನ ಈ ಹಂತದಲ್ಲೇ ಮಾಯವಾಗುತ್ತದೆ.

3. ವೃತ್ತದ ಮಧ್ಯದಲ್ಲಿರುವ ಖಾಲಿ ಜಾಗವು ಮಕ್ಕಳ ಹಾಡು, ನೃತ್ಯ ಮತ್ತು ನಾಟಕದಂತಹ ಚಟುವಟಿಕೆಗಳಿಗೆ ಉಪಯುಕ್ತವಾಗುತ್ತದೆ.

4. ಗೋಡೆಯು ತಗ್ಗು ಆಕಾರದಲ್ಲಿದ್ದು, ಕರಿಹಲಗೆಯನ್ನು ಗೋಡೆಯಲ್ಲೇ ಅಳವಡಿಸಲಾಗಿದೆ. ಹೀಗಾಗಿ, ಅದರಲ್ಲಿ ಬರೆದುದೆಲ್ಲವೂ ಮಕ್ಕಳಿಗೆ ಕಾಣುತ್ತದೆ. ಮಗು ಎಲ್ಲೇ ಕುಳಿತಿದ್ದರೂ ಬೋರ್ಡಿನ ಯಾವುದೇ ಮೂಲೆಯಲ್ಲಿ ಬರೆದದ್ದು ಸಹ ಕಾಣಿಸುತ್ತದೆ.

5. ಮಕ್ಕಳಿಗೂ ಬರೆಯುವ ಅವಕಾಶ ನೀಡುವ ಉದ್ದೇಶದಿಂದ ಕರಿಹಲಗೆಯನ್ನು ತಗ್ಗಿನಲ್ಲಿ ನಿರ್ಮಿಸಲಾಗಿದೆ.

6. ಬಹಳಷ್ಟು ಕಿಟಕಿಗಳಿರುವುದರಿಂದ ಗಾಳಿ ಬೆಳಕಿನ ವ್ಯವಸ್ಥೆ ಉತ್ತಮವಾಗಿದೆ. ಮಾಡು ಸುಮಾರು 18 ಅಡಿಗಳಷ್ಟು ಎತ್ತರವಿದ್ದು, ಬಿಸಿಗಾಳಿ ಮೇಲಕ್ಕೆ ಸಾಗಿ ತರಗತಿಯಲ್ಲಿ ಮಕ್ಕಳು ಇಡೀ ದಿನ ಉಲ್ಲಾಸದಿಂದ ಇರುತ್ತಾರೆ.

7. ಶಿಕ್ಷಣ ಇಲಾಖೆಯು 1990ರ ದಶಕದ ಕೊನೆಗೆ ‘ಚೈತನ್ಯ’ ಎಂಬ ಹೆಸರಿನಲ್ಲಿ ವೃತ್ತಾಕಾರದ ತರಗತಿಗಳನ್ನು ಅನುಮೋದಿಸಿತ್ತು. ಇದರ ಭಾಗವಾಗಿ 1999ರಲ್ಲಿ ‘ಸ್ನೇಹ ಶಾಲೆ’ಯಲ್ಲಿ ಕರಾವಳಿ ಶಾಲೆಗಳ ಶಿಕ್ಷಕರಿಗಾಗಿ ಒಂದು ವಾರದ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.

8. ಶಾಲೆಯಲ್ಲಿ ಇಂತಹ ಮೂರು ಕೊಠಡಿಗಳಿದ್ದು, ಒಂದರಿಂದ ಮೂರರವರೆಗಿನ ತರಗತಿಗಳು ಇಲ್ಲಿ ನಡೆಯುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.