ಯಪಿಎಸ್ಸಿ -ಪ್ರಿಲಿಮ್ಸ್ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ- 2, ಕೆಪಿಎಸ್ಸಿ –ಪ್ರಿಲಿಮ್ಸ್ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ-2 ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವ ಪ್ರಚಲಿತ ಮಾಹಿತಿಯನ್ನು ಗುರುಶಂಕರ್ ಅವರು ಇಲ್ಲಿ ನೀಡಿದ್ದಾರೆ.

1. ರಾಸಾಯನಿಕ ಅಸ್ತ್ರಗಳ ನಿಷೇಧ ಒಪ್ಪಂದದ ಮಹತ್ವವೇನು ?

ಎ. ಈ ಒಪ್ಪಂದವು ಏಪ್ರಿಲ್ 29,1997ರಂದು ಜಾರಿಗೆ ಬಂದಿತು.

ಬಿ. ಇದುವರೆಗೂ ವಿಶ್ವದ 164 ರಾ ಷ್ಟ್ರಗಳು ಈ ಒಪ್ಪಂದಕ್ಕೆ ಸಹಿಹಾಕಿವೆ.

ಎ. ಹೇಳಿಕೆ ಎ ಮಾತ್ರ ಸರಿಯಾಗಿದೆ.

ಬಿ. ಹೇಳಿಕೆ ಬಿ ಮಾತ್ರ ಸರಿಯಾಗಿದೆ.

ಸಿ. ಮೇಲಿನ ಎರಡೂ ಹೇಳಿಕೆಗಳು ಸರಿಯಾಗಿವೆ.

ಡಿ. ಮೇಲಿನ ಎರಡೂ ಹೇಳಿಕೆಗಳು ತಪ್ಪಾಗಿವೆ.

ಉತ್ತರ: ಸಿ

2. ಎರಡನೇ ಮಹಾಯುದ್ಧದಲ್ಲಿ ರಾಸಾಯನಿಕ ಅಸ್ತ್ರಗಳ ಪ್ರಯೋಗ ಮಾಡಿದವರು ಯಾರು ?

ಎ. ಅಡಾಲ್ಫ್ ಹಿಟ್ಲರ್ ಬಿ. ಸದ್ದಾಂ ಹುಸೇನ್

ಸಿ. ಬಷರ್ ಅಲ್ ಅಸಾದ್ ಡಿ. ಹಸನ್ ರೋಹನಿ

ಉತ್ತರ: ಎ

3. ಭಾರತದಲ್ಲಿ ಬಡತನಕ್ಕೆ ಸಂಬಂಧಿಸಿದ ಸಮೀಕ್ಷೆಯನ್ನು ನಡೆಸುವ ಸಂಸ್ಥೆ ಯಾವುದು?

ಎ. ಎನ್ಎಸ್ಎಸ್ಒ (ನ್ಯಾಷನಲ್ ಸ್ಯಾಂಪಲ್ ಸರ್ವೆ ಆಫೀಸ್)

ಬಿ. ಹಣಕಾಸು ಸಚಿವಾಲಯ.

ಸಿ. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ.

ಡಿ. ಕಾರ್ಮಿಕ ಇಲಾಖೆ.

ಉತ್ತರ: ಎ

4. ಸೆಮಿಕಂಡಕ್ಟರ್ ಉತ್ಪಾದನೆ ಭಾರತಕ್ಕೆ ಏಕೆ ನಿರ್ಣಾಯಕವಾಗಿದೆ?

ಎ. ಎಲ್ಲಾ ರೀತಿಯ ಎಲೆಕ್ಟ್ರಾನಿಕ್ಸ್ ವಸ್ತುಗಳಿಗೆ ಸೆಮಿಕಂಡಕ್ಟರ್ ಚಿಪ್ಗಳು ಅಗತ್ಯವಾಗಿವೆ.

ಬಿ. ಎಲೆಕ್ಟ್ರಾನಿಕ್ ವಾಹನಗಳ ತಯಾರಿಕೆಯಲ್ಲಿ ಇದು ಅತ್ಯವಶ್ಯಕ ವಸ್ತುವಾಗಿದ್ದು ಭಾರತವು ತನ್ನ ಗ್ರೀನ್ ಎನರ್ಜಿ ಗುರಿಗಳನ್ನು ತಲುಪಲು ಸೆಮಿಕಂಡಕ್ಟರ್ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗುವುದು ನಿರ್ಣಾಯಕವಾಗಿದೆ..

ಎ. ಹೇಳಿಕೆ ಎ ಮಾತ್ರ ಸರಿಯಾಗಿದೆ.

ಬಿ. ಹೇಳಿಕೆ ಬಿ ಮಾತ್ರ ಸರಿಯಾಗಿದೆ.

ಸಿ. ಮೇಲಿನ ಎರಡೂ ಹೇಳಿಕೆಗಳು ಸರಿಯಾಗಿವೆ.

ಡಿ. ಮೇಲಿನ ಎರಡೂ ಹೇಳಿಕೆಗಳು ತಪ್ಪಾಗಿವೆ.

ಉತ್ತರ: ಸಿ

5. ಫಾಕ್ಸ್ ಕಾನ್ ಕಂಪನಿಯು ಯಾವ ದೇಶಕ್ಕೆ ಸಂಬಂಧಿಸಿದೆ?

ಎ. ಚೀನಾ ಬಿ. ತೈವಾನ್

ಸಿ. ಹಾಂಕಾಂಗ್ ಡಿ. ದಕ್ಷಿಣ ಕೊರಿಯಾ

ಉತ್ತರ: ಬಿ.

6. ರಫ್ತು ಸಿದ್ಧತೆ ಸೂಚ್ಯಂಕದಲ್ಲಿ ಕೆಳಗಿನ ಯಾವ ರಾಜ್ಯ/ಕೇಂದ್ರಾಡಳಿತ ಪ್ರದೇಶ ಕೊನೆಯ ಸ್ಥಾನವನ್ನು ಪಡೆದಿದೆ?

ಎ. ಲಕ್ಷದ್ವೀಪ ಬಿ. ಅಂಡಮಾನ್ ಮತ್ತು ನಿಕೋಬಾರ್

ಸಿ. ಕೇರಳ ಡಿ. ಮಧ್ಯಪ್ರದೇಶ

ಉತ್ತರ : ಎ

9. ಇತ್ತೀಚೆಗೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಕೆಳಗೆ ಉಲ್ಲೇಖಿಸಿರುವ ಯಾವ ಸಾಮ್ರಾಜ್ಯ ಕಾಲದ ಕಲಾಕೃತಿಗಳು ಕಂಡುಬಂದಿವೆ?

ಎ. ಶಾತವಾಹನ ಸಾಮ್ರಾಜ್ಯ ಬಿ. ಕಾಕತೀಯ ಸಾಮ್ರಾಜ್ಯ

ಸಿ. ಚಾಲುಕ್ಯ ಸಾಮ್ರಾಜ್ಯ ಡಿ. ಚೋಳ ಸಾಮ್ರಾಜ್ಯ

ಉತ್ತರ: ಬಿ

10. ಈ ಕೆಳಗೆ ಹೆಸರಿಸಿರುವ ಯಾರನ್ನು ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ಮಂಡಳಿಯ ಸ್ಥಾಪನೆಯ ಹಿಂದಿನ ಶಕ್ತಿ ಎಂದು ಕರೆಯಬಹುದು?

ಎ. ಜವಾಹರ್ ಲಾಲ್ ನೆಹರು

ಬಿ. ಸರ್ದಾರ್ ವಲ್ಲಬಾಯ್ ಪಟೇಲ್

ಸಿ. ಡಾ. ವರ್ಗೀಸ್ ಕುರಿಯನ್

ಡಿ. ಇಂದಿರಾಗಾಂಧಿ

ಉತ್ತರ: ಸಿ.

11. ಇತ್ತೀಚೆಗೆ ಕೆಳಗಿನ ಯಾವ ಸಂಸ್ಥೆ ಉಕ್ಕು ನಿರ್ಮಾಣದಲ್ಲಿ ಸೃಷ್ಟಿಯಾಗುವ ತ್ಯಾಜ್ಯವನ್ನು ಬಳಸಿಕೊಳ್ಳುವ ತಂತ್ರಜ್ಞಾನ ಕಂಡು ಹಿಡಿದಿದೆ?

ಎ. ಕೇಂದ್ರ ರಸ್ತೆ ಸಂಶೋಧನಾ ಸಂಸ್ಥೆ
ಬಿ. ಕೇಂದ್ರ ರೈಲು ಸಂಶೋಧನಾ ಸಂಸ್ಥೆ
ಸಿ. ಕೇಂದ್ರ ರಸ್ತೆ ಮತ್ತು ರೈಲು ಸಂಶೋಧನಾ ಸಂಸ್ಥೆ
ಡಿ. ಕೇಂದ್ರ ಹಡಗು ನಿರ್ಮಾಣ ಸಂಶೋಧನಾ ಸಂಸ್ಥೆ

ಉತ್ತರ: ಎ

12. ಇತ್ತೀಚೆಗೆ ಕೆಳಗಿನ ಯಾವ ಅರಬ್ ರಾಷ್ಟ್ರ ಮೊಟ್ಟಮೊದಲ ಬಾರಿಗೆ ಏಷ್ಯನ್-ಪೆಸಿಫಿಕ್ ಗ್ರೂಪ್ ಆನ್ ಮನಿ ಲಾಂಡರಿಂಗ್ ಸಂಸ್ಥೆಯ ವೀಕ್ಷಕ ಸ್ಥಾನಮಾನವನ್ನು ಪಡೆದಿದೆ?

ಎ. ಯುನೈಟೆಡ್ ಅರಬ್ ಎಮಿರೇಟ್ಸ್
ಬಿ. ಸೌದಿ ಅರೇಬಿಯಾ
ಸಿ. ಕತಾರ್
ಬಿ. ಲೆಬನಾನ್

ಉತ್ತರ : ಎ

13. ಭಾರತ-ಮ್ಯಾನ್ಮಾರ್ – ಥಾಯ್ಲೆಂಡ್ ತ್ರಿಪಕ್ಷೀಯ ಹೆದ್ದಾರಿ ಯೋಜನೆಯನ್ನು ಕೆಳಗೆ ಉಲ್ಲೇಖಿಸಿರುವ ಯಾವ ಪ್ರಧಾನಮಂತ್ರಿ ಅವಧಿಯಲ್ಲಿ ಅನುಮೋದಿಸಲಾಯಿತು?

ಎ. ಇಂದಿರಾಗಾಂಧಿ
ಬಿ. ಮೊರಾರ್ಜಿ ದೇಸಾಯಿ
ಸಿ. ಮನಮೋಹನ್ ಸಿಂಗ್
ಡಿ. ಅಟಲ್ ಬಿಹಾರಿ ವಾಜಪೇಯಿ

ಉತ್ತರ : ಡಿ

14. ಭಾರತದ ಕೆಳಗೆ ಹೆಸರಿಸಿರುವ ಯಾವ ರಾಜ್ಯಗಳಲ್ಲಿ ಪ್ರಸ್ತುತ ವರ್ಷ ಮಳೆಯ ಪ್ರಮಾಣ ಇಳಿಮುಖವಾಗುವ ಸಾಧ್ಯತೆಗಳು ಹೆಚ್ಚಾಗಿವೆ?

1. ಉತ್ತರ ಪ್ರದೇಶದ ಕೆಲ ಪ್ರದೇಶಗಳು
2. ಕರ್ನಾಟಕದ ಕೆಲ ಪ್ರದೇಶಗಳು
3. ಅಸ್ಸಾಂ, ಬಿಹಾರ್ ಮತ್ತು ಪಂಜಾಬಿನ ಕೆಲ ಪ್ರದೇಶಗಳು
4. ತಮಿಳುನಾಡಿನ ಕೆಲ ಪ್ರದೇಶಗಳು

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ

ಎ. 1, 2, 3 ಮತ್ತು 4

ಬಿ. 1 ಮತ್ತು 3

ಸಿ. 1 ಮತ್ತು 4

ಡಿ. 2 ಮತ್ತು 4

ಉತ್ತರ: ಎ

15. ಇತ್ತೀಚೆಗೆ ಭಾರತ ಯಾವ ರಾಷ್ಟ್ರದೊಂದಿಗೆ ಸ್ಥಳೀಯ ನಗದಿನಲ್ಲಿ ವಹಿವಾಟು ನಡೆಸುವ ಒಪ್ಪಂದಕ್ಕೆ ಸಹಿ ಹಾಕಿದೆ?

ಎ. ಫ್ರಾನ್ಸ್
ಬಿ. ಯುನೈಟೆಡ್ ಅರಬ್ ಎಮಿರೇಟ್ಸ್
ಸಿ. ಸೌದಿ ಅರೇಬಿಯಾ
ಡಿ. ನಾರ್ವೆ

ಉತ್ತರ: ಬಿ

Cut-off box - 6. ಒಂದು ರಾಷ್ಟ್ರದ ಒಟ್ಟು ರಾಷ್ಟ್ರೀಯ ಆದಾಯವನ್ನು ಆ ರಾಷ್ಟ್ರದ ಒಟ್ಟು ಜನಸಂಖ್ಯೆಯಿಂದ ಭಾಗಿಸಿದಾಗ ಸಿಗುವ ಮೌಲ್ಯವೇ ? ಎ. ತಲಾದಾಯವಾಗಿದೆ ಬಿ. ನಾಮಮಾತ್ರ ರಾಷ್ಟ್ರೀಯ ಆದಾಯವಾಗಿದೆ ಸಿ. ನೈಜರಾಷ್ಟ್ರೀಯ ಆದಾಯವಾಗಿದೆ. ಡಿ. ವೈಯಕ್ತಿಕ ಆದಾಯವಾಗಿದೆ ಉತ್ತರ: ಎ 7. ಕರ್ನಾಟಕದಲ್ಲಿರುವ ಅಪರಾಧ ತನಿಖಾ ದಳ(ಸಿಐಡಿ) ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿರಿ. ಎ. ಕರ್ನಾಟಕ ಸರ್ಕಾರ 1974ರಲ್ಲಿ ಅಪರಾಧ ತನಿಖಾ ದಳವನ್ನು ಸ್ಥಾಪಿಸಿತು. ಬಿ. ಕಾನೂನು ಮತ್ತು ತನಿಖೆಯಲ್ಲಿ ವಿಶೇಷ ಜ್ಞಾನದ ಅಗತ್ಯವಿರುವ ಪ್ರಮುಖವಾದ ಗಂಭೀರ ಅಪರಾಧಗಳು ಆರ್ಥಿಕ ಮತ್ತು ಹಣಕಾಸಿನ ಅಪರಾಧಗಳ ತನಿಖೆ ನಡೆಸಿ ಅಪರಾಧಿಗಳನ್ನು ಪತ್ತೆಹಚ್ಚುವುದು ಇದರ ಉದ್ದೇಶವಾಗಿದೆ. ಎ. ಹೇಳಿಕೆ ಎ ಮಾತ್ರ ಸರಿಯಾಗಿದೆ. ಬಿ. ಹೇಳಿಕೆ ಬಿ ಮಾತ್ರ ಸರಿಯಾಗಿದೆ. ಸಿ. ಮೇಲಿನ ಎರಡೂ ಹೇಳಿಕೆಗಳು ಸರಿಯಾಗಿವೆ. ಡಿ. ಮೇಲಿನ ಯಾವ ಹೇಳಿಕೆಗಳೂ ಸರಿಯಾಗಿಲ್ಲ. ಉತ್ತರ: ಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.